AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷೇರು ಮಾರುಕಟ್ಟೆಯ ಟ್ರೇಡಿಂಗ್ ಸಮಯದಲ್ಲಿ ಸಣ್ಣ ಪುಟ್ಟ ಬದಲಾವಣೆ; ಇಲ್ಲಿದೆ ಹೊಸ ವೇಳಾಪಟ್ಟಿ

Stock market trading timings change from 2026 August 1st: ಷೇರು ಬಜಾರಿನ ಇಂಟ್ರಾಡೆ, ಡಿರೈವೇಟಿವ್ಸ್ ಟ್ರೇಡಿಂಗ್​ಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ರೆಗ್ಯುಲರ್ ಷೇರು ವಹಿವಾಟು ಸಮಯ ಮಧ್ಯಾಹ್ನ 3:30ರವರೆಗೆ ಇರುತ್ತದೆ. ಇತರ ವಿವಿಧ ವಿಭಾಗಗಳಿಗೆ ಇರುವ ಸಮಯದಲ್ಲಿ ಬದಲಾವಣೆ ಇದೆ. ಎಫ್ ಅಂಡ್ ಒ ಕ್ಯಾಷ್ ಮಾರ್ಕೆಟ್​ನಲ್ಲಿ ನಿರಂತರ ಟ್ರೇಡಿಂಗ್ 3:15ಕ್ಕೆ ಮುಗಿಯುತ್ತದೆ. ಡೆರಿವೇಟಿವ್ಸ್​ಗೆ 10 ನಿಮಿಷ ಹೆಚ್ಚುವರಿ ಸಮಯ ಕೊಡಲಾಗಿದೆ.

ಷೇರು ಮಾರುಕಟ್ಟೆಯ ಟ್ರೇಡಿಂಗ್ ಸಮಯದಲ್ಲಿ ಸಣ್ಣ ಪುಟ್ಟ ಬದಲಾವಣೆ; ಇಲ್ಲಿದೆ ಹೊಸ ವೇಳಾಪಟ್ಟಿ
ಷೇರು ಮಾರುಕಟ್ಟೆImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 01, 2026 | 12:09 PM

Share

ನವದೆಹಲಿ, ಆಗಸ್ಟ್ 1: ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆ SEBI ಮತ್ತು NSE ಆಗಸ್ಟ್ 3, ಸೋಮವಾರದಿಂದ ಫ್ಯೂಚರ್ಸ್ ಮತ್ತು ಆಪ್ಷನ್ಸ್ (F&O) ವಿಭಾಗದ ಷೇರುಗಳಿಗೆ ಹೊಸ ವಹಿವಾಟು ಸಮಯ ಹಾಗೂ ಕ್ಲೋಸಿಂಗ್ ಆಕ್ಷನ್ ಸೆಷನ್ (CAS) ಸಿಸ್ಟಂ ಅನ್ನು ಜಾರಿಗೆ ತರುತ್ತಿವೆ. ಈ ಹೊಸ ನಿಯಮದ ಪ್ರಕಾರ, ಮಾರುಕಟ್ಟೆಗೆ (Stock Market) ಒಂದೇ ಮುಕ್ತಾಯ ಸಮಯ ಇರುವುದಿಲ್ಲ. ರೆಗ್ಯುಲರ್ ಟ್ರೇಡಿಂಗ್ ಸಮಯದಲ್ಲಿ ಬದಲಾವಣೆ ಇಲ್ಲ. ಡಿರೈವೇಟಿವ್ಸ್, ಫ್ಯೂಚರ್ಸ್, ಆಪ್ಷನ್ಸ್ ಟ್ರೇಡಿಂಗ್ ಮತ್ತಿತರ ವಿವಿಧ ವಿಭಾಗಗಳಿಗೆ ಬೇರೆ ಬೇರೆ ಸಮಯ ನಿಗದಿಯಾಗಿದೆ:

ಷೇರುಮಾರುಕಟ್ಟೆಯ ಹೊಸ ಟ್ರೇಡಿಂಗ್ ಸಮಯ (ಆಗಸ್ಟ್ 3 ರಿಂದ)

  • F&O ಹೊರತಾದ ಸಾಮಾನ್ಯ ಷೇರುಗಳು (Non-F&O): ಎಂದಿನಂತೆ ಮಧ್ಯಾಹ್ನ 3:30 ರವರೆಗೆ ಟ್ರೇಡಿಂಗ್
  • F&O ಷೇರುಗಳು (ಕ್ಯಾಶ್ ಮಾರ್ಕೆಟ್): ಸತತ ಟ್ರೇಡಿಂಗ್ 3:15 ಕ್ಕೆ ಅಂತ್ಯ
  • CAS (ಆಕ್ಷನ್) ಸೆಷನ್: 3:15 ರಿಂದ 3:35 ರವರೆಗೆ
  • F&O (ಡೆರಿವೇಟಿವ್ಸ್) ಟ್ರೇಡಿಂಗ್: ಮಧ್ಯಾಹ್ನ 3:40 ರವರೆಗೆ (10 ನಿಮಿಷ ಹೆಚ್ಚಳ)
  • ಪೋಸ್ಟ್-ಕ್ಲೋಸ್ ಸೆಷನ್: ಸಂಜೆ 3:50 ರಿಂದ 4:00 ರವರೆಗೆ
  • ಡೆರಿವೇಟಿವ್ಸ್ ಟ್ರೇಡಿಂಗ್: ಸಂಜೆ 3:40ರವರೆಗೆ (ಹೆಚ್ಚುವರಿ 10 ನಿಮಿಷ)

ಷೇರು ಮತ್ತು ಇಂಡೆಕ್ಸ್ F&O ವಹಿವಾಟಿನ ಸಮಯವನ್ನು ಮಧ್ಯಾಹ್ನ 3:30 ರ ಬದಲಿಗೆ 3:40 ರವರೆಗೆ ವಿಸ್ತರಿಸಲಾಗಿದೆ. ಕ್ಯಾಶ್ ಮಾರ್ಕೆಟ್‌ನ ಆಕ್ಷನ್ ಸೆಷನ್ (Auction Session) ಮುಗಿದ ನಂತರ ಟ್ರೇಡರ್‌ಗಳಿಗೆ ತಮ್ಮ ಕ್ರಮಾಂಕಗಳನ್ನು ಸರಿದೂಗಿಸಲು ಈ ಹೆಚ್ಚುವರಿ 10 ನಿಮಿಷ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಭಾರತದ ಕೈಗಾರಿಕಾ ಉತ್ಪಾದನೆಗೆ ಭರ್ಜರಿ ಬೂಸ್ಟ್: ಜೂನ್‌ನಲ್ಲಿ ಶೇ 7.3ಕ್ಕೆ ಏರಿಕೆ

ಮೇಲಿನ ಪಟ್ಟಿಯಲ್ಲಿ ಕಾಣುವ ಪೋಸ್ಟ್ ಕ್ಲೋಸ್ ಸೆಷನ್ ಎಂದರೆ, ರೆಗ್ಯುಲರ್ ಟ್ರೇಡಿಂಗ್ ಸಮಯ ಮುಗಿದ ನಂತರದ ಅವಧಿ. ಸಂಜೆ 3:50ರಿಂದ 4ರವರೆಗೆ 10 ನಿಮಿಷ ಇರುತ್ತದೆ. ಮಾರುಕಟ್ಟೆ ಕೊನೆಯಲ್ಲಿ ಬಂದ ಬೆಲೆಗೆ ಎಲ್ಲಾ ಬಯ್ ಮತ್ತು ಸೆಲ್ ಆರ್ಡರ್​ಗಳನ್ನು ಈ ಅವಧಿಯಲ್ಲಿ ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಹೀಗಾಗಿ, ಷೇರು ಬೆಲೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ.

ಕ್ಲೋಸಿಂಗ್ ಆಕ್ಷನ್ ಸೆಷನ್ (CAS) ಹೇಗೆ ಕೆಲಸ ಮಾಡುತ್ತದೆ?

F&O ಷೇರುಗಳಲ್ಲಿ ಸತತ ಟ್ರೇಡಿಂಗ್ ಮಧ್ಯಾಹ್ನ 3:15 ಕ್ಕೆ ಮುಗಿದ ನಂತರ ಹರಾಜು ಪ್ರಕ್ರಿಯೆ ಪ್ರಾರಂಭವಾಗುತ್ತದೆ:

  • 3:15 – 3:20 PM: CAS ಗೆ ಬದಲಾವಣೆ ಮತ್ತು ಉಲ್ಲೇಖಿತ ಬೆಲೆ (Reference price) ಲೆಕ್ಕಾಚಾರ.
  • 3:20 – 3:25 PM: ಮಾರ್ಕೆಟ್ ಮತ್ತು ಲಿಮಿಟ್ ಆರ್ಡರ್‌ಗಳನ್ನು ಸಲ್ಲಿಸಬಹುದು.
  • 3:25 – 3:30 PM: ಕೇವಲ ಲಿಮಿಟ್ ಆರ್ಡರ್‌ಗಳಿಗೆ ಮಾತ್ರ ಅವಕಾಶ. (ಆರ್ಡರ್ ಬದಲಾವಣೆ ಅಥವಾ ರದ್ದುಗೊಳಿಸಲು ಅವಕಾಶವಿರುವುದಿಲ್ಲ).
  • 3:30 – 3:35 PM: ಕೊನೆಯ ಬೆಲೆ ನಿಗದಿ (Closing price discovery) ಮತ್ತು ಆರ್ಡರ್ ಮ್ಯಾಚಿಂಗ್.

ಕ್ಲೋಸಿಂಗ್ ಪ್ರೈಸ್ ಲೆಕ್ಕಾಚಾರದಲ್ಲಿ ಬದಲಾವಣೆ

  • ಹಳೆಯ ಪದ್ಧತಿ: ಕೊನೆಯ 30 ನಿಮಿಷಗಳ ವಾಲ್ಯೂಮ್ ವೈಟೆಡ್ ಆವರೇಜ್ ಪ್ರೈಸ್ (VWAP- Volume Weighted Average Price) ಆಧಾರದ ಮೇಲೆ ಮುಕ್ತಾಯದ ಬೆಲೆ ನಿಗದಿಯಾಗುತ್ತಿತ್ತು.
  • ಹೊಸ ಪದ್ಧತಿ: CAS ಮೂಲಕ ಎಲ್ಲಾ ಖರೀದಿ ಮತ್ತು ಮಾರಾಟದ ಆರ್ಡರ್‌ಗಳನ್ನು ಒಂದೇ ಹರಾಜು ಪ್ರಕ್ರಿಯೆಯಲ್ಲಿ (Equilibrium Price) ಮ್ಯಾಚ್ ಮಾಡಿ ಕೊನೆಯ ಬೆಲೆಯನ್ನು ನಿಗದಿಪಡಿಸಲಾಗುತ್ತದೆ.
  • VWAP ಸಮಯ: F&O ವಹಿವಾಟಿನ VWAP ಲೆಕ್ಕಾಚಾರದ ಸಮಯವನ್ನು ಮಧ್ಯಾಹ್ನ 3:10 ರಿಂದ 3:40 ಕ್ಕೆ ಬದಲಾಯಿಸಲಾಗಿದೆ.

ಇದನ್ನೂ ಓದಿ: LPG Cylinder price: ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ದರ ₹200ಕ್ಕೂ ಹೆಚ್ಚು ಇಳಿಕೆ

ಹೂಡಿಕೆದಾರರು ಮತ್ತು ಟ್ರೇಡರ್‌ಗಳ ಮೇಲಾಗುವ ಪರಿಣಾಮ

  • ದೀರ್ಘಾವಧಿ ಹೂಡಿಕೆದಾರರು: ಸಾಮಾನ್ಯ ಹೂಡಿಕೆದಾರರ ದೈನಂದಿನ ವಹಿವಾಟಿನ ಮೇಲೆ ಹೆಚ್ಚಿನ ಪರಿಣಾಮವಿರುವುದಿಲ್ಲ.
  • F&O ಟ್ರೇಡರ್‌ಗಳು: ಇಂಟ್ರಾಡೇ ಕ್ರಮಾಂಕಗಳನ್ನು ಕ್ಲೋಸ್ ಮಾಡಲು, ಹೆಡ್ಜಿಂಗ್ (Hedge) ಮಾಡಲು ಹಾಗೂ ಎಕ್ಸ್‌ಪೈರಿ ದಿನದ ಏರಿಳಿತಗಳನ್ನು ನಿರ್ವಹಿಸಲು ಹೆಚ್ಚುವರಿ ಸಮಯ ಸಿಗಲಿದೆ.
  • ದೊಡ್ಡ ಹೂಡಿಕೆಗಳು (Passive Funds): ಮಾರ್ಕೆಟ್ ಮುಕ್ತಾಯದ ಸಮಯದಲ್ಲಿ ದೊಡ್ಡ ಪ್ರಮಾಣದ ವಹಿವಾಟುಗಳಿಂದ ಷೇರು ಬೆಲೆಯಲ್ಲಿ ತೀವ್ರ ವ್ಯತ್ಯಾಸ ಉಂಟಾಗುವುದನ್ನು ತಪ್ಪಿಸಲು ಹಾಗೂ ಮಾರುಕಟ್ಟೆ ದುರ್ಬಳಕೆಯನ್ನು ತಡೆಯಲು ಇದು ನೆರವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮೋದಿ ಭೇಟಿ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಬಂದೋಬಸ್ತ್: ಭದ್ರತೆ ಹೇಗಿದೆ ನೋಡಿ
ಮೋದಿ ಭೇಟಿ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಬಂದೋಬಸ್ತ್: ಭದ್ರತೆ ಹೇಗಿದೆ ನೋಡಿ
ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್
ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ