AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm Wallet: ಝೀರೋ ಬ್ಯಾಲನ್ಸ್ ಇರುವ ಪೇಟಿಎಂ ವ್ಯಾಲಟ್​ಗಳು ಬಂದ್ ಆಗಲಿವೆ, ಗಮನಿಸಿ

Zero balance wallets closing down: ಪೇಟಿಎಂನಲ್ಲಿರುವ ಕೆಲ ವ್ಯಾಲಟ್​ಗಳು ಜುಲೈ 20ಕ್ಕೆ ಬಂದ್ ಆಗಲಿವೆ. ಆರ್​ಬಿಐ ಮಾರ್ಗಸೂಚಿ ಪ್ರಕಾರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ವ್ಯಾಲಟ್​ಗಳನ್ನು ಮುಚ್ಚುತ್ತಿದೆ. ಮೊದಲಿಗೆ ಕಳೆದ ಒಂದು ವರ್ಷದಿಂದ ಶೂನ್ಯ ಬ್ಯಾಲನ್ಸ್ ಹೊಂದಿರುವ ವ್ಯಾಲಟ್​ಗಳನ್ನು ಬಂದ್ ಮಾಡಲಿದೆ. ಹಣ ಇರುವ ವ್ಯಾಲಟ್​ಗಳಿಗೆ ಏನೂ ಆಗುವುದಿಲ್ಲ. ಆ ಹಣ ಖಾಲಿಯಾಗುವವರೆಗೂ ಬಳಸಲಡ್ಡಿ ಇಲ್ಲ.

Paytm Wallet: ಝೀರೋ ಬ್ಯಾಲನ್ಸ್ ಇರುವ ಪೇಟಿಎಂ ವ್ಯಾಲಟ್​ಗಳು ಬಂದ್ ಆಗಲಿವೆ, ಗಮನಿಸಿ
ಪೇಟಿಎಂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 25, 2024 | 11:16 AM

Share

ನವದೆಹಲಿ, ಜೂನ್ 25: ಆರ್​ಬಿಐನಿಂದ ನಿರ್ಬಂಧಕ್ಕೆ ಒಳಗಾಗಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (PPBL) ಸಂಸ್ಥೆ ತನ್ನಲ್ಲಿರುವ ನಿಷ್ಕ್ರಿಯ ಖಾತೆಗಳನ್ನು (inactive accounts) ಮುಚ್ಚುತ್ತಿದೆ. ಈ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಯಾವುದೇ ವಹಿವಾಟು ಕಾಣದ ಹಾಗೂ ಶೂನ್ಯ ಬ್ಯಾಲನ್ಸ್ ಇರುವ ವ್ಯಾಲಟ್​ಗಳನ್ನು (Zero balance wallet) ಬಂದ್ ಮಾಡಲಿದೆ. ಜುಲೈ 19ರಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಈ ಸಂಬಂಧ ಪ್ರಕಟಣೆ ಹೊರಡಿಸಿದೆ. 2024ರ ಜುಲೈ 20ಕ್ಕೆ ಈ ವ್ಯಾಲಟ್​ಗಳು ಅಸ್ತಿತ್ವದಲ್ಲಿ ಇರುವುದಿಲ್ಲ.

ಪೇಟಿಎಂ ಬಳಕೆದಾರರಿಗೆ ತೊಡಕೇನಿಲ್ಲ…

ಪೇಟಿಎಂ ಆ್ಯಪ್​ನಲ್ಲಿ ಇರುವ ವ್ಯಾಲಟ್​ಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಖಾತೆಯನ್ನು ಬಳಸಲಾಗುತ್ತಿತ್ತು. ಪಿಪಿಬಿಎಲ್ ಅನ್ನು ಆರ್​ಬಿಐ ನಿರ್ಬಂಧಿಸಿದ್ದರಿಂದ ವ್ಯಾಲಟ್ ಕೂಡ ನಿರ್ಬಂಧಿತವಾಗಿದೆ. ಪಿಪಿಬಿಎಲ್ ಅಕೌಂಟ್​ಗೆ ಹೇಗೆ ಹಣ ಡೆಪಾಸಿಟ್ ಇಡಲು ಆಗುವುದಿಲ್ಲವೋ, ವ್ಯಾಲಟ್​ಗೂ ಹಣ ಜಮೆ ಮಾಡಲು ಆಗುವುದಿಲ್ಲ.

ಇದನ್ನೂ ಓದಿ: ಬಜೆಟ್​ನಲ್ಲಿ ತೆರಿಗೆ ಪಾವತಿದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಿಸುವ ಸಾಧ್ಯತೆ; ಏನಿದು ಡಿಡಕ್ಷನ್?

ಈ ಮೊದಲೇ ವ್ಯಾಲಟ್​ನಲ್ಲಿ ಹಣ ಇದ್ದರೆ ಅದನ್ನು ಅನಿರ್ಬಂಧಿತವಾಗಿ ಬಳಸಬಹುದು. ನಿಮ್ಮ ಬ್ಯಾಂಕ್ ಖಾತೆಗೆ ಆ ಹಣ ವರ್ಗಾಯಿಸಬಹುದು. ಅಥವಾ ಪೇಮೆಂಟ್ ಮಾಡಬಹುದು. ನೀವು ಅದನ್ನು ಪೂರ್ಣವಾಗಿ ಖಾಲಿ ಮಾಡುವವರೆಗೂ ಆ ವ್ಯಾಲಟ್ ಅಸ್ತಿತ್ವದಲ್ಲಿ ಇರುತ್ತದೆ.

ಈಗ ಕಳೆದ ಒಂದು ವರ್ಷದಿಂದ ಶೂನ್ಯ ಬ್ಯಾಲನ್ಸ್​ನಲ್ಲಿ ಇರುವ ವ್ಯಾಲಟ್​ಗಳನ್ನು ಮಾತ್ರವೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮುಚ್ಚುತ್ತಿದೆ. ಹೀಗಾಗಿ, ಯಾವ ಪೇಟಿಎಂ ಬಳಕೆದಾರರು ಚಿಂತೆ ಪಡುವ ಅಗತ್ಯ ಇಲ್ಲ. ನೀವೇ ಸ್ವತಃ ವ್ಯಾಲಟ್ ಮುಚ್ಚಲು ಅವಕಾಶ ಇದೆ. ಅದರ ಕ್ರಮ ಈ ಕೆಳಕಂಡಂತಿದೆ:

  • ಮೊದಲಿಗೆ ಪೇಟಿಎಂ ಆ್ಯಪ್ ತೆರೆದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವ್ಯಾಲಟ್ ಸೆಕ್ಷನ್​ಗೆ ಹೋಗಿ
  • ‘ನೀಡ್ ಹೆಲ್ಪ್ ವಿತ್ ನಾನ್-ಆರ್ಡರ್ ರಿಲೇಟೆಡ್ ಕ್ವೀರೀಸ್’ ಕ್ಲಿಕ್ ಮಾಡಿ
  • ‘ಐ ವಾಂಟ್ ಟು ಕ್ಲೋಸ್ ಮೈ ವ್ಯಾಲಟ್’ ಅನ್ನು ಆಯ್ದುಕೊಳ್ಳಿ.

ಇದನ್ನೂ ಓದಿ: ಜುಲೈ 1ರಿಂದ ಫೋನ್ ಪೆ, ಕ್ರೆಡ್​ನಲ್ಲಿ ಕೆಲ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಆಗಲ್ಲ; ಕಾರಣ ಇದು…

ನಿಮ್ಮ ವ್ಯಾಲಟ್ ಎರಡು ಕಾರ್ಯದಿನಗಳಲ್ಲಿ ಮುಚ್ಚಲ್ಪಡುತ್ತದೆ. ಆದರೆ, ಈ ಪ್ರಕ್ರಿಯೆಗೆ ಮುನ್ನ ನಿಮ್ಮ ವ್ಯಾಲಟ್​ನಲ್ಲಿ ಹಣ ಇದ್ದರೆ ಅದನ್ನು ತಪ್ಪದೇ ಬಳಸಿಕೊಳ್ಳಿ.

ನಿಮ್ಮದು ಕನಿಷ್ಠ ಕೆವೈಸಿ ಇರುವ ವ್ಯಾಲಟ್ ಆಗಿದ್ದರೆ ಅದಲ್ಲಿರುವ ಹಣವನ್ನು ಮರ್ಚಂಟ್ಸ್ ಪೇಮೆಂಟ್​ಗೆ ಮಾತ್ರ ಬಳಸಬಹುದು. ಪೂರ್ತಿಯಾಗಿ ಕೆವೈಸಿ ಅಪ್​ಡೇಟ್ ಇರುವಂತಹ ವ್ಯಾಲಟ್ ಆಗಿದ್ದರೆ ಆ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More