AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆ ರಜೆ: ಬೆಂಗಳೂರು, ಮೈಸೂರಿನಿಂದ ಕಲಬುರಗಿ, ಹುಬ್ಬಳ್ಳಿ, ಬೆಳಗಾವಿಗೆ ವಿಶೇಷ ರೈಲು

ಬೇಸಿಗೆ ರಜೆಯಿಂದ ರೈಲುಗಳಲ್ಲಿ ಹೆಚ್ಚುವರಿ ದಟ್ಟಣೆ ನಿರ್ವಹಣೆಗಾಗಿ, ನೈಋತ್ಯ ರೈಲ್ವೆ ಬೆಂಗಳೂರು, ಮೈಸೂರಿನಿಂದ ಕಲಬುರಗಿ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ವಿವಿಧ ನಗರಗಳಿಗೆ ವಿಶೇಷ ರೈಲುಗಳನ್ನು ಏರ್ಪಡಿಸಿದೆ. ಬೆಂಗಳೂರು-ಕಲಬುರಗಿ, ಮೈಸೂರು-ಅಜ್ಮೀರ್, ಬೆಂಗಳೂರು-ಭಗತ್ ಕಿ ಕೋಥಿ ಹಾಗೂ ಹುಬ್ಬಳ್ಳಿ-ಮುಜಾಫರ್‌ಪುರ ಮಾರ್ಗಗಳಲ್ಲಿ ವಿಶೇಷ ರೈಲುಗಳು ಸಂಚರಿಸಲಿವೆ. ಈ ರೈಲುಗಳ ಸಂಚಾರ ದಿನಾಂಕಗಳು ಮತ್ತು ಸಮಯಗಳ ಮಾಹಿತಿ ಲೇಖನದಲ್ಲಿದೆ.

ಬೇಸಿಗೆ ರಜೆ: ಬೆಂಗಳೂರು, ಮೈಸೂರಿನಿಂದ ಕಲಬುರಗಿ, ಹುಬ್ಬಳ್ಳಿ, ಬೆಳಗಾವಿಗೆ ವಿಶೇಷ ರೈಲು
ಹುಬ್ಬಳ್ಳಿ ರೈಲು ನಿಲ್ದಾಣ
ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on:Apr 04, 2025 | 9:03 PM

Share

ಹುಬ್ಬಳ್ಳಿ, ಏಪ್ರಿಲ್​ 04: ಬೇಸಿಗೆ ರಜೆ (Summer Holiday) ಆರಂಭವಾಗಿದ್ದು, ಜನರು ತಮ್ಮ ತಮ್ಮ ಊರು ಅಥವಾ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಇದರಿಂದ, ರೈಲುಗಳಲ್ಲಿ (Train) ಸಹಜವಾಗಿ ದಟ್ಟಣೆ ಹೆಚ್ಚಾಗಿದೆ. ಈ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಬಿಟ್ಟಿದೆ. ಬೆಂಗಳೂರು ಮತ್ತು ಮೈಸೂರಿನಿಂದ ಕಲಬುರಗಿ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ನಗರಗಳಿಗೆ ವಿಶೇಷ ರೈಲು ಬಿಟ್ಟಿದೆ. ಹಾಗೇ, ಬೆಳಗಾವಿ-ಮಿರಜ್​ ನಡುವಿನ ವಿಶೇಷ ರೈಲು ಸಂಚಾರ ಸೇವೆಯನ್ನು ವಿಸ್ತರಿಸಲಾಗಿದೆ.

ಬೆಂಗಳೂರು-ಕಲಬುರಗಿ ನಡುವೆ ವಿಶೇಷ ರೈಲು

ಎಸ್.ಎಂ.ವಿ.ಟಿ. ಬೆಂಗಳೂರು ಮತ್ತು ಕಲಬುರಗಿಯ ನಡುವೆ ಎರಡೂ ಕಡೆಯಿಂದ 30 ಟ್ರಿಪ್ ವಿಶೇಷ ರೈಲುಗಳು ಸಂಚರಿಸಲಿವೆ.

ರೈಲು ಸಂಖ್ಯೆ 06519: ಎಸ್.ಎಂ.ವಿ.ಟಿ. ಬೆಂಗಳೂರು-ಕಲಬುರಗಿ ಬೇಸಿಗೆ ವಿಶೇಷ ಎಕ್ಸ್ ಪ್ರೆಸ್ ರೈಲು ಈ ಕೆಳಕಂಡ ದಿನಾಂಕಗಳಂದು ಎಸ್.ಎಂ.ವಿ.ಟಿ. ಬೆಂಗಳೂರಿನಿಂದ ರಾತ್ರಿ 9.15ಕ್ಕೆ ಹೊರಡಲಿದ್ದು ಮರುದಿನ ಬೆಳಿಗ್ಗೆ 07.40ಕ್ಕೆ ಕಲಬುರಗಿಯನ್ನು ತಲುಪಲಿದೆ.

ಇದನ್ನೂ ಓದಿ
Image
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
Image
ಶುಭ ಸುದ್ದಿ ನೀಡಿದ ರೈಲ್ವೆ: ಈ ನಿಲ್ದಾಣದಲ್ಲಿ ವಂದೇ ಭಾರತ್ ನಿಲುಗಡೆಗೆ ಆದೇಶ
Image
ಭಾರತಕ್ಕೆ ಶೀಘ್ರದಲ್ಲೇ ಈ ದೇಶದಿಂದ ಅಂಡರ್​ವಾಟರ್ ರೈಲು ಸಂಚಾರ ಆರಂಭ
Image
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
  • ಏಪ್ರಿಲ್​: ದಿನಾಂಕ 2, 4, 5, 6, 11, 12, 13, 18, 19, 20, 25, 26 ಮತ್ತು 27 ರಂದು
  • ಮೇ: ದಿನಾಂಕ 2 2, 3, 4, 9, 10, 11, 16, 17, 18, 23, 24 ಮತ್ತು 25 ರಂದು
  • ಜೂನ್​: ದಿನಾಂಕ 2 6, 7, 8, 13, 14 ಮತ್ತು 15 ರಂದು ಸಂಚರಿಸಲಿದೆ.

ರೈಲು ಸಂಖ್ಯೆ 06520: ಕಲಬುರಗಿ- ಎಸ್.ಎಂ.ವಿ.ಟಿ. ಬೆಂಗಳೂರು ಬೇಸಿಗೆ ವಿಶೇಷ ಎಕ್ಸ್ ಪ್ರೆಸ್ ರೈಲು ಈ ಕೆಳಕಂಡ ದಿನಾಂಕಗಳಂದು ಬೆಳಿಗ್ಗೆ 09.35 ಗಂಟೆಗೆ ಕಲಬುರಗಿಯಿಂದ ಹೊರಡಲಿದ್ದು ಅದೇ ದಿನ ರಾತ್ರಿ 8 ಗಂಟೆಗೆ ಎಸ್.ಎಂ.ವಿ.ಟಿ. ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.

  • ಏಪ್ರಿಲ್​: ದಿನಾಂಕ 5, 6, 7, 12, 13, 14, 19, 20, 21, 26, 27 ಮತ್ತು 28 ರಂದು
  • ಮೇ: ದಿನಾಂಕ 3, 4, 5, 10, 11, 12, 17, 18, 19, 24, 25, 25 ಮತ್ತು 26 ರಂದು
  • ಜೂನ್: ದಿನಾಂಕ 7,8,9,14,15 ಮತ್ತು 16 ರಂದು ಸಂಚರಿಸಲಿದೆ.

ಮೈಸೂರು-ಅಜ್ಮೀರ್ ಬೇಸಿಗೆ ವಿಶೇಷ ರೈಲು​

  • ರೈಲು ಸಂಖ್ಯೆ 06281/06282: ಮೈಸೂರು-ಅಜೀರ್ ಎಕ್ಸ್​​ಪ್ರೆಸ್​ ಬೇಸಿಗೆ ವಿಶೇಷ ರೈಲು ಒಟ್ಟು 11 ಟ್ರಿಪ್ ಸಂಚರಿಸಲಿದೆ.
  • ರೈಲು ಸಂಖ್ಯೆ 06281: ಎಸ್​ಎಂವಿಟಿ ಬೆಂಗಳೂರಿನಿಂದ ಏಪ್ರಿಲ್​ನಲ್ಲಿ (ದಿನಾಂಕ 5,12,19, 26 ರಂದು) ಹಾಗೂ ಮೇನಲ್ಲಿ (ದಿನಾಂಕ 3,10,17,24,31 ರಂದು) ಮತ್ತು ಜೂನ್​ನಲ್ಲಿ (7 ಮತ್ತು14) ರಂದು ಬೆಳಿಗ್ಗೆ 8:00 ಕ್ಕೆ ಹೊರಟು, ಸೋಮವಾರ ಬೆಳಿಗ್ಗೆ 06:55 ಕ್ಕೆ ಅಜೇರ್ ತಲುಪುತ್ತದೆ.
  • ರೈಲು ಸಂಖ್ಯೆ 06282: ಅಜ್ಮೀರ್​ನಿಂದ ಪ್ರತಿ ಸೋಮವಾರ ಏಪ್ರಿಲ್​​ನಿಂದ (7,14,21,28) ಮೇನಲ್ಲಿ (5,12,19,26) ಮತ್ತು ಜೂನ್​ನಲ್ಲಿ (2,9,16) ರಂದು ಸಂಜೆ 06:50 ಕ್ಕೆ ಹೊರಟು, ಬುಧವಾರ ಸಂಜೆ 5:30 ಕ್ಕೆ ಮೈಸೂರು ತಲುಪುತ್ತದೆ.

ಈ ರೈಲುಗಳು ಹಾಸನ, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ವೆಂಟ್, ಹೊಸಪೇಟೆ ಜಂಕ್ಷನ್, ಕೊಪ್ಪಳ, ಗದಗ, ಎಸ್‌ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಬೆಳಗಾವಿ, ಗೋಕಾಕ್ ರಸ್ತೆ, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗ್ಲಿ, ಪುಣೆ, ಲೋನಾವಾಲಾ, ಕಲಾಣ್, ವಸಾಯಿ ರೋಡ್, ಸೂರತ್, ವಡೋದರಾ, ರತ್ನಾಂ, ಮಂದಸೋರ್, ನಿಮಾಚ್, ಚಿತ್ತೇರ್ಗಡ್, ಭಿಲ್ವಾರಾ, ಬಿಜೈನಗರ, ನಾಸಿರಾಬಾದ್ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

ಬೆಂಗಳೂರು – ಭಗತ್ ಕಿ ಕೋಥಿ

ರೈಲು ಸಂಖ್ಯೆ 06557/06558 ಎಸ್‌ಎಂವಿಟಿ ಬೆಂಗಳೂರು – ಭಗತ್ ಕಿ ಕೋಥಿ – ಎಸ್‌ಎಂವಿಟಿ ಬೆಂಗಳೂರು ಬೇಸಿಗೆ ವಿಶೇಷ ರೈಲು ಒಟ್ಟು 8 ಟ್ರಿಟ್​ ಸಂಚರಿಸಲಿದೆ.

  • ರೈಲು ಸಂಖ್ಯೆ 06557: ಎಸ್​ಎಂವಿಟಿ ಬೆಂಗಳೂರಿನಿಂದ ಏಪ್ರಿಲ್​ನಲ್ಲಿ (ದಿನಾಂಕ5, 12, 19, 26) ಹಾಗೂ ಮೇನಲ್ಲಿ (3, 10, 17, 24) ರಂದು ಸಂಜೆ 7:00 ಗಂಟೆಗೆ ಹೊರಟು, ಸೋಮವಾರ ಮಧ್ಯಾಹ್ನ 1:40 ಕ್ಕೆ ಭಗತ್ ಕಿ ಕೋಥಿಯನ್ನು ತಲುಪಲಿದೆ.
  • ರೈಲು ಸಂಖ್ಯೆ 06558: ಭಗತ್​ ಕೋಥಿಯಿಂದ ಏಪ್ರಿಲ್​ನಲ್ಲಿ (ದಿನಾಂಕ 7, 14, 21, 28) ಹಾಗೂ ಮೇನಲ್ಲಿ (ದಿನಾಂಕ 5, 12, 19, 26) ರಂದು ರಾತ್ರಿ 11:10 ಕ್ಕೆ ಹೊರಟು, ಬುಧವಾರ ಮಧ್ಯಾಹ್ನ 3:30 ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.

ಈ ರೈಲುಗಳು ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗೋಕಾಕ್ ರಸ್ತೆ, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗ್ಲಿ, ಕರಡ್, ಸತಾರಾ, ಪುಣೆ, ಲೋನಾವಾಲಾ, ಕಲಾಣ್, ಸಾಯಿ ರೋಡ್, ಸೂರತ್, ವಡೋದರಾ, ಸಬರಮತಿ, ಮಹೇಸಾನಾ, ಭಿಲಿ, ರಾಣಿವಾರ ಮಾರ್ವಾರ್, ಬಿನ್ನಲ್ ಮೊದ್ರನ್, ಜಲೋರ್, ಮೊಕಲ್ಲರ್, ಸಂಧಾರಿ ಜಂಕ್ಷನ್, ಲುನಿ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

ಹುಬ್ಬಳ್ಳಿ-ಮುಜಾಫರ್‌ಪುರ-ಹುಬ್ಬಳ್ಳಿ ನಿಲ್ದಾಣಗಳ ನಡುವೆ 08 ಟ್ರಿಪ್ ವಿಶೇಷ ರೈಲು ಸಂಚಾರ

  • ರೈಲು ಸಂಖ್ಯೆ 07315: ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ-ಮುಜಾಫರ್​​ಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಏಪ್ರಿಲ್​ನಲ್ಲಿ (ದಿನಾಂಕ 7, 14, 21, 28) ಮೇನಲ್ಲಿ (ದಿನಾಂಕ 5, 12, 19, 26) ರಂದು ಸಂಜೆ 5:20ಕ್ಕೆ ಹೊರಟು ಬುಧವಾರ ಮಧ್ಯಾಹ್ನ 12.30 ಗಂಟೆಗೆ ಮುಜಾಫರ್‌ಪುರ ನಿಲ್ದಾಣವನ್ನು ತಲುಪಲಿದೆ.
  • ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 07316: ಏಪ್ರಿಲ್​ನಲ್ಲಿ (ದಿನಾಂಕ10, 17, 24) ಮೇ (ದಿನಾಂಕ 1,8,15,22,29) ಮುಜಾಫರ್‌ಪುರ ನಿಲ್ದಾಣದಿಂದ ಗುರುವಾರ ಮಧ್ಯಾಹ್ನ 2:15 ಕ್ಕೆ ಹೊರಟು, ಶನಿವಾರ ಬೆಳಿಗ್ಗೆ 10:30 ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

ಇದನ್ನೂ ನೋಡಿ: ಹಾಸನ: ಭಾರಿ ಮಳೆಗೆ ಸೋರುತಿಹುದು ರೈಲ್ವೆ ನಿಲ್ದಾಣ ಮಾಳಿಗಿ!

ಈ ರೈಲು ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಅಹ್ಮದ್‌ನಗರ, ಕೋಪರ್‌ಗಾಂವ್, ಮನ್ನಾಡ್, ಭೂಸಾವಲ್, ಖಾಂಡಾ, ಇಟಾರ್ಸಿ, ನರಸಿಂಗ್‌ಪುರ, ಜಬಲ್‌ಪುರ, ಕಟ್ಟಿ, ಸತ್ತಾ, ಮಾಣಿ‌ಕ್‌ಪುರ, ಪ್ರಯಾಗ್‌ರಾಜ್ ಛೋಕಿ, ವಂಡಿತ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸಾರ್, ಅರಾ, ದಾನಾಪುರ, ಪಾಟ್ಲಿಪುತ್ರ, ಮತ್ತು ಹಾಜಿಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:22 pm, Fri, 4 April 25

Follow Us
Vivek Biradar
Vivek Biradar

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.