ಈ ಐಫೋನ್ ಫ್ಯಾಕ್ಟರಿಯಲ್ಲಿ ವಿವಾಹಿತ ಮಹಿಳೆಯರಿಗೆ ಇಲ್ಲವಾ ಕೆಲಸ? ತಮಿಳುನಾಡಿನ ಫಾಕ್ಸ್​​ಕಾನ್ ಘಟಕದಲ್ಲಿ ಕೆಲಸಕ್ಕಾಗಿ ಮಹಿಳೆಯರ ಪರದಾಟ

Apple supplier Foxconn's Tamil Nadu Unit says no to married women: ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿರುವ ಫಾಕ್ಸ್​ಕಾನ್ ಘಟಕದಲ್ಲಿ ವಿವಾಹಿತ ಮಹಿಳೆಯರನ್ನು ನೇಮಕಾತಿ ಮಾಡಿಕೊಳ್ಳುವುದಿಲ್ಲವಂತೆ. ಹಾಗಂತ ಅಘೋಷಿತ ನಿಯಮ ಅಲ್ಲಿ ಜಾರಿಯಲ್ಲಿರುವ ಸಂಗತಿಯನ್ನು ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ತನಿಖಾ ವರದಿಯಲ್ಲಿ ಬಯಲಿಗೆ ಎಳೆದಿದೆ. ಮದುವೆಯಾದ ಬಳಿಕ ಗರ್ಭ ಧರಿಸುವುದು, ಮಗು ಮಾಡಿಕೊಳ್ಳುವುದು ಇತ್ಯಾದಿ ಕಾರಣಕ್ಕೆ ಮಹಿಳೆಯರ ಹಾಜರಾತಿ ಕಡಿಮೆಗೊಳ್ಳುತ್ತದೆ ಎಂಬ ಕಾರಣಕ್ಕೆ ಅವರ ನೇಮಕಾತಿ ನಡೆಯುವುದಿಲ್ಲ ಎಂದು ಹೇಳಲಾಗಿದೆ.

ಈ ಐಫೋನ್ ಫ್ಯಾಕ್ಟರಿಯಲ್ಲಿ ವಿವಾಹಿತ ಮಹಿಳೆಯರಿಗೆ ಇಲ್ಲವಾ ಕೆಲಸ? ತಮಿಳುನಾಡಿನ ಫಾಕ್ಸ್​​ಕಾನ್ ಘಟಕದಲ್ಲಿ ಕೆಲಸಕ್ಕಾಗಿ ಮಹಿಳೆಯರ ಪರದಾಟ
ಫಾಕ್ಸ್​ಕಾನ್ ಕಂಪನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 25, 2024 | 6:40 PM

ಚೆನ್ನೈ, ಜೂನ್ 25: ತಮಿಳುನಾಡಿನಲ್ಲಿರುವ ಫಾಕ್ಸ್​ಕಾನ್ ಕಂಪನಿಯ ಘಟಕದಲ್ಲಿ (foxconn unit) ವಿವಾಹಿತ ಮಹಿಳೆಯರಿಗೆ ಕೆಲಸ ಅವಕಾಶ ನಿರಾಕರಿಸಲಾಗಿದೆ ಎನ್ನುವಂತಹ ಸುದ್ದಿ ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಆ್ಯಪಲ್ ಕಂಪನಿಗೆ ಐಫೋನ್ ಅಸೆಂಬಲ್ ಮಾಡಿಕೊಡುವ ಫಾಕ್ಸ್​ಕಾನ್​ನ ಶ್ರೀಪೆರಂಬದೂರು ಫ್ಯಾಕ್ಟರಿಯಲ್ಲಿ ಈ ಅಘೋಷಿತ ನಿಯಮ ಜಾರಿಯಲ್ಲಿರುವುದು ತಿಳಿದುಬಂದಿದೆ. ರಾಯ್ಟರ್ಸ್ ಸುದ್ದಿ ಸಂಸ್ಥೆ ಈ ಬಗ್ಗೆ ತನಿಖಾ ವರದಿ ಬಿಡುಗಡೆ ಮಾಡಿದೆ. ಫಾಕ್ಸ್​ಕಾನ್​ನ ಮಾಜಿ ಎಚ್ಆರ್ ಎಕ್ಸಿಕ್ಯೂಟಿವ್ ಎಸ್ ಪೌಲ್ ಎಂಬುವವರೂ ಐಫೋನ್ ಘಟಕದಲ್ಲಿ ವಿವಾಹಿತ ಮಹಿಳೆಯರನ್ನು (married women) ಕೆಲಸಕ್ಕೆ ಸೇರಿಸಿಕೊಳ್ಳದೇ ಇರುವುದು ಹಾಗೂ ಇತರ ಕೆಲ ನಿರ್ಬಂಧಗಳು ಇರುವುದನ್ನು ಖಚಿತಪಡಿಸಿದ್ದಾರೆ.

ವಿವಾಹಿತ ಮಹಿಳೆಯರಿಗೆ ಕೆಲಸ ನಿರಾಕರಿಸಲು ಇವು ಕಾರಣಗಳು…

  • ವಿವಾಹದ ಬಳಿಕ ಮಹಿಳೆಯರಿಗೆ ಹಲವು ಸಮಸ್ಯೆಗಳು ಬರುತ್ತವೆ. ಇದರಿಂದ ಹಾಜರಾತಿ ಕಡಿಮೆ ಇರುತ್ತದೆ
  • ಮದುವೆಯ ಬಳಿಕ ಗರ್ಭ ಧರಿಸುವುದು, ಮಗು ಮಾಡಿಕೊಳ್ಳುವುದರಿಂದ ಹಾಜರಾತಿ ಕಡಿಮೆ ಆಗುತ್ತದೆ.
  • ವಿವಾಹಿತ ಮಹಿಳೆಯರಿಗೆ ಕೌಟುಂಬಿಕ ಜವಾಬ್ದಾರಿ ಹೆಚ್ಚಿರುತ್ತದೆ. ಈ ಕಾರಣಕ್ಕೆ ರಜೆ ಹಾಕುವ ಪ್ರಮಾಣ ಹೆಚ್ಚೇ ಇರುತ್ತದೆ.

ಇದನ್ನೂ ಓದಿ: ಸೋಲಾರ್ ಸೆಲ್​ಗೆ ಚೀನಾ ಮೇಲೆ ಅವಲಂಬನೆ ಇನ್ಮುಂದೆ ಕಡಿಮೆ; ಸ್ವಾವಲಂಬನೆ ಹಾದಿಯಲ್ಲಿ ಭಾರತ

ತಮಿಳುನಾಡಿನಲ್ಲಿರುವ ಹಿಂದೂ ವಿವಾಹಿತ ಮಹಿಳೆಯರ ಕತ್ತಿನಲ್ಲಿ ತಾಳಿಸರ ಇದ್ದೇ ಇರುತ್ತದೆ. ಇದನ್ನು ತೆಗೆಯುವುದು ಅಪಶಕುನ ಎಂಬ ಭಾವನೆ ಇದೆ. ಆದರೆ, ಈ ಆಭರಣ ಧರಿಸುವುದರಿಂದ ಐಫೋನ್ ತಯಾರಿಕೆಯ ಕಾರ್ಯಗಳಿಗೆ ತೊಂದರೆ ಆಗುತ್ತದೆ. ಈ ಕಾರಣಕ್ಕೂ ವಿವಾಹಿತ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲು ಫಾಕ್ಸ್​ಕಾನ್ ಸಂಸ್ಥೆ ಹಿಂದೇಟು ಹಾಕುತ್ತದೆ ಎಂದು ಹೇಳಲಾಗುತ್ತಿದೆ.

ಫಾಕ್ಸ್​ಕಾನ್​ನ ಮಾಜಿ ಎಚ್​ಆರ್ ಎಕ್ಸಿಕ್ಯೂಟಿವ್ ಎಸ್ ಪೌಲ್ ಅವರು ಮಾತ್ರವಲ್ಲ, ಇನ್ನೂ ಕೆಲ ಮಾಜಿ ಉದ್ಯೋಗಿಗಳು ಈ ನಿರ್ಬಂಧ ಇರುವುದನ್ನು ದೃಢಪಡಿಸಿದ್ದಾರೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ಹೇಳಿದೆ. ಫಾಕ್ಸ್​ಕಾನ್ ಘಟಕಕ್ಕೆ ಆಭ್ಯರ್ಥಿಗಳನ್ನು ಆರಿಸಿ ಇಂಟರ್​ವ್ಯೂಗೆ ಕಳುಹಿಸಲು ಹೈರಿಂಗ್ ಏಜೆನ್ಸಿಗಳಿಗೆ ಗುತ್ತಿಗೆ ಕೊಟ್ಟಿರಲಾಗುತ್ತದೆ. ಈ ಏಜೆನ್ಸಿಗಳಿಗೆ ಮೌಖಿಕವಾಗಿ ನಿರ್ಬಂಧದ ಬಗ್ಗೆ ಸೂಚನೆ ನೀಡಲಾಗಿರುತ್ತದೆ. ಅಲ್ಲಿಂದಲೇ ಅಭ್ಯರ್ಥಿಗಳನ್ನು ಫಿಲ್ಟರ್ ಮಾಡಲಾಗುತ್ತದೆ.

ಇದನ್ನೂ ಓದಿ: ಝೀರೋ ಬ್ಯಾಲನ್ಸ್ ಇರುವ ಪೇಟಿಎಂ ವ್ಯಾಲಟ್​ಗಳು ಬಂದ್ ಆಗಲಿವೆ, ಗಮನಿಸಿ

ದೇಶದ ಕಾನೂನು, ಆ್ಯಪಲ್ ಮತ್ತು ಫಾಕ್ಸ್​ಕಾನ್ ನೀತಿಗಳಿಗೂ ಇದು ವಿರುದ್ಧ

ನೇಮಕಾತಿಯಲ್ಲಿ ವೈವಾಹಿಕ ಸ್ಥಿತಿ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ಭಾರತದ ಕಾನೂನು ನಿರ್ಬಂಧಿಸುತ್ತದೆ. ಆ್ಯಪಲ್ ಸಂಸ್ಥೆಯಾಗಲೀ, ಫಾಕ್ಸ್​ಕಾನ್ ಸಂಸ್ಥೆಯಾಗಲೀ ಈ ನೀತಿ ಹೊಂದಿಲ್ಲ. ಅವುಗಳ ಸಪ್ಲೈ ಚೈನ್​ನಲ್ಲೂ ಇಂಥದ್ದು ಇರದಂತೆ ನಿಗಾ ವಹಿಸುತ್ತವೆ ಆ ಕಂಪನಿಗಳು. ಆದರೂ ಕೂಡ ಶ್ರೀಪೆರಂಬದರೂರಿನಲ್ಲಿರುವ ಫಾಕ್ಸ್​ಕಾನ್ ಘಟಕದಲ್ಲಿ ವಿವಾಹಿತ ಮಹಿಳೆಯರಿಗೆ ಕೆಲಸ ನಿರಾಕರಿಸುವ ಪದ್ಧತಿಯೊಂದು ಅಘೋಷಿತವಾಗಿ ಚಾಲನೆಯಲ್ಲಿದ್ದಂತಿದೆ. ಈ ಬಗ್ಗೆ ಆ ಘಟಕದ ವತಿಯಿಂದ ಯಾವ ಅಧಿಕೃತ ಹೇಳಿಕೆ ಬಂದಿರುವುದು ಈವರೆಗೆ ಗೊತ್ತಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ