ಪಾನೀಯ-ಗುಟ್ಕಾ ಕಲೆಗಳನ್ನು ಸ್ವಚ್ಛಗೊಳಿಸಲು 1200 ಕೋಟಿ ರೂ. ಖರ್ಚು: ರೈಲ್ವೆ ಇಲಾಖೆ ವರದಿ

Gutka stains on train: ರೈಲ್ವೆ ಪ್ಲಾಟ್‌ಫಾರ್ಮ್​​ಗಳಲ್ಲಿ ಹಾಗೂ ರೈಲಿನ ಒಳಗೆ ಕೂತು ಕೆಲವರು ಉಗುಳುತ್ತಾರೆ. ಇಂತಹ ಕಲೆಗಳನ್ನು ತೆಗೆಯಲು ರೈಲ್ವೆ ಇಲಾಖೆ ಎಷ್ಟು ಖರ್ಚು ಮಾಡುತ್ತದೆ ಗೊತ್ತಾ? ರೈಲ್ವೆ ಮೂಲಗಳ ಪ್ರಕಾರ, ಪ್ರತಿ ವರ್ಷ ಗ್ಯಾಲನ್ ಮತ್ತು ಗುಟ್ಕಾ ಕಲೆಗಳನ್ನು ಸ್ವಚ್ಛಗೊಳಿಸಲು 1200 ಕೋಟಿ ರೂ. ಖರ್ಚು ಮಾಡಲಾಗುತ್ತದೆ.

ಪಾನೀಯ-ಗುಟ್ಕಾ ಕಲೆಗಳನ್ನು ಸ್ವಚ್ಛಗೊಳಿಸಲು 1200 ಕೋಟಿ ರೂ. ಖರ್ಚು: ರೈಲ್ವೆ ಇಲಾಖೆ ವರದಿ
ಸಾಂದರ್ಭಿಕ ಚಿತ್ರ
Follow us
|

Updated on: Nov 21, 2023 | 7:07 PM

ಭಾರತದಲ್ಲಿ ಗುಟ್ಕಾ (Gutka) ತಿನ್ನುವವರ ಸಂಖ್ಯೆ ಹೆಚ್ಚು. ತಿಂದರೆ ಪರವಾಗಿಲ್ಲ ಆದರೆ ಬೇಕಾಬಿಟ್ಟಿ ಎಲ್ಲೆಂದರಲ್ಲಿ ಉಗುಳಬಾರದು. ಮೊದಲಾಗಿ ಗುಟ್ಕಾ ತಿನ್ನುವುದೇ ದೊಡ್ಡ ತಪ್ಪು. ಅದರೂ ಕೆಲವರಿಗೆ ಅದು ಅಭ್ಯಾಸವಾಗಿರುತ್ತದೆ. ಗುಟ್ಕಾ ತಿಂದು ಹೆಚ್ಚಾಗಿ ಎಲ್ಲೆಂದರಲ್ಲಿ ಉಗಿಯುವುದು ಕಂಡು ಬರುವುದು ಒಂದು ಬಸ್​​​ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣ. ಈ ರೈಲು ನಿಲ್ದಾಣಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ಕಂಡು ಬರುತ್ತದೆ. ರೈಲ್ವೆ ಪ್ಲಾಟ್‌ಫಾರ್ಮ್​​ಗಳಲ್ಲಿ ಹಾಗೂ ರೈಲಿನ ಒಳಗೆ ಕೂತು ಕೆಲವರು ಉಗುಳುತ್ತಾರೆ. ಇಂತಹ ಕಲೆಗಳನ್ನು ತೆಗೆಯಲು ರೈಲ್ವೆ ಇಲಾಖೆ ಎಷ್ಟು ಖರ್ಚು ಮಾಡುತ್ತದೆ ಗೊತ್ತಾ? ರೈಲ್ವೆ ಮೂಲಗಳ ಪ್ರಕಾರ, ಪ್ರತಿ ವರ್ಷ ಗ್ಯಾಲನ್ ಮತ್ತು ಗುಟ್ಕಾ ಕಲೆಗಳನ್ನು ಸ್ವಚ್ಛಗೊಳಿಸಲು 1200 ಕೋಟಿ ರೂ. ಖರ್ಚು ಮಾಡಲಾಗುತ್ತದೆ.

ಇಂತಹ ಅಜ್ಞಾನಿ ಜನರಿಂದ ರೈಲ್ವೆ ಇಲಾಖೆಗೆ 1200 ಕೋಟಿ ರೂ. ಹೊರೆ ಬೀಳುತ್ತಾದೆ. ರೈಲು ನಿಲ್ದಾಣವಾಗಲಿ, ರೈಲಿನಾಗಲಿ ಗುಟ್ಕಾ-ಪಾನ್ ಕಲೆಗಳು ರೈಲಿನ ಸೌಂದರ್ಯವನ್ನು ಹಾಳು ಮಾಡುವುದಲ್ಲದೆ, ಪರಿಸರವನ್ನು ಕೊಳಕು ಮಾಡುತ್ತವೆ. ಇದನ್ನು ನಿರ್ವಹಿಸಲು, ರೈಲ್ವೆ ಇಲಾಖೆ ಈ ಬಗ್ಗೆ ಹೆಚ್ಚು ಗಮನ ನೀಡುತ್ತದೆ ಹಾಗೂ ಅದಕ್ಕಾಗಿ ರೈಲ್ವೇ ಅಪಾರ ಪ್ರಮಾಣದ ಹಣವನ್ನು ವ್ಯಯಿಸುತ್ತದೆ.

ಇದನ್ನೂ ಓದಿ:ಹೊಸ ಗುಟ್ಕಾ ಜಾಹೀರಾತಿನ ಬಗ್ಗೆ ಸ್ಪಷ್ಟನೆ ನೀಡಿದ ಅಕ್ಷಯ್ ಕುಮಾರ್

ಭಾರತದ ಅಂಗಡಿಗಳಲ್ಲಿ ಹಾಗೂ ಸಾವರ್ಜನಿಕ ಪ್ರದೇಶಗಳಲ್ಲಿ ಗುಟ್ಕಾ -ಪಾನ್​​ ಅಂಗಡಿಗಳನ್ನು ತೆಗೆಯುವುದು ಕಾನೂನು ಪ್ರಕಾರ ಅಪರಾಧ, ಆದರೆ ಇಂತಹ ವಿಚಾರಗಳ ಮೇಲೆ ಸ್ಥಳೀಯ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇನ್ನು ಗುಟ್ಕಾ -ಪಾನ್ ಪ್ಯಾಕ್​​ಗಳಲ್ಲೂ ಕೂಡ ಸೂಚನೆ ನೀಡಲಾಗಿದೆ. ಪ್ರತಿ ಸಾರ್ವಜನಿಕ ಪ್ರದೇಶಗಳಲ್ಲಿ ಗುಟ್ಕಾ -ಪಾನ್​ಗಳನ್ನು ಉಗುಳಬಾರದು ಎಂದು ಸೂಚನ ಫಲಕಗಳನ್ನು ಕೂಡ ಹಾಕಲಾಗಿದೆ. ಅದರೂ ಜನ ಈ ಬಗ್ಗೆ ಗಮನ ನೀಡದಿರುವುದು ದುರದೃಷ್ಟಕರ. ಇಂತಹ ಘಟನೆಗಳು ನಡೆಯದಂತೆ ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಇದಕ್ಕೆ ಒಂದು ಉದಾಹರಣೆ ಸಿಂಗಾಪುರ, ಅಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಗುಟ್ಕಾ -ಪಾನ್ ಉಗುಳುವವರಿಗೆ 80 ಸಾವಿರ ರೂ. ದಂಡ ಹಾಕಲಾಗುತ್ತದೆ. ಇಂತಹ ಕ್ರಮ ಭಾರತದಲ್ಲೂ ಬರಬೇಕು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ಸೈಟು ಹಂಚಿಕೆ: ಮುಡಾ ಆಯುಕ್ತರನ್ನು ಭೇಟಿ ಮಾಡಿದ ಮೈಸೂರು ಕಾಂಗ್ರೆಸ್ ಮುಖಂಡರು
ಸೈಟು ಹಂಚಿಕೆ: ಮುಡಾ ಆಯುಕ್ತರನ್ನು ಭೇಟಿ ಮಾಡಿದ ಮೈಸೂರು ಕಾಂಗ್ರೆಸ್ ಮುಖಂಡರು
ಭೈರತಿ ಸುರೇಶ್​ರನ್ನು ಮನಬಂದಂತೆ ಬೈದಾಡಿದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್
ಭೈರತಿ ಸುರೇಶ್​ರನ್ನು ಮನಬಂದಂತೆ ಬೈದಾಡಿದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್