Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಐ ಇನ್ಸೆಂಟಿವ್ ಸ್ಕೀಮ್ ಸೇರಿದಂತೆ ವಿವಿಧ ಯೋಜನೆಗಳಿಗೆ ಕೇಂದ್ರ ಸಂಪುಟ ಅನುಮೋದನೆ

Central govt initiatives: 2,000 ರೂ ಒಳಗಿನ ಯುಪಿಐ ಹಣ ಪಾವತಿಗೆ ವರ್ತಕರು ಪ್ರೋತ್ಸಾಹಕ ಧನ ಪಡೆಯಲಿದ್ದಾರೆ. ಇದು ಗ್ರಾಹಕರಿಂದ ಸಣ್ಣ ವರ್ತಕರಿಗೆ ಮಾಡಲಾಗುವ ಯುಪಿಐ ಪೇಮೆಂಟ್​​ಗೆ ಅನ್ವಯ ಆಗುತ್ತದೆ. ಈ ಉಪಕ್ರಮಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಹಾಗೆಯೇ, ಮಹಿಳಾ ಸ್ನೇಹಿ ಪಂಚಾಯಿತಿಗಳ ನಿರ್ಮಾಣಕ್ಕೂ ಸರ್ಕಾರ ಯೋಜನೆ ಆರಂಭಿಸಿದೆ.

ಯುಪಿಐ ಇನ್ಸೆಂಟಿವ್ ಸ್ಕೀಮ್ ಸೇರಿದಂತೆ ವಿವಿಧ ಯೋಜನೆಗಳಿಗೆ ಕೇಂದ್ರ ಸಂಪುಟ ಅನುಮೋದನೆ
ಯುಪಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 19, 2025 | 6:16 PM

ನವದೆಹಲಿ, ಮಾರ್ಚ್ 19: ಯುಪಿಐ ಹಣ ಪಾವತಿಗೆ ಉತ್ತೇಜನ, ಮಹಿಳಾ ಸಬಲೀಕರಣ, ಮೂಲಸೌಕರ್ಯ ಅಭಿವೃದ್ಧಿ, ಪಶುಸಂಗೋಪನಾ ಕ್ಷೇತ್ರದ ಬೆಳವಣಿಗೆ ಇತ್ಯಾದಿ ಕಾರ್ಯಗಳಿಗೆ ಪುಷ್ಟಿ ನೀಡುವ ವಿವಿಧ ಯೋಜನೆಗಳನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ. ಈ ಯೋಜನೆಗಳಿಗೆ ಇಂದು ಬುಧವಾರ ಕೇಂದ್ರ ಸಂಪುಟ ಅನುಮೋದನೆ ಕೂಡ ನೀಡಿದೆ. ವ್ಯಕ್ತಿಯಿಂದ ವರ್ತಕರಿಗೆ ಯುಪಿಐ ಹಣ ಪಾವತಿಸುವಾಗ ಸಣ್ಣ ಮೊತ್ತದ ಟ್ರಾನ್ಸಾಕ್ಷನ್​​ಗಳಿಗೆ (small ticket UPI transactions) ಉತ್ತೇಜನ ನೀಡುವ ಸ್ಕೀಮ್ ಇದರಲ್ಲಿ ಒಳಗೊಂಡಿದೆ. ಹಾಗೆಯೇ, ಆಡಳಿತದಲ್ಲಿ ಮಹಿಳಾ ಪಾತ್ರ ಹೆಚ್ಚಿಸಲು ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿ ನಿರ್ಮಾಣದ ಯೋಜನೆಯನ್ನು ಸರ್ಕಾರ ಆರಂಭಿಸಿದೆ.

ಸಣ್ಣ ಮೊತ್ತದ ಯುಪಿಐ ವಹಿವಾಟುಗಳಿಗೆ ಉತ್ತೇಜನ

ಗ್ರಾಹಕರಿಂದ ವರ್ತಕರಿಗೆ ಸಣ್ಣ ಮೊತ್ತದ ಯುಪಿಐ ಹಣ ಪಾವತಿಗೆ ಉತ್ತೇಜಿಸಲು ಸರ್ಕಾರ ಇನ್ಸೆಂಟಿವ್ ಸ್ಕೀಮ್ ಆರಂಭಿಸುತ್ತಿದೆ. ಸಣ್ಣ ವರ್ತಕರಿಗೆ ಅವರ ಗ್ರಾಹಕರಿಂದ ಭೀಮ್-ಯುಪಿಐ ಮೂಲಕ ಮಾಡಲಾಗುವ 2,000 ರೂಗಿಂತ ಕಡಿಮೆ ಮೌಲ್ಯದ ಪಾವತಿಗೆ ಈ ಯೋಜನೆ ಅನ್ವಯ ಆಗುತ್ತದೆ. ಈ ಸಣ್ಣ ಯುಪಿಐ ಟ್ರಾನ್ಸಾಕ್ಷನ್​​ಗಳನ್ನು ಪಡೆಯುವ ಸಣ್ಣ ವರ್ತಕರಿಗೆ ಶೇ. 0.15ರಷ್ಟು ಇನ್ಸೆಂಟಿವ್ ನೀಡಲಾಗುತ್ತದೆ. ಅಂದರೆ, 2,000 ರೂ ಮೌಲ್ಯದ ವಹಿವಾಟಾದರೆ 3 ರೂ ಇನ್ಸೆಂಟಿವ್ ಸಿಗುತ್ತದೆ.

ಇದನ್ನೂ ಓದಿ: ಬ್ಯಾಂಕ್ ಮತ್ತು ರಿಯಲ್ ಎಸ್ಟೇಟ್ ಉದ್ಯಮ ಸೇರಿ ಜನರಿಗೆ ಉಂಡೆ ನಾಮ? ಸಿಬಿಐಗೆ ತನಿಖೆ ವಹಿಸಲು ಸುಪ್ರೀಂಕೋರ್ಟ್ ನಿರ್ಧಾರ

ಬ್ಯಾಂಕುಗಳು ನೇರವಾಗಿ ವರ್ತಕರ ಖಾತೆಗೆ ಈ ಹಣ ವರ್ಗಾಯಿಸುತ್ತವೆ. ಆ ಬಳಿಕ ಸರ್ಕಾರ ಆ ಮೊತ್ತವನ್ನು ಬ್ಯಾಂಕುಗಳಿಗೆ ಭರಿಸುತ್ತದೆ. ಯುಪಿಐ ಪ್ಲಾಟ್​​​ಫಾರ್ಮ್ ಅನ್ನು ಮತ್ತಷ್ಟು ವ್ಯಾಪಕಗೊಳಿಸುವುದು ಈ ಇನ್ಸೆಂಟಿವ್ ಸ್ಕೀಮ್​​ನ ಉದ್ದೇಶ.

ಮಹಿಳಾ ಸಬಲೀಕರಣ ಹೆಚ್ಚಿಸಲು ಸಶಕ್ತ್ ಪಂಚಾಯತ್ ನೇತ್ರಿ ಅಭಿಯಾನ್ ಯೋಜನೆ

ಮಹಿಳಾ ಸಬಲೀಕರಣಕ್ಕೆ ಸರ್ಕಾರ ಹಲವು ಕ್ರಮಗಳನನ್ಉ ಕೈಗೊಂಡಿದೆ. ರಾಜಕೀಯವಾಗಿಯೂ ಮಹಿಳೆಯರಿಗೆ ಹೆಚ್ಚು ಅವಕಾಶ ಕಲ್ಪಿಸಲು ಪ್ರಯತ್ನಗಳಾಗಿವೆ. 2023ರಲ್ಲಿ ಸಂವಿಧಾನದ ತಿದ್ದುಪಡಿ ಮೂಲಕ ನಾರಿ ಶಕ್ತಿ ವಂದನ್ ಅಧಿನಿಯಮ್ ತರಲಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ಇ ದು ಕಲ್ಪಿಸುತ್ತದೆ.

ಇದರ ಬೆನ್ನಲ್ಲೇ ಸರ್ಕಾರ ಇದೀಗ ಸಶಕ್ತ್ ಪಂಚಾಯತ್ ನೇತ್ರಿ ಅಭಿಯಾನ್ ಯೋಜನೆಯನ್ನು ಜಾರಿಗೆ ತಂದಿದೆ. ಪಂಚಾಯಿತಿ ಮಟ್ಟದಲ್ಲಿ ಮಹಿಳಾ ಪ್ರತಿನಿಧಿಗಳನ್ನು ಬಲಪಡಿಸಲು ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್ ಉಪಕ್ರಮವನ್ನು ಸರ್ಕಾರ ಆರಂಭಿಸಿದೆ.

ಇದನ್ನೂ ಓದಿ: ಫ್ಯಾಮಿಲಿ ಪೆನ್ಷನ್ ನೀತಿಯಲ್ಲಿ ಸುಧಾರಣೆ; ವಿಚ್ಛೇದಿತೆಯರು, ವಿಧವೆಯರು, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ

ಷಟ್ಪಥದ ಹೆದ್ದಾರಿ ನಿರ್ಮಾಣ

ಮುಂಬೈನಲ್ಲಿ ಪಗೋಟೆ ಪೋರ್ಟ್​​ನಿಂದ ಚೌಕ್​​ವರೆಗೆ 29 ಕಿಮೀ ಉದ್ದದ ಷಟ್ಪಥದ ಗ್ರೀನ್​​ಫೀಲ್ಡ್ ಹೆದ್ದಾರಿ ನಿರ್ಮಾಣಕ್ಕೆ ಕ್ಯಾಬಿನೆಟ್ ಕಮಿಟಿ ಅನುಮೋದನೆ ನೀಡಿದೆ.

ಪಿಎಂ ಮಾತೃ ವಂದನ ಯೋಜನೆ ಅಡಿ 53 ಲಕ್ಷ ಫಲಾನುಭವಿಗಳು

ಪಿಎಂ ಮಾತೃ ವಂದನ ಯೋಜನೆ ಅಡಿ ಈವರೆಗೆ 53.76 ಲಕ್ಷ ಫಲಾನುಭವಿಗಳಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ಈ ಯೋಜನೆ ಅಡಿ ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ತಾಯಂದಿರಿಗೆ ಸರ್ಕಾರ 5,000 ರೂ ಸಹಾಯಧನ ನೀಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಸುವನ್ನು ಓಡಿಸಿಕೊಂಡು ಬೆಡ್ ರೂಂಗೆ ನುಗ್ಗಿದ ಗೂಳಿ; ವಿಡಿಯೋ ವೈರಲ್
ಹಸುವನ್ನು ಓಡಿಸಿಕೊಂಡು ಬೆಡ್ ರೂಂಗೆ ನುಗ್ಗಿದ ಗೂಳಿ; ವಿಡಿಯೋ ವೈರಲ್
ಬೆಂಗಳೂರಿನಲ್ಲಿ ಪಾಪಿ ಪತಿಯ ಬೆಚ್ಚಿಬೀಳಿಸೋ ಕೃತ್ಯ!
ಬೆಂಗಳೂರಿನಲ್ಲಿ ಪಾಪಿ ಪತಿಯ ಬೆಚ್ಚಿಬೀಳಿಸೋ ಕೃತ್ಯ!
ದರ್ಶನ್ ತೆರೆಮೇಲೆ ಕಾಣಿಸಿದ ಕೂಡಲೇ ಮೈಮರೆತು ಕುಣಿದಾಡಿದ ಫ್ಯಾನ್ಸ್
ದರ್ಶನ್ ತೆರೆಮೇಲೆ ಕಾಣಿಸಿದ ಕೂಡಲೇ ಮೈಮರೆತು ಕುಣಿದಾಡಿದ ಫ್ಯಾನ್ಸ್
ಅತಿಯಾದ ಮಾತೇ ಯತ್ನಾಳ್ ಪಾಲಿಗೆ ಕುತ್ತಾಯಿತು: ವಿಜಯಾನಂದ್ ಕಾಶಪ್ಪನವರ್
ಅತಿಯಾದ ಮಾತೇ ಯತ್ನಾಳ್ ಪಾಲಿಗೆ ಕುತ್ತಾಯಿತು: ವಿಜಯಾನಂದ್ ಕಾಶಪ್ಪನವರ್
ಲಿಂಗಾಯತರು ಬಿಜೆಪಿನ ಪುನಃ ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದರು: ಸ್ವಾಮೀಜಿ
ಲಿಂಗಾಯತರು ಬಿಜೆಪಿನ ಪುನಃ ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದರು: ಸ್ವಾಮೀಜಿ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!