ಗರ್ಭಿಣಿಯರು ಯಾವುದೇ ಕಾರಣಕ್ಕೂ ಬ್ಯೂಟಿ ಪಾರ್ಲರ್ಗಳಲ್ಲಿ ಇವುಗಳನ್ನು ಮಾಡಿಸಬಾರದು
ಗರ್ಭಾವಸ್ಥೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಾಗುತ್ತದೆ. ಅದರಲ್ಲಿಯೂ ಗರ್ಭಿಣಿ ಆಗುವುದಕ್ಕಿಂತ ಮೊದಲು ಮಾಡುತ್ತಿರುವ ಕೆಲಸಗಳನ್ನು ಗರ್ಭಿಣಿ ಆದ ಬಳಿಕವೂ ಮುಂದುವರಿಸಲು ಸಾಧ್ಯವಾಗುವುದಿಲ್ಲ. ಅದರಲ್ಲಿಯೂ ಮಹಿಳೆಯರು ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡುವುದರಿಂದ ಬ್ಯೂಟಿ ಪಾರ್ಲರ್ ಗಳಿಗೆ ಹೋಗುತ್ತಾರೆ. ಆದರೆ ಗರ್ಭಾವಸ್ಥೆಯಲ್ಲಿ ಈ ಅಭ್ಯಾಸ ಮುಂದುವರಿಸುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕಾಗುತ್ತದೆ. ಆದರೆ ಈ ರೀತಿ ಹೇಳುವುದಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಗರ್ಭಿಣಿಯರು (Pregnant women) ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವಾರು ರೀತಿಯಲ್ಲಿ ಪ್ರಯತ್ನ ಪಡುತ್ತಾರೆ. ಅದಲ್ಲದೆ ಗರ್ಭಾವಸ್ಥೆಯಲ್ಲಿ ಹೆಚ್ಚಿನ ಕಾಳಜಿಯೂ ಕೂಡ ಅಗತ್ಯವಾಗಿರುತ್ತದೆ. ಆದರೆ ಕೆಲವೊಂದು ಭಾರಿ ನಾವು ತಿಳಿದೋ, ತಿಳಿಯದೆಯೋ ಮಾಡುವಂತಹ ತಪ್ಪುಗಳು ನಮ್ಮ ಆರೋಗ್ಯವನ್ನು ಹಾಳು ಮಾಡಬಹುದು. ಅದರಲ್ಲಿಯೂ ಗರ್ಭಾವಸ್ಥೆಯಲ್ಲಿ ಬೇರೆ ದಿನಗಳಲ್ಲಿ ಇದ್ದಂತೆ ಇರುವುದಕ್ಕೆ ಸಾಧ್ಯವಾಗುವುದಿಲ್ಲ. ಈ ದಿನಗಳಲ್ಲಿ ದೇಹ ಎಲ್ಲದಕ್ಕೂ ಸ್ಪಂದಿಸುವುದಿಲ್ಲ ಹಾಗಾಗಿ ಯಾವುದೇ ರೀತಿಯ ಕೆಲಸ ಮಾಡಬೇಕಾದರೂ ಕೂಡ ಎರಡು ಬಾರಿ ಯೋಚಿಸಬೇಕಾಗುತ್ತದೆ. ಜೊತೆಗೆ ಈ ಸಮಯದಲ್ಲಿ ಮಹಿಳೆಯರು ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡುವುದರಿಂದ ಬ್ಯೂಟಿ ಪಾರ್ಲರ್ (Beauty Parlour) ಗಳ ಮೊರೆ ಹೋಗುತ್ತಾರೆ ಆದರೆ ಗರ್ಭಾವಸ್ಥೆಯಲ್ಲಿ ಬ್ಯೂಟಿ ಪಾರ್ಲರ್ ಗಳಿಗೆ ಹೋಗುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕಾಗುತ್ತದೆ. ಆದರೆ ಈ ರೀತಿ ಹೇಳುವುದಕ್ಕೆ ಕಾರಣವೇನು? ಪಾರ್ಲರ್ ಗಳಲ್ಲಿ ಯಾವ ರೀತಿಯ ಸರ್ವಿಸ್ ಗಳನ್ನು ಮಾಡಿಸಿಕೊಳ್ಳಬಾರದು ಎಂಬುದನ್ನು ತಿಳಿದುಕೊಳ್ಳಿ.
ಬ್ಯೂಟಿ ಪಾರ್ಲರ್ ಗಳಲ್ಲಿ ಯಾವುದನ್ನು ಮಾಡಿಸಬಾರದು;
ಹೇರ್ ಕಲರ್:
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುತ್ತಿದೆ. ಹಾಗಾಗಿ ಅದನ್ನು ಮರೆಮಾಚಲು ಕೂದಲಿಗೆ ಕಲರಿಂಗ್ ಮಾಡಿಸಿಕೊಳ್ಳುತ್ತಾರೆ. ಆದರೆ ಗರ್ಭಾವಸ್ಥೆಯಲ್ಲಿ ಇದು ಒಳ್ಳೆಯದಲ್ಲ. ಏಕೆಂದರೆ ಗರ್ಭಿಣಿಯರಿಗೆ ಹಾರ್ಮೋನ್ ಬದಲಾವಣೆಗಳಾಗುವುದು ಸಾಮಾನ್ಯ. ಇಂತಹ ಸಮಯದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಎದುರಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ರಾಸಾಯನಿಕಗಳನ್ನು ಒಳಗೊಂಡಿರುವ ಬಣ್ಣಗಳು ದೇಹಕ್ಕೆ ಸರಿ ಹೊಂದದೆಯೂ ಇರಬಹುದು.
ವ್ಯಾಕ್ಸಿಂಗ್:
ಗರ್ಭಾವಸ್ಥೆಯಲ್ಲಿ ವ್ಯಾಕ್ಸಿಂಗ್ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಇದು ಹೆಚ್ಚಿನ ನೋವನ್ನು ಉಂಟು ಮಾಡುತ್ತದೆ ಜೊತೆಗೆ ಈ ಸಮಯದಲ್ಲಿ ಕೆಲವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಈ ಸಮಯದಲ್ಲಿ ವ್ಯಾಕ್ಸಿಂಗ್ ಮಾಡುವುದನ್ನು ತಪ್ಪಿಸುವುದು ಉತ್ತಮ.
ಬ್ಲೀಚ್:
ಪದೇ ಪದೇ ಬ್ಲೀಚ್ ಮಾಡಿಸಿಕೊಳ್ಳುವುದು ಗರ್ಭಿಣಿಯರಿಗೆ ಮಾತ್ರವಲ್ಲ, ಯಾರಿಗೂ ಒಳ್ಳೆಯದಲ್ಲ. ಬ್ಲೀಚಿಂಗ್ ಮಾಡಿಸಿಕೊಂಡು ಸ್ವಲ್ಪ ದಿನಗಳ ನಂತರ ನಿಮ್ಮ ತ್ವಚೆ ಸುಕ್ಕುಗಟ್ಟಲು ಆರಂಭವಾಗುತ್ತದೆ. ಮಾತ್ರವಲ್ಲ ಇದನ್ನು ಪದೇ ಪದೇ ಮಾಡಿಸಿಕೊಳ್ಳುವುದರಿಂದ ಚರ್ಮದ ಅಲರ್ಜಿ, ತುರಿಕೆಗೆ ಕಾರಣವಾಗಬಹುದು ಹಾಗಾಗಿ ಇದನ್ನು ಮಾಡಿಸಿಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳುವುದು ಬಹಳ ಉತ್ತಮ.
ಇದನ್ನೂ ಓದಿ: ಪ್ರವಾಸಗಳಿಗೆ ಹೋದಾಗ ಫಿಲ್ಟರ್ ಇಲ್ಲದೆಯೇ ಶುದ್ಧ ನೀರನ್ನು ಕುಡಿಯಲು ಇಲ್ಲಿದೆ ಸುಲಭ ವಿಧಾನ
ಅದಲ್ಲದೆ ಫ್ಯೂಬಿಕ್ ಹೇರ್ ರಿಮೂವ್ ಕೂಡ ಗರ್ಭಿಣಿಯರಿಗೆ ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇವುಗಳ ಬದಲು ನೀವು ತಲೆ ಮತ್ತು ಪಾದಗಳ ಮಸಾಜ್ ಮಾಡಿಸಿಕೊಳ್ಳಬಹುದು. ಇದರಿಂದ ದೇಹಕ್ಕೆ ಮತ್ತು ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ. ದೇಹವೂ ಹಗುರವಾಗುತ್ತದೆ. ಹಾಗಾಗಿ ಬ್ಯೂಟಿ ಪಾರ್ಲರ್ ಗಳಿಗೆ ಹೋಗಲೇಬೇಕಾದರೆ ಮಸಾಜ್ ಮಾಡಿಸಿಕೊಳ್ಳುವುದು ಬಹಳ ಒಳ್ಳೆಯದು. ಈ ಮಾಹಿತಿಯನ್ನು nitharaandmom ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:59 am, Sat, 12 April 25