AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಯಾಮಿಲಿ ಪೆನ್ಷನ್ ನೀತಿಯಲ್ಲಿ ಸುಧಾರಣೆ; ವಿಚ್ಛೇದಿತೆಯರು, ವಿಧವೆಯರು, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ

Women to benefit from reforms in family pension policies: ಮಹಿಳೆಯರಿಗೆ ಸಂಕಷ್ಟ ಸಂದರ್ಭಗಳಲ್ಲಿ ಬಲ ಸಿಗುವ ರೀತಿಯಲ್ಲಿ ಸರ್ಕಾರ ಪೆನ್ಷನ್ ಸ್ಕೀಮ್, ಮ್ಯಾಟರ್ನಿಟಿ ಲೀವ್ ಇತ್ಯಾದಿ ನೀತಿಗಳಲ್ಲಿ ಮಾರ್ಪಾಡು ತಂದಿದೆ. ವಿಚ್ಛೇದಿತ ಮಹಿಳೆಯರು ತಮ್ಮ ತಂದೆ ಅಥವಾ ತಾಯಿಯ ಪಿಂಚಣಿ ಸೌಲಭ್ಯ ಪಡೆಯಲು ಅವಕಾಶ ನೀಡಲಾಗಿದೆ. ವಿಧವೆಯರು ಮರುವಿವಾಹವಾದರೂ ತಮ್ಮ ಮೃತ ಪತಿಯ ಪಿಂಚಣಿ ಪಡೆಯಲು ಅವಕಾಶ ನೀಡಲಾಗಿದೆ.

ಫ್ಯಾಮಿಲಿ ಪೆನ್ಷನ್ ನೀತಿಯಲ್ಲಿ ಸುಧಾರಣೆ; ವಿಚ್ಛೇದಿತೆಯರು, ವಿಧವೆಯರು, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ
ಮಹಿಳೆಯರು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 19, 2025 | 11:47 AM

Share

ನವದೆಹಲಿ, ಮಾರ್ಚ್ 19: ಲಿಂಗ ಸಮಾನತೆ ಹೆಚ್ಚಿಸಲು ಮತ್ತು ಮಹಿಳೆಯರಿಗೆ ಹಣಕಾಸು ಸ್ವಾತಂತ್ರ್ಯ ಹೆಚ್ಚಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಕುಟುಂಬ ಪಿಂಚಣಿ ವ್ಯವಸ್ಥೆಯಲ್ಲಿ (family pension policies) ಸಾಕಷ್ಟು ಸುಧಾರಣೆಗಳನ್ನು ತಂದಿದೆ. ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಈ ಮಹಿಳೆಯರ ಉನ್ನತಿಗಾಗಿ ಸರ್ಕಾರಿ ತಂದಿರುವ ಕೆಲ ಪ್ರಮುಖ ಸುಧಾರಣಾ ಕ್ರಮಗಳ ಮಾಹಿತಿ ನೀಡಿದ್ದಾರೆ. ವಿಚ್ಛೇದಿತ ಹೆಣ್ಮಕ್ಕಳು, ವಿಧವೆಯರು, ಸಾಂಸಾರಿಕ ಬಿಕ್ಕಟ್ಟಿನಲ್ಲಿರುವ ಹೆಣ್ಮಕ್ಕಳು ಮೊದಲಾದವರಿಗೆ ಅನುಕೂಲವಾಗುವ ರೀತಿಯಲ್ಲಿ ಸುಧಾರಣೆಗಳನ್ನು ತಂದಿರುವುದು ತಿಳಿದುಬರುತ್ತದೆ.

ಗಂಡನಿಂದ ಬೇರ್ಪಟ್ಟ ಮತ್ತು ವಿಚ್ಛೇದಿತ ಹೆಣ್ಮಕ್ಕಳಿಗೆ ಹಣಕಾಸು ಭದ್ರತೆ

ಮದುವೆಯಾಗಿ ಗಂಡನಿಂದ ವಿಚ್ಛೇದನ (divorcee) ಪಡೆದ ಹೆಣ್ಮಕ್ಕಳು ಅಥವಾ ಗಂಡನಿಂದ ದೂರ ಇರುವ ಹೆಣ್ಮಕ್ಕಳು (separated daughters) ತಮ್ಮ ಮೃತ ಪೋಷಕರ ಫ್ಯಾಮಿಲಿ ಪೆನ್ಷನ್ ಪಡೆಯಬೇಕೆಂದರೆ ಸಾಕಷ್ಟು ಕಾನೂನು ಅಡೆತಡೆಗಳು ಇದ್ದುವು. ಈಗ ಈ ಕಾನೂನಿನಲ್ಲಿ ಸುಧಾರಣೆ ತರಲಾಗಿದೆ. ಪಿಂಚಣಿ ಪಡೆಯುತ್ತಿರುವವರು ಬದುಕಿರುವಾಗ ಅವರ ಹೆಣ್ಮಕ್ಕಳು ಗಂಡನಿಗೆ ಡಿವೋರ್ಸ್ ಅರ್ಜಿ ಸಲ್ಲಿಸಿದ್ದರೂ ಸಾಕು, ಫ್ಯಾಮಿಲಿ ಪೆನ್ಷನ್ ಪಡೆಯಲು ಅರ್ಹರಿರುತ್ತಾರೆ. ಮಹಿಳೆಯ ಸಂಕಷ್ಟ ಪರಿಸ್ಥಿತಿಯಲ್ಲಿ ಈ ಪಿಂಚಣಿ ಹಣ ಸಾಕಷ್ಟು ನೆರವಾಗಬಹುದು.

ಸಂತಾನಹೀನ ವಿಧವೆಯರಿಗೆ ಅನುಕೂಲ

ಸಂತಾನಹೀನ ವಿಧವೆಯರು ಮರುವಿವಾಹವಾದರೂ ಅವರ ಮೃತಪತಿಯ ಪಿಂಚಣಿ ಪಡೆಯುವುದನ್ನು ಮುಂದುವರಿಸಬಹುದು. ಆದರೆ, ಆಕೆ ಸ್ವತಂತ್ರವಾಗಿ ಗಳಿಸುವ ಆದಾಯವು ಕನಿಷ್ಠ ಪಿಂಚಣಿ ಮಟ್ಟಕ್ಕಿಂತ ಕಡಿಮೆ ಇದ್ದಿರಬೇಕು.

ಇದನ್ನೂ ಓದಿ
Image
ಏಪ್ರಿಲ್ 1ರಿಂದ ಹೊಸ ಟಿಡಿಎಸ್ ನಿಯಮಗಳು ಜಾರಿಗೆ
Image
ಚಿನ್ನದ ಬೆಲೆ ಇಳಿಕೆ ಯಾವಾಗ?
Image
ಬಡತನ ನಿವಾರಣೆಗೆ ಇನ್ಫೋಸಿಸ್ ಮೂರ್ತಿಗಳ ಸಲಹೆ ಇದು
Image
ಭಾರತದಲ್ಲಿ ಕೃಷಿ ಕ್ಷೇತ್ರಕ್ಕೆ ಪುಷ್ಟಿ ನೀಡುತ್ತಿರುವ ಡ್ರೋನ್ ಸ್ಕೀಮ್​ಗಳು

ಇದನ್ನೂ ಓದಿ: ಭಾರತೀಯ ರೈಲ್ವೆ ಗರಿಮೆ; ಯೂರೋಪ್, ಆಸ್ಟ್ರೇಲಿಯಾ, ಸೌದಿಗೆ ಭಾರತದಿಂದ ರೈಲ್ವೆ ಉಪಕರಣಗಳ ರಫ್ತು: ಅಶ್ವಿನಿ ವೈಷ್ಣವ್

ಕೌಟುಂಬಿಕ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರು

ಸಾಮಾನ್ಯವಾಗಿ ಪಿಂಚಣಿದಾರರು ಮಹಿಳೆ ಆಗಿದ್ದರೆ ಅವರ ಪಿಂಚಣಿಗೆ ಗಂಡನೇ ನಾಮಿನಿ ಆಗಿರುತ್ತಾರೆ. ಆದರೆ, ಪಿಂಚಣಿದಾರರು ತಮ್ಮ ಗಂಡನಿಗೆ ವಿಚ್ಛೇದನ ನೀಡಿದ್ದರೆ, ಅಥವಾ ನೀಡಲು ಮುಂದಾಗಿದ್ದರೆ, ತಮ್ಮ ಪಿಂಚಣಿಗೆ ಗಂಡನ ಬದಲು ಮಕ್ಕಳನ್ನು ನಾಮಿನೇಟ್ ಮಾಡಲಾಗುವಂತೆ ಕಾನೂನು ಮಾರ್ಪಾಡು ಮಾಡಲಾಗಿದೆ. ಸಾಂಸಾರಿಕ ಸಮಸ್ಯೆ ಎದುರಿಸುತ್ತಿರುವ ಮಹಿಳಾ ಪಿಂಚಣಿದಾರರಿಗೆ ಇದರಿಂದ ಹೆಚ್ಚು ಸ್ವಾತಂತ್ರ್ಯ ಸಿಕ್ಕುತ್ತದೆ.

ಒಂಟಿ ತಾಯಂದಿರಿಗೆ ಎರಡು ವರ್ಷ ರಜೆ

ಉದ್ಯೋಗದಲ್ಲಿರುವ ಹೆಚ್ಚಿನ ಮಹಿಳೆಯರು ಮನೆ ಮತ್ತು ಕಚೇರಿ ಎರಡೂ ಕಡೆ ಕೆಲಸ ಮಾಡುವ ಪರಿಸ್ಥಿತಿಯಲ್ಲಿರುವುದುಂಟು. ಅದರಲ್ಲೂ ಮಕ್ಕಳನ್ನು ಹೊಂದಿರುವ ಮಹಿಳಾ ಉದ್ಯೋಗಿಗಳಿಗೆ ಇದು ಇನ್ನೂ ಸಂಕೀರ್ಣ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಚೈಲ್ಡ್ ಕೇರ್ ಲೀವ್ ನೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಒಂಟಿಯಾಗಿರುವ ತಾಯಂದಿರು, ಅಂದರೆ ಗಂಡನಿಂದ ದೂರ ಇದ್ದು ಮಕ್ಕಳನ್ನು ನೋಡಿಕೊಳ್ಳುತ್ತಿರುವ ತಾಯಂದಿರು ಎರಡು ವರ್ಷಗಳಷ್ಟು ರಜೆಗಳನ್ನು ಪಡೆಯಲು ಅವಕಾಶ ಇದೆ. ಈ ರಜೆಯ ಅವಧಿಯಲ್ಲಿ ಅವರು ತಮ್ಮ ಮಕ್ಕಳೊಂದಿಗೆ ವಿದೇಶ ಪ್ರವಾಸಕ್ಕೂ ಹೋಗಬಹುದು.

ಇದನ್ನೂ ಓದಿ: New TDS rules: ಠೇವಣಿ, ಡಿವಿಡೆಂಡ್, ಬಾಡಿಗೆ ಇತ್ಯಾದಿ ಆದಾಯಗಳಿಗೆ ಹೊಸ ಟಿಡಿಎಸ್ ದರ; ಏಪ್ರಿಲ್ 1ರಿಂದ ಜಾರಿ

ಅಬಾರ್ಷನ್ ಆದರೂ ಮ್ಯಾಟರ್ನಿಟಿ ಸೌಲಭ್ಯ

ಮಹಿಳಾ ಉದ್ಯೋಗಿಗಳು ಮಗುವನ್ನು ಹೆತ್ತರೆ ಮ್ಯಾಟರ್ನಿಟಿ ಸೌಲಭ್ಯಗಳನ್ನು ನೀಡಲಾಗುತ್ತದೆ. ಒಂದು ವೇಳೆ ಆಕೆ ಹೆರುವ ಮಗು ಸತ್ತಿದ್ದರೆ ಆಗಲೂ ಕೂಡ ಆಕೆಗೆ ಪೇಯ್ಡ್ ಲೀವ್ ಇತ್ಯಾದಿ ಸಹಜವಾದ ಮ್ಯಾಟರ್ನಿಟಿ ಸೌಲಭ್ಯಗಳು ಸಿಗುವಂತೆ ಕಾನೂನು ಬದಲಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮರಳಿ ಶಾಸಕ ಸ್ಥಾನ ಸಿಕ್ಕಿದಕ್ಕೆ ಕಾಂಗ್ರೆಸ್​​ನ ರಾಜೇಗೌಡ ಫುಲ್ ಖುಷ್
ಮರಳಿ ಶಾಸಕ ಸ್ಥಾನ ಸಿಕ್ಕಿದಕ್ಕೆ ಕಾಂಗ್ರೆಸ್​​ನ ರಾಜೇಗೌಡ ಫುಲ್ ಖುಷ್
ಭಾರೀ ಕುತೂಹಲ ಮೂಡಿಸಿದ ತಮಿಳುನಾಡು ಸಿಎಂ ವಿಜಯ್- ಸ್ಟಾಲಿನ್ ಭೇಟಿ
ಭಾರೀ ಕುತೂಹಲ ಮೂಡಿಸಿದ ತಮಿಳುನಾಡು ಸಿಎಂ ವಿಜಯ್- ಸ್ಟಾಲಿನ್ ಭೇಟಿ
ಪ್ರಧಾನಿ ಮೋದಿ ಸಲಹೆ ಪಾಲಿಸದಿದ್ರೆ ದೇಶಕ್ಕೆ ಸಂಕಷ್ಟ ಎಂದ ರುದ್ರಮೂರ್ತಿ
ಪ್ರಧಾನಿ ಮೋದಿ ಸಲಹೆ ಪಾಲಿಸದಿದ್ರೆ ದೇಶಕ್ಕೆ ಸಂಕಷ್ಟ ಎಂದ ರುದ್ರಮೂರ್ತಿ
PM ಮೋದಿ 8 ಸಂದೇಶ ಯಾಕೆ? ಆರ್ಥಿಕ ತಜ್ಞ ರುದ್ರಮೂರ್ತಿ ಹೇಳಿದ್ದಿಷ್ಟು
PM ಮೋದಿ 8 ಸಂದೇಶ ಯಾಕೆ? ಆರ್ಥಿಕ ತಜ್ಞ ರುದ್ರಮೂರ್ತಿ ಹೇಳಿದ್ದಿಷ್ಟು
ಮೋದಿ ಸಾಗೋ ದಾರಿಯಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಕೇಸ್​: ತಮಿಳುನಾಡು ಲಿಂಕ್​?
ಮೋದಿ ಸಾಗೋ ದಾರಿಯಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಕೇಸ್​: ತಮಿಳುನಾಡು ಲಿಂಕ್​?
ಅಡುಗೆ ಎಣ್ಣೆ ಬೆಲೆ 3 ರೂ. ಏರಿಕೆ
ಅಡುಗೆ ಎಣ್ಣೆ ಬೆಲೆ 3 ರೂ. ಏರಿಕೆ
ಕಾನೂನು ಉಲಂಘಿಸಿ ರಸ್ತೆಯಲ್ಲಿ ಸಂಚಾರ ಮಾಡ್ತಿದ್ದ ಶಾಲಾ ವಾಹನಗಳು RTO ವಶಕ್ಕೆ
ಕಾನೂನು ಉಲಂಘಿಸಿ ರಸ್ತೆಯಲ್ಲಿ ಸಂಚಾರ ಮಾಡ್ತಿದ್ದ ಶಾಲಾ ವಾಹನಗಳು RTO ವಶಕ್ಕೆ
ಮುಂಬೈ ಇಂಡಿಯನ್ಸ್​ ಸೋಲಿಗೆ ಕಾರಣವಾಯ್ತು ಈ ಒಂದು 'ಎಡವಟ್ಟು'
ಮುಂಬೈ ಇಂಡಿಯನ್ಸ್​ ಸೋಲಿಗೆ ಕಾರಣವಾಯ್ತು ಈ ಒಂದು 'ಎಡವಟ್ಟು'
ಇತಿಹಾಸ ನಿರ್ಮಿಸಿದ ದಳಪತಿಗೆ ಸಿಎಂ ಸಿದ್ದರಾಮಯ್ಯ ವಿಶೇಷ ಅಭಿನಂದನೆ!
ಇತಿಹಾಸ ನಿರ್ಮಿಸಿದ ದಳಪತಿಗೆ ಸಿಎಂ ಸಿದ್ದರಾಮಯ್ಯ ವಿಶೇಷ ಅಭಿನಂದನೆ!
ತಿಂಗಳಾನುಗಟ್ಟಲೆ ಪೇಮೆಂಟ್ ಇಲ್ಲದೆ ಇಂದಿರಾ ಕ್ಯಾಂಟಿನ್ ಸಿಬ್ಬಂದಿ ಪರದಾಟ!
ತಿಂಗಳಾನುಗಟ್ಟಲೆ ಪೇಮೆಂಟ್ ಇಲ್ಲದೆ ಇಂದಿರಾ ಕ್ಯಾಂಟಿನ್ ಸಿಬ್ಬಂದಿ ಪರದಾಟ!