ಪ್ರವಾಸಗಳಿಗೆ ಹೋದಾಗ ಫಿಲ್ಟರ್ ಇಲ್ಲದೆಯೇ ಶುದ್ಧ ನೀರನ್ನು ಕುಡಿಯಲು ಇಲ್ಲಿದೆ ಸುಲಭ ವಿಧಾನ
ಪ್ರವಾಸಗಳಿಗೆ ಹೋಗುವಾಗ ಅಷ್ಟು ದಿನಕ್ಕೆ ಬೇಕಾಗುವ ನೀರನ್ನು ತೆಗೆದುಕೊಂಡು ಹೋಗಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಹಾಗಿದ್ದಾಗ ನಾವು ಹೋದ ಸ್ಥಳಗಳಲ್ಲಿ ಸಿಗುವ ನೀರನ್ನು ಕುಡಿಯಬೇಕಾಗುತ್ತದೆ. ಆದರೆ ಇತ್ತೀಚಿಗೆ ಕೆಲವು ಕಂಪೆನಿಗಳ ಬಾಟಲ್ ನೀರು ಕೂಡ ಕುಡಿಯಲು ಯೋಗ್ಯವಲ್ಲ ಎಂದು ಆರೋಗ್ಯ ಇಲಾಖೆ ಹೇಳುತ್ತಿರುವುದರಿಂದ ನೀರು ಶುದ್ಧವಾಗಿರುತ್ತದೆಯೋ? ಇಲ್ಲವೋ ಎಂಬ ಅನುಮಾನ ಹುಟ್ಟಿಕೊಳ್ಳುತ್ತದೆ ಅಂತಹ ಸಂದರ್ಭಗಳಲ್ಲಿ ಶುದ್ಧ ನೀರು ಕುಡಿಯುವುದು ಹೇಗೆ? ಫಿಲ್ಟರ್ ಇಲ್ಲದೆಯೇ ಶುದ್ಧ ನೀರು ಕುಡಿಯಲು ಸಾಧ್ಯವಿದೆಯೇ ಎಂಬುದನ್ನು ತಿಳಿದುಕೊಳ್ಳಿ ಮಾಹಿತಿ ಇಲ್ಲಿದೆ.

ಬೇಸಿಗೆ ರಜೆ (Summer vacation) ಆರಂಭವಾಗಿದ್ದು ಪ್ರವಾಸಗಳಿಗೆ ಬೇರೆ ಬೇರೆ ಪ್ರದೇಶಗಳಿಗೆ ಹೋಗುವವರ ಸಂಖ್ಯೆಯೂ ಹೆಚ್ಚಾಗಿಯೇ ಇರುತ್ತದೆ. ಪ್ರಯಾಣ (Travel) ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ ಆದರೆ ಅಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭವಲ್ಲ. ಆಹಾರ (Food), ನೀರು (Water), ವಸತಿ ಎಲ್ಲವೂ ಬಹಳ ಮುಖ್ಯವಾಗಿರುತ್ತದೆ. ಅದಲ್ಲದೆ ಎಲ್ಲಾ ಕಡೆಗಳಲ್ಲಿಯೂ ಶುದ್ಧ ಕುಡಿಯುವ ನೀರು (Clean drinking water) ಸಿಗುವುದಿಲ್ಲ. ಜೊತೆಗೆ ಇತ್ತೀಚಿಗೆ ಕೆಲವು ಕಂಪೆನಿಗಳ ವಾಟರ್ ಬಾಟಲ್ (Water bottle) ಗಳಲ್ಲಿರುವ ನೀರು ಕೂಡ ಸುರಕ್ಷಿತವಲ್ಲ ಎಂದು ಆರೋಗ್ಯ ಇಲಾಖೆಯಿಂದ ವರದಿ ಬಂದಿರುವುದರಿಂದ ಆಹಾರದ ಕಲಬೆರಕೆಯ ಜೊತೆಗೆ ನೀರು ಕುಡಿಯಲು ಕೂಡ ಜನ ಹೆದರುವ ಪರಿಸ್ಥಿತಿ ಬಂದಿದೆ. ಹಾಗಾಗಿ ಮಕ್ಕಳು, ವಯಸ್ಸಾದವರನ್ನು ಕರೆದುಕೊಂಡು ಪ್ರವಾಸ ಹೋಗುವವರಿಗೆ ಶುದ್ಧವಾಗಿರುವ ಕುಡಿಯುವ ನೀರನ್ನು ಹುಡುಕುವುದು ಕಷ್ಟವಾಗಬಹುದು. ಏಕೆಂದರೆ ಕೆಲವು ಭಾರಿ ನಿಮಗೆ ಬೋರ್ಡ್ ಗಳಲ್ಲಿ ಮಾತ್ರ ಶುದ್ಧ ಕುಡಿಯುವ ನೀರು ಎಂಬುದನ್ನು ನೋಡಲು ಸಾಧ್ಯ. ಆದರೆ ಅದು ನಿಜವಾಗಿಯೂ ಶುದ್ಧವಾಗಿರುತ್ತದೆಯೇ? ಎಂಬುದನ್ನು ತಿಳಿಯಲು ಸಾಧ್ಯವಾಗುವುದಿಲ್ಲ ಇಂತಹ ಸಮಯದಲ್ಲಿ ಏನು ಮಾಡಬಹುದು? ಫಿಲ್ಟರ್ ಇಲ್ಲದೆಯೇ ಶುದ್ಧ ನೀರನ್ನು ಹೇಗೆ ಕುಡಿಯಬಹುದು ಎಂಬುದನ್ನು ತಿಳಿದುಕೊಳ್ಳಿ.
ಸೋಲಾರ್ ಪ್ಯೂರಿಫೈ
ನೀರನ್ನು ಶುದ್ದೀಕರಿಸುವ ವಿಧಾನದಲ್ಲಿ ಇದೊಂದು ನೈಸರ್ಗಿಕ ಮತ್ತು ಹಳೆಯ ವಿಧಾನವಾಗಿದೆ. ಹಿಂದೆ ನೀರನ್ನು ಶುದ್ದೀಕರಿಸಲು ಈ ರೀತಿಯ ವಿಧಾನಗಳನ್ನು ಬಳಕೆ ಮಾಡುತ್ತಿದ್ದರು. ಒಂದು ಪಾತ್ರೆಯಲ್ಲಿ ನೀರನ್ನು ತುಂಬಿಸಿ ಬಿಸಿಲಿನಲ್ಲಿಟ್ಟರೆ ಸೂರ್ಯನ ಶಾಖದಿಂದ ಶುದ್ಧವಾಗುತ್ತದೆ ಜೊತೆಗೆ ನೀರಲ್ಲಿರುವ ಬ್ಯಾಕ್ಟಿರಿಯಾ, ವೈರಸ್ ನಾಶವಾಗುತ್ತದೆ. ಈ ರೀತಿಯ ವಿಧಾನ ಅನುಸರಿಸಿ ನೀರನ್ನು ಶುದ್ದೀಕರಿಸಬಹುದು. ಅದರಲ್ಲಿಯೂ ಈಗ ಬೇಸಿಗೆ ಕಾಲವಾದ್ದರಿಂದ ಬಿಸಿಲು ಕೂಡ ಯಥೇಚ್ಛವಾಗಿ ಸಿಗುತ್ತದೆ.
ನೀರನ್ನು ಬಿಸಿ ಮಾಡಿ ಕುಡಿಯಿರಿ
ನೀವು ದೂರದ ಊರುಗಳಿಗೆ ಪ್ರವಾಸ ಹೋಗುತ್ತಿದ್ದರೆ ಅಥವಾ ವಾರಗಟ್ಟಲೆ ಪ್ರವಾಸಕ್ಕೆ ಹೊರಟಿದ್ದರೆ ನೀವು ಕೆಟಲ್ ಗಳನ್ನು ತೆಗೆದುಕೊಂಡು ಹೋಗಬಹುದು. ಇದು ಹೆಚ್ಚು ಭಾರವೂ ಇರುವುದಿಲ್ಲ. ಜೊತೆಗೆ ಇವುಗಳನ್ನು ತೆಗೆದುಕೊಂಡು ಹೋದರೆ ನೀವು ಯಾವುದೇ ರೀತಿಯ ನೀರನ್ನೂ ಕೂಡ ಬಿಸಿ ಮಾಡಿ ಕುಡಿಯಬಹುದು. ಈ ರೀತಿ ನೀರನ್ನು ಖುದಿಸುವುದರಿಂದ ನೀರಿನಲ್ಲಿರುವ ವೈರೆಸ್, ಬ್ಯಾಕ್ಟಿರಿಯಾಗಳು ಸಾಯುತ್ತವೆ. ಬಳಿಕ ಇದನ್ನು ಶುದ್ಧ ಬಿಳಿ ಬಟ್ಟೆಯಿಂದ ಸೋಸಿಯೂ ಕುಡಿಯಬಹುದು.
ಇದನ್ನೂ ಓದಿ: ದೇಹದಲ್ಲಿ ಈ ಲಕ್ಷಣ ಕಾಣಿಸಿಕೊಂಡರೆ ನಿಮಗೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ
ಮಡಿಕೆ ನೀರು ಒಳ್ಳೆಯದು
ಇದೆಲ್ಲದರ ಹೊರತಾಗಿ ನದಿ, ಕೊಳ, ಕೆರೆ, ಬಾವಿಯ ನೀರು ಕುಡಿಯಲು ಶುದ್ಧವಾಗಿರುತ್ತದೆ. ಬೇಸಿಗೆ ಕಾಲವಾದ್ದರಿಂದ ಕೆಲವು ಭಾಗದಲ್ಲಿ ನೀರಿನ ಅಭಾವ ಇರಬಹುದು ಅಂತಹ ಸಂದರ್ಭಗಳಲ್ಲಿ ಮಣ್ಣಿನ ಮಡಿಕೆ ಅಥವಾ ಮಣ್ಣಿನ ಬಾಟಲಿಗಳಲ್ಲಿ ಇಟ್ಟಂತಹ ನೀರನ್ನು ಕುಡಿಯಬಹುದು. ಮಡಿಕೆಯಲ್ಲಿ ಅಥವಾ ಮಣ್ಣಿನ ಪಾತ್ರೆಗಳಲ್ಲಿ ಇಟ್ಟಂತಹ ನೀರು ಕೂಡ ಒಂದು ದಿನಕ್ಕೆ ಮಾತ್ರ ಕುಡಿಯಲು ಯೋಗ್ಯವಾಗಿರುತ್ತದೆ. ಮಾರನೇ ದಿನ ಅವುಗಳಿಗೆ ಹೊಸ ನೀರನ್ನು ತುಂಬಬೇಕಾಗುತ್ತದೆ.
ಕ್ಲೋರಿನ್ ಬಳಕೆ
ಸಾಮಾನ್ಯವಾಗಿ ನೀರನ್ನು ಶುದ್ದೀಕರಿಸಲು ಕ್ಲೋರಿನ್ ಬಳಕೆ ಮಾಡಬಹುದು. ನೀರಿಗೆ ಕ್ಲೋರಿನ್ ಹಾಕಿದರೆ ಅದು ನೀರಿನಲ್ಲಿರುವ ವೈರಸ್, ಬ್ಯಾಕ್ಟಿರಿಯಾ ಕೊಲ್ಲುತ್ತದೆ. ಆದರೆ ಇದನ್ನು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಕೆ ಮಾಡಬೇಕು. ನೀರಿಗೆ ಶೇ. 5ರಷ್ಟು ಕ್ಲೋರಿನ್ ಮಾತ್ರ ಬಳಸಿ.
ಅಯೋಡಿಯನ್ ಬಳಕೆ
ಇವು ನಿಮಗೆ ಟ್ಯಾಬ್ಲೆಟ್ ರೂಪದಲ್ಲಿ ಮಾರುಕಟ್ಟೆಗಳಲ್ಲಿ ಸಿಗುತ್ತದೆ. ಇವುಗಳನ್ನು ನೀರಿಗೆ ಸೇರಿಸುವುದರಿಂದ ನೀರು ಶುದ್ಧವಾಗುತ್ತದೆ. ಆದರೆ ಈ ವಿಧಾನ ತುಂಬಾ ಅನಿವಾರ್ಯವಾದಾಗ ಮಾತ್ರ ಬಳಸಿ. ಇದಕ್ಕಿಂತ ನೀವು ಎಲೆಕ್ಟ್ರಿಕ್ ಪ್ಯೂರಿಫೈಯರ್ ಗಳನ್ನು ಬಳಕೆ ಮಾಡಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ