AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!: ಮೈ ರೋಮಾಂಚನಗೊಳಿಸುವ ವಿಡಿಯೋ

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!: ಮೈ ರೋಮಾಂಚನಗೊಳಿಸುವ ವಿಡಿಯೋ

ಅಕ್ಷಯ್​ ಪಲ್ಲಮಜಲು​​
|

Updated on: May 31, 2026 | 11:02 PM

Share

ಅಹಮದಾಬಾದ್ ಸ್ಟೇಡಿಯಂನಲ್ಲಿ ಐಪಿಎಲ್ ಫೈನಲ್‌ನ ಮಿಡ್ ಇನ್ನಿಂಗ್ಸ್ ವೇಳೆ ಶಿವ ತಾಂಡವ ಸ್ತೋತ್ರ ಮೊಳಗಿದ್ದು, ಇಡೀ ಕ್ರೀಡಾಂಗಣ ಹರಹರ ಮಹಾದೇವ ಘೋಷಣೆಯಿಂದ ಪ್ರತಿಧ್ವನಿಸಿದೆ. ಈ ವಿಡಿಯೋವನ್ನು ಎಕ್ಸ್​​ನಲ್ಲಿ ಭಾರತೀಯ ಕ್ರಿಕೆಟ್​​​​​ ಎಂಬ ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಹಾಡನ್ನು ಕೇಳುತ್ತಿರುವಾಗ ಮೈ ರೋಮಾಂಚನಗೊಳಿಸುತ್ತದೆ.

ಅಹಮದಾಬಾದ್, ಮೇ,31: ಐಪಿಎಲ್ 2026 ರ ಫೈನಲ್ ಮಹಾಸಮರದ ಬ್ಯಾಟಿಂಗ್ ಹಾಗೂ ಬೌಲಿಂಗ್ ಅಬ್ಬರದ ನಡುವೆಯೇ, ಕ್ರೀಡಾಂಗಣದಲ್ಲಿದ್ದ ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳನ್ನು ಆಧ್ಯಾತ್ಮಿಕ ಲೋಕಕ್ಕೆ ಕೊಂಡೊಯ್ಯುವ ಭವ್ಯ ದೃಶ್ಯವೊಂದು ಸಾಕ್ಷಿಯಾಗಿದೆ. ಪಂದ್ಯದ ಮಧ್ಯಂತರದ ಬಿಡುವಿನ ವೇಳೆಯಲ್ಲಿ ಇಡೀ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ‘ಶಿವ ತಾಂಡವ ಸ್ತೋತ್ರ’ ಭರ್ಜರಿಯಾಗಿ ಮೊಳಗಿದ್ದು, ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳಲ್ಲಿ ಮೈರೋಮಾಂಚನ ಸೃಷ್ಟಿಸಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯದ ಮೊದಲ ಇನ್ನಿಂಗ್ಸ್ ಮುಗಿಯುತ್ತಿದ್ದಂತೆ ಹೈ-ವೋಲ್ಟೇಜ್ ಧ್ವನಿವರ್ಧಕಗಳಲ್ಲಿ ಕಿವಿಗೆ ಇಂಪಾಗುವ ಹಾಗೂ ಜೋಶ್ ತುಂಬುವ ‘ಶಿವ ತಾಂಡವ’ ಪ್ಲೇ ಮಾಡಲಾಯಿತು. ಇದರ ಬೆನ್ನಲ್ಲೇ ಸ್ಟೇಡಿಯಂನಲ್ಲಿದ್ದ ಸರಿಸುಮಾರು ಒಂದು ಲಕ್ಷಕ್ಕೂ ಅಧಿಕ ಕ್ರಿಕೆಟ್ ಅಭಿಮಾನಿಗಳು ಒಕ್ಕೊರಲಿನಿಂದ ‘ಹರ ಹರ ಮಹಾದೇವ’ ಎಂದು ಜಯಘೋಷಗಳನ್ನು ಕೂಗಲು ಆರಂಭಿಸಿದರು. ಕ್ರೀಡಾಂಗಣದ ಮೂಲೆ ಮೂಲೆಗಳಲ್ಲೂ ಭಗವಾನ್ ಶಿವನ ಆರಾಧನೆಯ ಮಂತ್ರಗಳು ಪ್ರತಿಧ್ವನಿಸುತ್ತಿದ್ದ ಈ ಅದ್ಭುತ ಕ್ಷಣದ ವಿಡಿಯೋಗಳು ಇಂಟರ್ನೆಟ್‌ನಲ್ಲಿ ಸನ್ಸೇಷನ್ ಸೃಷ್ಟಿಸಿವೆ. ಕ್ರಿಕೆಟ್ ಮೈದಾನವೊಂದು ಕಣ್ಣುಮುಚ್ಚಿ ತೆರೆಯುವುದರೊಳಗೆ ಆಧ್ಯಾತ್ಮಿಕ ಸಾಗರದಂತೆ ಬದಲಾದ ದೃಶ್ಯವನ್ನು ಕಂಡು ನೆಟ್ಟಿಗರು “ಗೂಸ್‌ಬಂಪ್ಸ್ ಗ್ಯಾರಂಟಿ!” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲೇ ಇಂತಹದೊಂದು ಭಕ್ತಿ ಪ್ರಧಾನ ಜ್ವರ ಉತ್ತುಂಗಕ್ಕೆ ತಲುಪಿದ್ದು ಇದೇ ಮೊದಲು ಎಂದು ವಿಶ್ಲೇಷಿಸಲಾಗುತ್ತಿದೆ. ಈ ವಿಡಿಯೋವನ್ನು ಎಕ್ಸ್​​ನಲ್ಲಿ ಭಾರತೀಯ ಕ್ರಿಕೆಟ್​​​​​ ಎಂಬ ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us