ದೇಹದಲ್ಲಿ ಈ ಲಕ್ಷಣ ಕಾಣಿಸಿಕೊಂಡರೆ ನಿಮಗೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ
ನಮ್ಮ ದೇಹಕ್ಕೆ ಕೊಲೆಸ್ಟ್ರಾಲ್ ಅಗತ್ಯ. ಆದರೆ ಇದು ಹೆಚ್ಚಾದರೆ ಅದು ಒಳ್ಳೆಯದಲ್ಲ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ದೇಹ ನೀಡುವಂತಹ ಮುನ್ಸೂಚನೆಗಳನ್ನು ಕಡೆಗಣಿಸದೆಯೇ ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದನ್ನು ತಡೆಗಟ್ಟುವುದು ಬಹಳ ಒಳ್ಳೆಯದು. ಹಾಗಾದರೆ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿದೆಯೋ? ಇಲ್ಲವೋ ಎಂಬುದನ್ನು ತಿಳಿಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ನಮ್ಮ ದೇಹಕ್ಕೆ ಕೊಲೆಸ್ಟ್ರಾಲ್ (Cholesterol) ಬಹಳ ಮುಖ್ಯ ಆದರೆ ಅದು ಜಾಸ್ತಿಯಾದರೆ ನಾನಾ ರೀತಿಯ ಆರೋಗ್ಯ (Health) ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವರಿಗೆ ಕೊಲೆಸ್ಟ್ರಾಲ್ ಎಂದರೆ ಏನು ಎಂಬುದೇ ತಿಳಿದಿರುವುದಿಲ್ಲ. ಇವು ಒಂದು ರೀತಿಯ ಕೊಬ್ಬಿನ ಮೇಣವಾಗಿದ್ದು ಹೊಸ ಕೋಶ ಹಾಗೂ ಹಾರ್ಮೋನ್ ಗಳನ್ನು ಉತ್ಪತ್ತಿ ಮಾಡುತ್ತದೆ. ಆದರೆ ಕೆಟ್ಟ ಕೊಲೆಸ್ಟ್ರಾಲ್ (Bad cholesterol) ಮಟ್ಟವು ಹೆಚ್ಚಾದಾಗ ಅದರಿಂದ ಹೃದಯದ ಕಾಯಿಲೆಗಳು, ಪಾರ್ಶ್ವವಾಯು (Paralysis) ಸಮಸ್ಯೆ ಬರಬಹುದು. ಹಾಗಾದರೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂಬುದನ್ನು ತಿಳಿಯುವುದು ಹೇಗೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ. ಸಾಮಾನ್ಯವಾಗಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ನಮ್ಮ ದೇಹ ನಮಗೆ ಕೆಲವು ಸಂದೇಶಗಳನ್ನು ನೀಡುತ್ತದೆ ಅವುಗಳನ್ನು ಸಮಯಕ್ಕೆ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಹಾಗಾದರೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದು ತಿಳಿಯುವುದು ಹೇಗೆ? ಇಲ್ಲಿದೆ ಮಾಹಿತಿ.
ಎದೆನೋವು:
ಕೊಲೆಸ್ಟ್ರಾಲ್ ಹೆಚ್ಚಾದಾಗ ಕೆಲವರಲ್ಲಿ ಎದೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಕಾಲುನೋವು ಮತ್ತು ಸೆಳೆತ:
ಕೆಲವರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಜಾಸ್ತಿಯಾಗಿ ಕಣ್ಣುಗಳು ಊದಿಕೊಳ್ಳುತ್ತದೆ. ಮತ್ತೊಂದಿಷ್ಟು ಜನರಿಗೆ ಮೈ- ಕೈ ನೋವು ಅದರಲ್ಲಿಯೂ ಹೆಚ್ಚಿನವರಲ್ಲಿ ಕಾಲುನೋವು ಮತ್ತು ಸೆಳೆತ ಕಂಡು ಬರುತ್ತದೆ.
ತಲೆ ತಿರುಗುವಿಕೆ:
ಈ ಅನುಭವ ಹಲವರಲ್ಲಿ ಕಂಡು ಬಂದಿರಬಹುದು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣ ಮೀರಿದಾಗ ಪದೇ ಪದೇ ತಲೆ ತಿರುಗುವ ಅನುಭವ ಆಗುತ್ತದೆ. ಇದು ಕೆಲವರರಿಗೆ ದಣಿವಿನಿಂದಲೂ ಆಗಬಹುದು.
ಇದನ್ನೂ ಓದಿ: ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಾ? ಬುಧವಾರ, ಶನಿವಾರ ಸಂಜೆ ಈ ರೀತಿ ಮಾಡಿ
ಉಸಿರಾಟದ ತೊಂದರೆ:
ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಉಸಿರಾಟದ ಸಮಸ್ಯೆಗಳು ಕಂಡು ಬರುತ್ತದೆ ಅದರಲ್ಲಿಯೂ ರಾತ್ರಿ ಮಲಗಿರುವ ಸಮಯದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.
ಆಯಾಸ:
ನಿಮಗೆ ಯಾವುದೇ ರೀತಿಯ ಕೆಲಸ ಮಾಡಿದ್ದಾಗಲೂ ಅತಿಯಾದ ಸುಸ್ತು, ಆಯಾಸ ಕಂಡು ಬರುತ್ತಿದ್ದರೆ ತಡಮಾಡದೆಯೇ ವೈದ್ಯರನ್ನು ಸಂಪರ್ಕ ಮಾಡಿ ಇದು ಕೊಲೆಸ್ಟ್ರಾಲ್ ಹೆಚ್ಚಾಗಿರುವ ಸೂಚನೆಯಾಗಿರಬಹುದು.
ಹೊಟ್ಟೆ ಉಬ್ಬುವುದು:
ಕೆಲವರು ಊಟ, ತಂಡಿ ಸರಿಯಾಗಿ ಮಾಡದಿದ್ದರೂ ಹೊಟ್ಟೆ ಉಬ್ಬಿರುತ್ತದೆ. ಇದನ್ನು ಹೆಚ್ಚಿನವರು ಗ್ಯಾಸ್ಟ್ರಿಕ್ ಸಮಸ್ಯೆ ಎಂದುಕೊಳ್ಳುತ್ತಾರೆ. ಆದರೆ ಇದು ಕೊಲೆಸ್ಟ್ರಾಲ್ ಹೆಚ್ಚಾಗಿರುವ ಲಕ್ಷ್ಣವಾಗಿರಬಹುದು.
ದವಡೆಯಲ್ಲಿ ನೋವು ಕಾಣಿಸಿಕೊಳ್ಳುವುದು:
ದವಡೆಯಲ್ಲಿ ಪದೇ ಪದೇ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದು ಕೊಲೆಸ್ಟ್ರಾಲ್ ಹೆಚ್ಚಾಗಿರುವ ಸೂಚನೆಯಾಗಿರಬಹುದು.
ಕತ್ತಿನ ಹಿಂಭಾಗದಲ್ಲಿ ನೋವು:
ನೀವು ತುಂಬಾ ಹೊತ್ತು ಕುಳಿತು ಕೆಲಸ ಮಾಡುವವರಾಗಿದ್ದರೆ ಬೆನ್ನು, ಕಟ್ಟು ನೋವು ಬರುವುದು ಸಾಮಾನ್ಯ. ಆದರೆ ಯಾವುದೇ ಕಾರಣಗಳಿಲ್ಲದೆ ಪದೇ ಪದೇ ಕತ್ತಿನ ಹಿಂಭಾಗದಲ್ಲಿ ನೋವು ಕಂಡು ಬರುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ.
ಇದರ ಹೊರತಾಗಿ ಕೆಲವರಿಗೆ ದೇಹ ಹಳದಿಯಾಗುವುದು, ಕಣ್ಣಿನ ಕೆಳಗೆ ಊದಿಕೊಳ್ಳುವುದು, ಮೊಡವೆಗಳು ಜಾಸ್ತಿಯಾಗುವುದು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಕಂಡು ಬರಬಹುದು. ಈ ಮಾಹಿತಿಯನ್ನು karavali_queen_1990 ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ