ರೈಲ್ವೆ ಇಲಾಖೆಯಿಂದ ಸಿಹಿಸುದ್ದಿ: ಎಸಿ ಕ್ಲಾಸ್​​​ನಲ್ಲಿ ಪ್ರಯಾಣಿಸುವ RAC ಪ್ರಯಾಣಿಕರಿಗೆ ಸಂಪೂರ್ಣ ಬೆಡ್ ರೋಲ್ ಕಿಟ್

Railway Department: ಇನ್ನು ಮುಂದೆ ಆರ್​​​​ಎಸಿ ಪ್ರಯಾಣಿಕರಿಗೂ ಪ್ರತ್ಯೇಕ ಬೆಡ್ ರೋಲ್ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರೈಲ್ವೆ ಮಂಡಳಿಯಿಂದ ಎಲ್ಲಾ ವಲಯ ರೈಲ್ವೆ ಮತ್ತು IRCTC ಅಧಿಕಾರಿಗಳಿಗೆ ಪತ್ರವನ್ನು ಕಳುಹಿಸಲಾಗಿದೆ. ಎಸಿ ಕ್ಲಾಸ್‌ನಲ್ಲಿ (ಎಸಿ ಚೇರ್ ಕಾರ್ ಹೊರತುಪಡಿಸಿ) ಪ್ರಯಾಣಿಸುವ ಆರ್‌ಎಸಿ ಪ್ರಯಾಣಿಕರಿಗೆ ಹೊದಿಕೆ, ಬೆಡ್ ಶೀಟ್ ಮತ್ತು ಟವೆಲ್, ದಿಂಬು ಸೇರಿದಂತೆ ಸಂಪೂರ್ಣ ಬೆಡ್ ರೋಲ್ ಕಿಟ್ ನೀಡಲು ನಿರ್ಧರಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ರೈಲ್ವೆ ಇಲಾಖೆಯಿಂದ ಸಿಹಿಸುದ್ದಿ: ಎಸಿ ಕ್ಲಾಸ್​​​ನಲ್ಲಿ ಪ್ರಯಾಣಿಸುವ RAC ಪ್ರಯಾಣಿಕರಿಗೆ ಸಂಪೂರ್ಣ ಬೆಡ್ ರೋಲ್ ಕಿಟ್
Follow us
ಅಕ್ಷಯ್​ ಪಲ್ಲಮಜಲು​​
| Updated By: Digi Tech Desk

Updated on:Jan 22, 2024 | 11:38 AM

ಭಾರತೀಯ ರೈಲ್ವೆ ಇಲಾಖೆ (Railway Department) ಒಂದು ಮಹತ್ವ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ಪ್ರಯಾಣಿಕರಿಗೆ ಒಂದು ರೀತಿಯಲ್ಲಿ ಸಿಹಿಸುದ್ದಿಯಾಗಿದೆ. ಈಗಾಗಲೇ ರೈಲ್ವೆಯಲ್ಲಿ ಅನೇಕ ಸುಧಾರಣೆಗಳನ್ನು ತರಲಾಗಿದೆ. ಇದೀಗ ಕೇಂದ್ರ ರೈಲ್ವೆ ಇಲಾಖೆ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಅನೇಕರು ದೂರು ಊರಿಗೆ ಹೋಗಲು ಕಾಯ್ದಿರಿಸಿದ ಸೀಟಿ​​​ಗಾಗಿ ಮೊದಲೇ ಟಿಕೆಟ್​​​ ಬುಕ್​​ ಮಾಡುತ್ತಾರೆ. ಇನ್ನು ಈ ಟಿಕೆಟ್​​​ ಒಂದು ವಾರದ ಮೊದಲು, ಇನ್ನೂ ಕೆಲವು ಬಾರಿ ಒಂದು ತಿಂಗಳ ಮೊದಲೇ ಬುಕ್​​​​ ಮಾಡಬೇಕು. ಕೊನೆಗೆ ಕಾಯ್ದಿರಿಸಿದ ಟಿಕೆಟ್​​​ (Reserved seat) ಸಿಗದಿದ್ದರೆ. ಆರ್​​ಎಸಿ (Reservation Against Cancellation) ಬುಕ್​​ ಮಾಡುತ್ತಾರೆ. ಆರ್​​ಎಸಿ ಸೀಟನ್ನು ಇಬ್ಬರಿಗೆ ನೀಡಲಾಗಿರುತ್ತದೆ. ಒಂದು ಸೀಟ್​​​​​ನಲ್ಲಿ ಇಬ್ಬರು ಪ್ರಯಾಣಿಸಬೇಕು. ಅದು ಎಷ್ಟು ಕಿರಿಕಿರಿ ಎಂದರೆ ಅಯ್ಯೋ ಅದನ್ನು ಹೇಳಲು ಸಾಧ್ಯವಿಲ್ಲ. ಅದು ಕೂಡ ಹಗಲು ಹೊತ್ತು ಏನೋ ಪರವಾಗಿಲ್ಲ. ಆದರೆ ರಾತ್ರಿ ಹೊತ್ತು ದೊಡ್ಡ ಹಿಂಸೆಯಾಗಿರುತ್ತದೆ. ಅದಕ್ಕಾಗಿ ಈ ಕಿರಿಕಿರಿಯನ್ನು ತಪ್ಪಿಸಲು ಕೇಂದ್ರ ರೈಲ್ವೆ ಇಲಾಖೆ ದೊಡ್ಡ ಬದಲಾವಣೆಯನ್ನು ತಂದಿದೆ.

ಇನ್ನು ಮುಂದೆ ಆರ್​​​​ಎಸಿ ಪ್ರಯಾಣಿಕರಿಗೂ ಪ್ರತ್ಯೇಕ ಬೆಡ್ ರೋಲ್ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರೈಲ್ವೆ ಮಂಡಳಿಯಿಂದ ಎಲ್ಲಾ ವಲಯ ರೈಲ್ವೆ ಮತ್ತು IRCTC ಅಧಿಕಾರಿಗಳಿಗೆ ಪತ್ರವನ್ನು ಕಳುಹಿಸಲಾಗಿದೆ. ಎಸಿ ಕ್ಲಾಸ್‌ನಲ್ಲಿ (ಎಸಿ ಚೇರ್ ಕಾರ್ ಹೊರತುಪಡಿಸಿ) ಪ್ರಯಾಣಿಸುವ ಆರ್‌ಎಸಿ ಪ್ರಯಾಣಿಕರಿಗೆ ಹೊದಿಕೆ, ಬೆಡ್ ಶೀಟ್ ಮತ್ತು ಟವೆಲ್, ದಿಂಬು ಸೇರಿದಂತೆ ಸಂಪೂರ್ಣ ಬೆಡ್ ರೋಲ್ ಕಿಟ್ ನೀಡಲು ನಿರ್ಧರಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಗುಜರಿ ಮಾರಾಟದಿಂದ ರೈಲ್ವೆ ಇಲಾಖೆಗೆ 6 ತಿಂಗಳಲ್ಲಿ 2,582 ಕೋಟಿ ರೂ. ಆದಾಯ!

ಎಸಿ ಕ್ಲಾಸ್​​​ನಲ್ಲಿ ಪ್ರಯಾಣಿಸುವ ಆರ್‌ಎಸಿ ಪ್ರಯಾಣಿಕರಿಗೆ ಬೆಡ್‌ರೋಲ್ ಶುಲ್ಕವನ್ನು ನಿಗದಿಪಡಿಸಿ, ಟಿಕೆಟ್​​​​ ನೀಡಲಾಗುವುದು ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. RAC ಪ್ರಯಾಣಿಕರು ಕೂಡ ಇತರ ಕಾಯ್ದಿರಿಸಿದ ಪ್ರಯಾಣಿಕರಂತೆ ಪ್ರಯಾಣಿಸಬಹುದು ಎಂದು ಹೇಳಿದೆ. ಇದರಿಂದ RAC ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Tue, 26 December 23

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?