Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಯಬೇಡ, ತೆಂಗಿನಕಾಯಿ ತಿನ್ನುವುದರಿಂದ ದೇಹದ ಕೊಬ್ಬು ಹೆಚ್ಚಾಗುವುದಿಲ್ಲ

ನಮ್ಮ ಆಹಾರ ಕ್ರಮದ ಬಗ್ಗೆ ಕೆಲವೊಂದು ತಪ್ಪು ಕಲ್ಪನೆಯಿಂದ ನಮ್ಮ ದೇಹಕ್ಕೆ ಸಿಗಬೇಕಾದ ಪ್ರೋಟಿನ್​​ ಕಡಿಮೆ ಆಗುತ್ತದೆ. ಅನೇಕರಿಗೆ ತೆಂಗಿನ ಕಾಯಿ ಹಾಕಿದ ಆಹಾರ ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂಬ ಭಯವಿದೆ. ಆದರೆ ಇದು ತಪ್ಪು ಮಾಹಿತಿ, ನಮ್ಮ ದೇಹದಲ್ಲಿ ತೆಂಗಿನಕಾಯಿ ಯಾವುದೇ ಅಪಾಯವನ್ನು ಉಂಟು ಮಾಡುವುದಿಲ್ಲ. ಹಾಗಾದರೆ ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಯಾವೆಲ್ಲ ಆಹಾರಗಳನ್ನು ಸೇವನೆ ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ನೋಡಿ.

ಭಯಬೇಡ, ತೆಂಗಿನಕಾಯಿ ತಿನ್ನುವುದರಿಂದ ದೇಹದ ಕೊಬ್ಬು ಹೆಚ್ಚಾಗುವುದಿಲ್ಲ
ಸಾಂದರ್ಭಿಕ ಚಿತ್ರ Image Credit source: Getty Images
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 12, 2025 | 1:09 PM

ಈ ದಕ್ಷಿಣ ಭಾಗದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ತೆಂಗಿನ ಕಾಯಿ (coconut) ಇಲ್ಲದೆ ಯಾವುದೇ ಅಡುಗೆ ಆಗುವುದಿಲ್ಲ. ಅದರಲ್ಲೂ ದಕ್ಷಿಣ ಕನ್ನಡದಲ್ಲಿ (ಮಂಗಳೂರು) ತೆಂಗಿನ ಕಾಯಿ ಹೆಚ್ಚು ಉಪಯೋಗಿಸುತ್ತಾರೆ. ಆದರೆ ತೆಂಗಿನ ಕಾಯಿ ಈ ಬೇಸಿಗೆಯಲ್ಲಿ ನಮ್ಮ ದೇಹಕ್ಕೆ ಒಳ್ಳೆಯದ ಎಂಬುದು ಅನೇಕರ ಪ್ರಶ್ನೆ. ಈ ಬೇಸಿಗೆಯಲ್ಲಿ ತೆಂಗಿನ ಕಾಯಿ ಅಥವಾ ತೆಂಗಿನ ಕಾಯಿಯನ್ನು ಅಡುಗೆಯಲ್ಲಿ ಬಳಸಿದ್ರೆ ಏನು ಸಮಸ್ಯೆ ಬರುತ್ತದೆ ಎಂಬ ಗೊಂದಲ ನಿಮ್ಮ ಇರಬಹುದು ಅದಕ್ಕೆ ಇಲ್ಲಿದೆ ಉತ್ತರ. ನಮ್ಮ ದೇಹದಲ್ಲಿ ಮೂರು ರೀತಿಯ ಕೊಲೆಸ್ಟ್ರಾಲ್ ಇರುತ್ತದೆ. ಒಂದು HDL (ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್) ಒಳ್ಳೆಯ ಕೊಲೆಸ್ಟ್ರಾಲ್, ಇದು ನಮ್ಮ ದೇಹದ ಆರೋಗ್ಯವನ್ನು ಉತ್ತಮವಾಗಿ ಇಡುತ್ತದೆ. ಇನ್ನು LDL (ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್) ಮತ್ತು TGL (ಟ್ರೈಗ್ಲಿಸರೈಡ್‌) ಎರಡು ರೀತಿಯ ಕೆಟ್ಟ ಕೊಬ್ಬು, ಇದು ತುಂಬಾ ಹೆಚ್ಚಿದ್ರೆ ಹೃದಯ ಕಾಯಿಲೆಯ ಅಪಾಯವಿದೆ. ಅದಕ್ಕಾಗಿ ಇದನ್ನು ನಿಯಂತ್ರಣದಲ್ಲಿ ಇಡಬೇಕು.

ನಮ್ಮ ದೇಹದಲ್ಲಿ ಇನ್ಸುಲಿನ್ ಸರಿಯಾಗಿ ಕೆಲಸ ಮಾಡದಿದ್ದರೆ, ಅಧಿಕ ಕೊಲೆಸ್ಟ್ರಾಲ್ ಬರುವ ಅಪಾಯವಿದೆ. ಇನ್ಸುಲಿನ್ ಎಂಬ ಅಂಶವ ನಮ್ಮ ದೇಹದಲ್ಲಿರುವ ನಾವು ಸೇವಿಸುವ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುವ ಅಂಶ. ಅದು ಸರಿಯಾಗಿ ಕೆಲಸ ಮಾಡದಿದ್ದರೆ, ಕೊಬ್ಬು ಸಂಗ್ರಹವಾಗುತ್ತದೆ. ಅದಕ್ಕಾಗಿಯೇ ನಮ್ಮ ದೇಹವನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಮತ್ತು ಸರಿಯಾದ ಆಹಾರವನ್ನು ಸೇವಿಸುವುದರಿಂದ ಇದನ್ನು ತಡೆಯಬಹುದು. ನಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಸ್ವಲ್ಪವಾದರೂ ಕಡಿಮೆ ಮಾಡಲು ಪ್ರಯತ್ನಿಸಿದ್ರೆ ನಂತರ ಮುಂದಿನ 5 ವರ್ಷಗಳಲ್ಲಿ ನಮ್ಮ ಹೃದಯದಿಂದಾಗುವ ಅಪಾಯವನ್ನು ತಡೆಯಲು ಸಹಾಯ ಮಾಡುತ್ತದೆ.

ಒಂದು ವೇಳೆ ಹೃದಯದ ರಕ್ತನಾಳಗಳಲ್ಲಿ ಅಡಚಣೆಗಳು ಉಂಟಾದರೆ, ರಕ್ತ ಪೂರೈಕೆ ಸಮರ್ಪಕವಾಗಿರುವುದಿಲ್ಲ, ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ. ಆರೋಗ್ಯಕರ ಆಹಾರ ಪದ್ಧತಿ ಮತ್ತು ವೈದ್ಯರ ಸಲಹೆಯನ್ನು ಪಾಲಿಸಲೇಬೇಕು. ಟ್ರಾನ್ಸ್ ಕೊಬ್ಬುಗಳು ಎಂದು ಕರೆಯಲ್ಪಡುವ ಕೆಲವು ರೀತಿಯ ಅಪರ್ಯಾಪ್ತ ಕೊಬ್ಬುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಹೃದಯ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ. ಇವು ಸಾಮಾನ್ಯವಾಗಿ ಸಂಸ್ಕರಿಸಿದ ಆಹಾರಗಳು ಮತ್ತು ಹುರಿದ ಆಹಾರಗಳಲ್ಲಿ ಕಂಡುಬರುತ್ತವೆ. ನಾವು ಸೇವಿಸುವ ಆಹಾರದಲ್ಲಿ ಈ ಕೊಬ್ಬುಗಳು ಹೆಚ್ಚಾಗಿರದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ, ನಮ್ಮ ಆರೋಗ್ಯದಲ್ಲಿ ಏರುಪೇರಾಗುತ್ತದೆ.

ಇದನ್ನೂ ಓದಿ
Image
ಹೊಸ ವರ್ಷ ಆಚರಿಸಿ ಫೂಲ್ ಆದ ದೇಶ ಯಾವುದು?
Image
ದೇಹ ಆಕಾರವೇ ನಿಮ್ಮ ವ್ಯಕ್ತಿತ್ವ ಬಹಿರಂಗ ಪಡಿಸುತ್ತೆ
Image
ಬೇಸಿಗೆಯ ದಾಹ ನೀಗಿಸಲು ಎಳನೀರು ಕುಲುಕ್ಕಿ ಶರ್ಬತ್‌ ಒಮ್ಮೆ ಟ್ರೈ ಮಾಡಿ…
Image
ಭಾರತದ ಹೊರತುಪಡಿಸಿ ವಿದೇಶದಲ್ಲಿರುವ ಪ್ರಮುಖ ಶಿವ ದೇವಾಲಯಗಳಿವು

ಇದನ್ನೂ ಓದಿ: ಸಾಲ ಮಾಡಿದ ಅಪ್ಪ ತೀರಿ ಹೋದರೆ ಮಗನ ಮೇಲೆ ಬೀಳುತ್ತಾ ಆ ಸಾಲದ ಹೊರೆ?

ನೀವು ಪ್ರತಿಯೊಬ್ಬರು ಇದನ್ನು ಗಮನಿಸಲೇಬೇಕು, ನಿಮ್ಮ ಪ್ರತಿದಿನದ ವೇಳಾಪಟ್ಟಿಯಲ್ಲಿ ಅಥವಾ ಚಟುವಟಿಕೆಯಲ್ಲಿ ಕೊಲೆಸ್ಟ್ರಾಲ್ ಶೇಕಾಡ 5 ಕ್ಕಿಂತ ಹೆಚ್ಚಿರಬಾರದು. ಅದಕ್ಕಾಗಿ ನೀವು ತೆಂಗಿನಕಾಯಿ ಮಾಡಿದ ಆಹಾರಗಳನ್ನು ಹೆಚ್ಚು ಸೇವನೆ ಮಾಡಬಾರದು. ತೆಂಗಿನಕಾಯಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ ಎಂಬ ಅನ್ನಿಸಿಕೆ ಇದೆ. ಆದರೆ ಇದು ನಿಜವಲ್ಲ, ತೆಂಗಿನಕಾಯಿಯಲ್ಲಿರುವ ಕೊಬ್ಬಿನಾಮ್ಲಗಳು ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಪರಿಣಾಮ ಬೀರುವುದಿಲ್ಲ. ಯಾಕೆಂದರೆ ತೆಂಗಿನಕಾಯಿ ಮಧ್ಯಮ ಸರಪಳಿಯಂತಹ ಟ್ರೈಗ್ಲಿಸರೈಡ್‌ಗಳನ್ನು ಹೊಂದಿದೆ. ಆ ಕಾರಣದಿಂದ ನಿಮ್ಮ ದೇಹಕ್ಕೆ ಯಾವುದೇ ಅಪಾಯವನ್ನು ಉಂಟು ಮಾಡುವುದಿಲ್ಲ. ತೆಂಗಿನಕಾಯಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂದು ಭಯಪಡುವ ಅಗತ್ಯವಿಲ್ಲ. ಆದರೆ ಅದನ್ನು ಅತಿಯಾಗಿ ಸೇವನೆ ಮಾಡುವುದು ಬೇಡ. ಆದ್ದರಿಂದ ತೆಂಗಿನಕಾಯಿಯನ್ನು ಮಿತವಾಗಿ ಸೇವಿಸುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ