
Summer Vacation
ಬೇಸಿಗೆ ರಜೆಗಳು ತಮ್ಮ ನಿಯಮಿತ ಶೈಕ್ಷಣಿಕ ದಿನಚರಿಗಳಿಂದ ವಿರಾಮವನ್ನು ಪಡೆಯುವುದರಿಂದ ವಿದ್ಯಾರ್ಥಿಗಳಿಗೆ ಸಂತೋಷ ಮತ್ತು ಉತ್ಸಾಹದ ಸಮಯವಾಗಿದೆ. ಈ ಸಮಯದಲ್ಲಿ, ಮಕ್ಕಳು ತಮ್ಮ ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯಲು ಬಯಸುತ್ತಾರೆ. ಪರೀಕ್ಷೆಗಳೆಲ್ಲಾ ಮುಗಿದು ಬೇಸಿಗೆ ರಜೆ ಇನ್ನೇನು ಆರಂಭವಾಗಲಿದೆ. ನಗರದ ಜಂಜಾಟದಿಂದ ಸ್ವಲ್ಪ ದೂರದಲ್ಲಿದ್ದು, ನಿಮ್ಮ ಮಕ್ಕಳೊಂದಿಗೆ ನೀವು ಒಂದು ಸುಂದರಕ್ಷಣಗಳನ್ನು ನೀವು ಕಳೆಯಲು ಬಯಸಿದರೆ, ಅದಕ್ಕೆ ಪೂರಕವಾದ ಉತ್ತಮ ಪ್ರವಾಸಿ ತಾಣಗಳ ಕುರಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಕಡಲತೀರಗಳು, ತೀರ್ಥ ಕ್ಷೇತ್ರಗಳ ದರ್ಶನ, ಟ್ರೆಕ್ಕಿಂಗ್ ಮುಂತಾದ ಹತ್ತು ಹಲವು ಬಗೆಯ ತಾಣಗಳ ಬಗೆಗಿನ ಉಪಯುಕ್ತ ಮಾಹಿತಿಗಳು ಇಲ್ಲಿವೆ.
ಪ್ರವಾಸಗಳಿಗೆ ಹೋದಾಗ ಫಿಲ್ಟರ್ ಇಲ್ಲದೆಯೇ ಶುದ್ಧ ನೀರನ್ನು ಕುಡಿಯಲು ಇಲ್ಲಿದೆ ಸುಲಭ ವಿಧಾನ
ಪ್ರವಾಸಗಳಿಗೆ ಹೋಗುವಾಗ ಅಷ್ಟು ದಿನಕ್ಕೆ ಬೇಕಾಗುವ ನೀರನ್ನು ತೆಗೆದುಕೊಂಡು ಹೋಗಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಹಾಗಿದ್ದಾಗ ನಾವು ಹೋದ ಸ್ಥಳಗಳಲ್ಲಿ ಸಿಗುವ ನೀರನ್ನು ಕುಡಿಯಬೇಕಾಗುತ್ತದೆ. ಆದರೆ ಇತ್ತೀಚಿಗೆ ಕೆಲವು ಕಂಪೆನಿಗಳ ಬಾಟಲ್ ನೀರು ಕೂಡ ಕುಡಿಯಲು ಯೋಗ್ಯವಲ್ಲ ಎಂದು ಆರೋಗ್ಯ ಇಲಾಖೆ ಹೇಳುತ್ತಿರುವುದರಿಂದ ನೀರು ಶುದ್ಧವಾಗಿರುತ್ತದೆಯೋ? ಇಲ್ಲವೋ ಎಂಬ ಅನುಮಾನ ಹುಟ್ಟಿಕೊಳ್ಳುತ್ತದೆ ಅಂತಹ ಸಂದರ್ಭಗಳಲ್ಲಿ ಶುದ್ಧ ನೀರು ಕುಡಿಯುವುದು ಹೇಗೆ? ಫಿಲ್ಟರ್ ಇಲ್ಲದೆಯೇ ಶುದ್ಧ ನೀರು ಕುಡಿಯಲು ಸಾಧ್ಯವಿದೆಯೇ ಎಂಬುದನ್ನು ತಿಳಿದುಕೊಳ್ಳಿ ಮಾಹಿತಿ ಇಲ್ಲಿದೆ.
- Preethi Bhat Gunavante
- Updated on: Apr 11, 2025
- 5:56 pm
Travel Tips: ಪ್ರಧಾನಿ ಮೋದಿ ಉದ್ಘಾಟಿಸಿದ ಪಂಬನ್ ಸೇತುವೆ ಬಳಿ ಇವೆ ಅದ್ಭುತ ತಾಣಗಳು
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 6 ರಂದು ರಾಮೇಶ್ವರಕ್ಕೆ ಪ್ರಮುಖ ಸಂಪರ್ಕ ಸೇತುವೆಯಾದ ಪಂಬನ್ ಸೇತುವೆಯನ್ನು ಉದ್ಘಾಟಿಸಿದ್ದಾರೆ. ಇದು ಭಾರತದ ಮೊದಲ ವರ್ಟಿಕಲ್ ಲಿಫ್ಟ್ ರೈಲು-ಸಮುದ್ರ ಸೇತುವೆಯಾಗಿದ್ದು, 550 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಂಡಿದೆ. 2.08 ಕಿ.ಮೀ ಉದ್ದದ ಈ ಸೇತುವೆಯು ದೊಡ್ಡ ಹಡಗುಗಳ ಸಂಚಾರಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲ್ಪಟ್ಟಿದೆ. ನೀವು ಕೂಡ ಇಲ್ಲಿಗೆ ಭೇಟಿ ನೀಡುವ ಯೋಚನೆಯಲ್ಲಿದ್ದರೆ ಇಲ್ಲಿನ ಪ್ರಮುಖ ಪ್ರವಾಸಿ ಹಾಗೂ ಆಧ್ಯಾತ್ಮಿಕ ತಾಣಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: Apr 9, 2025
- 12:54 pm
ಬೇಸಿಗೆ ರಜೆ: ಬೆಂಗಳೂರು, ಮೈಸೂರಿನಿಂದ ಕಲಬುರಗಿ, ಹುಬ್ಬಳ್ಳಿ, ಬೆಳಗಾವಿಗೆ ವಿಶೇಷ ರೈಲು
ಬೇಸಿಗೆ ರಜೆಯಿಂದ ರೈಲುಗಳಲ್ಲಿ ಹೆಚ್ಚುವರಿ ದಟ್ಟಣೆ ನಿರ್ವಹಣೆಗಾಗಿ, ನೈಋತ್ಯ ರೈಲ್ವೆ ಬೆಂಗಳೂರು, ಮೈಸೂರಿನಿಂದ ಕಲಬುರಗಿ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ವಿವಿಧ ನಗರಗಳಿಗೆ ವಿಶೇಷ ರೈಲುಗಳನ್ನು ಏರ್ಪಡಿಸಿದೆ. ಬೆಂಗಳೂರು-ಕಲಬುರಗಿ, ಮೈಸೂರು-ಅಜ್ಮೀರ್, ಬೆಂಗಳೂರು-ಭಗತ್ ಕಿ ಕೋಥಿ ಹಾಗೂ ಹುಬ್ಬಳ್ಳಿ-ಮುಜಾಫರ್‌ಪುರ ಮಾರ್ಗಗಳಲ್ಲಿ ವಿಶೇಷ ರೈಲುಗಳು ಸಂಚರಿಸಲಿವೆ. ಈ ರೈಲುಗಳ ಸಂಚಾರ ದಿನಾಂಕಗಳು ಮತ್ತು ಸಮಯಗಳ ಮಾಹಿತಿ ಲೇಖನದಲ್ಲಿದೆ.
- Vivek Biradar
- Updated on: Apr 4, 2025
- 9:03 pm
Shiva Temples: ಭಾರತದ ಹೊರತುಪಡಿಸಿ ವಿದೇಶದಲ್ಲಿರುವ ಪ್ರಮುಖ ಶಿವ ದೇವಾಲಯಗಳಿವು
ಭಾರತ ಹೊರತು ಪಡಿಸಿ ಬೇರೆ ರಾಷ್ಟ್ರಗಳಲ್ಲಿಯೂ ಶಿವನ ಆರಾಧಕರಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ? ಶ್ರೀಲಂಕಾದ ಮುನ್ನೇಶ್ವರಂ, ನೇಪಾಳದ ಪಶುಪತಿನಾಥ, ಆಸ್ಟ್ರೇಲಿಯಾದ ಮುಕ್ತಿ ಗುಪ್ತೇಶ್ವರ, ಪಾಕಿಸ್ತಾನದ ಕಟಾಸ್ ರಾಜ್, ಮಲೇಷ್ಯಾ ಮತ್ತು ಯುಎಸ್ಎಯಲ್ಲಿರುವ ದೇವಾಲಯಗಳ ಇತಿಹಾಸ ಮತ್ತು ವಿಶೇಷತೆಗಳನ್ನು ಈ ಲೇಖನ ವಿವರಿಸುತ್ತದೆ.
- Akshatha Vorkady
- Updated on: Mar 30, 2025
- 11:07 am
Tirtha Yatra: ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಭಾರತದ ಪ್ರಮುಖ ಆಧ್ಯಾತ್ಮಿಕ ತಾಣಗಳು
ವಿಶ್ವದಲ್ಲಿಯೇ ಭಾರತ ಆಧ್ಯಾತ್ಮಿಕ,ಧರ್ಮ, ಸಂಸ್ಕೃತಿಯನ್ನು ಒಳಗೊಂಡ ಅತ್ಯಂತ ಪವಿತ್ರವಾದ ದೇಶ. ಋಷಿಕೇಶದಿಂದ ಕನ್ಯಾಕುಮಾರಿವರೆಗೆ, ಈ ಲೇಖನದಲ್ಲಿ ಭಾರತದ ಪ್ರಮುಖ ಆಧ್ಯಾತ್ಮಿಕ ತಾಣಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರತಿಯೊಂದು ಸ್ಥಳದ ವಿಶಿಷ್ಟತೆ, ಇತಿಹಾಸ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಭಕ್ತಿ ಮತ್ತು ಶಾಂತಿಯ ಅನ್ವೇಷಣೆಗೆ ಈ ಪವಿತ್ರ ಸ್ಥಳಗಳು ಉತ್ತಮ ತಾಣಗಳಾಗಿವೆ.
- Akshatha Vorkady
- Updated on: Mar 22, 2025
- 10:21 am
ಬೇಸಿಗೆ ರಜೆಯಲ್ಲಿ ಧರ್ಮಸ್ಥಳಕ್ಕೆ ಹೋಗುವ ಪ್ಲ್ಯಾನ್ ಇದ್ಯಾ? ಹಾಗಿದ್ರೆ ಸಮೀಪದಲ್ಲಿರುವ ಈ ಪ್ರವಾಸಿ ತಾಣಗಳಿಗೂ ಭೇಟಿ ನೀಡಿ
ಬೇಸಿಗೆ ರಜೆಯಲ್ಲಿ ಕುಟುಂಬದೊಂದಿಗೆ ಧರ್ಮಸ್ಥಳಕ್ಕೆ ಪ್ರವಾಸ ಹೋಗಲು ಯೋಜಿಸುವವರಿಗೆ ಈ ಲೇಖನ ಸಹಾಯಕವಾಗಿದೆ. ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಜೊತೆಗೆ, ಬಾಹುಬಲಿ ದೇವಾಲಯ, ರಾಮ ಮಂದಿರ ಮತ್ತು ಮಂಜೂಷಾ ಮ್ಯೂಸಿಯಂಗಳಿಗೆ ಭೇಟಿ ನೀಡುವ ಬಗ್ಗೆ ಮಾಹಿತಿ ನೀಡಲಾಗಿದೆ. ಬೆಂಗಳೂರು, ಮಂಗಳೂರು ಮುಂತಾದ ಸ್ಥಳಗಳಿಂದ ಧರ್ಮಸ್ಥಳವನ್ನು ತಲುಪುವ ವಿವಿಧ ಪ್ರಯಾಣ ಮಾರ್ಗಗಳ ಬಗ್ಗೆಯೂ ವಿವರಗಳನ್ನು ಒಳಗೊಂಡಿದೆ.
- Akshatha Vorkady
- Updated on: Mar 20, 2025
- 3:56 pm
Summer Vacation: ಬೇಸಿಗೆ ರಜೆಯಲ್ಲಿ ಮಂತ್ರಾಲಯಕ್ಕೆ ಭೇಟಿ ನೀಡುವ ಯೋಚನೆ ಇದ್ಯಾ? ಹಾಗಿದ್ರೆ ಉಪಯುಕ್ತ ಮಾಹಿತಿ ಇಲ್ಲಿದೆ
ಪರೀಕ್ಷೆಗಳೆಲ್ಲಾ ಮುಗಿದು ಬೇಸಿಗೆ ರಜೆ ಇನ್ನೇನು ಆರಂಭವಾಗಲಿದೆ. ಬೇಸಿಗೆ ರಜೆಯಲ್ಲಿ ಮಂತ್ರಾಲಯಕ್ಕೆ ಭೇಟಿ ನೀಡಲು ಯೋಚಿಸುತ್ತಿದ್ದೀರಾ? ಬೆಂಗಳೂರಿನಿಂದ ಮಂತ್ರಾಲಯಕ್ಕೆ ವಿವಿಧ ಪ್ರಯಾಣ ಸೌಲಭ್ಯಗಳಿವೆ. ವಂದೇ ಭಾರತ್ ಎಕ್ಸ್ಪ್ರೆಸ್, ಇತರ ರೈಲುಗಳು, ಬಸ್ ಮತ್ತು ವಿಮಾನ ಮೂಲಕ ಹೋಗಬಹುದು. ವಿಮಾನದ ಮೂಲಕ ಹೈದರಾಬಾದ್ ಮೂಲಕ ಹೋಗಬೇಕಾಗುತ್ತದೆ. ಈ ಲೇಖನದಲ್ಲಿ ಪ್ರಯಾಣದ ವಿವರಗಳು, ವೆಚ್ಚ ಮತ್ತು ಸಮಯದ ಬಗ್ಗೆ ಮಾಹಿತಿ ನೀಡಲಾಗಿದೆ.
- Akshatha Vorkady
- Updated on: Mar 20, 2025
- 3:56 pm
Summer Vacation: ಕಡಲತೀರಗಳ ಸೌಂದರ್ಯ ಸವಿಯಲು ಬೇಸಿಗೆ ರಜೆಯಲ್ಲಿ ಮಕ್ಕಳೊಂದಿಗೆ ಇಲ್ಲಿಗೆ ಭೇಟಿ ನೀಡಿ
ಬೇಸಿಗೆ ರಜೆ ಇನ್ನೇನು ಆರಂಭವಾಗಲಿದೆ. ನಿಮ್ಮ ಮಕ್ಕಳೊಂದಿಗೆ ಕಡಲತೀರಗಳ ಸೌಂದರ್ಯ ಸವಿಯಲು ನೀವು ಬಯಸಿದರೆ ಗೋಕರ್ಣ ಒಂದು ಉತ್ತಮ ಆಯ್ಕೆಯಾಗಿದೆ. ಇಲ್ಲಿ 5 ಬೀಚ್ ಟ್ರೆಕ್ಕಿಂಗ್, ಗೋಕರ್ಣದ ಮಹಾಬಲೇಶ್ವರ ದೇವಾಲಯ, ಮತ್ತು ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮುಂತಾದ ಅನುಭವಗಳನ್ನು ನೀವು ಪಡೆಯಬಹುದು. ಬೆಂಗಳೂರಿನಿಂದ ರೈಲು, ಬಸ್ ಅಥವಾ ಕಾರಿನಲ್ಲಿ ತಲುಪಬಹುದು. ಕಡಲತೀರಗಳ ಸೌಂದರ್ಯ ಮತ್ತು ಆಧ್ಯಾತ್ಮಿಕ ಅನುಭವವನ್ನು ಒಂದೇ ಪ್ರವಾಸದಲ್ಲಿ ಪಡೆಯಬಹುದು.
- Akshatha Vorkady
- Updated on: Mar 20, 2025
- 3:56 pm