AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Inspiring Story: ಇಂಟೀರಿಯರ್ ಡಿಸೈನ್ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿರುವ ದೀಪಾ ದೇವರಾಜನ್

Purple Dreams ಸಂಸ್ಥಾಪಕಿ ದೀಪಾ ದೇವರಾಜನ್ ಅವರು, ಆಕಾಶದ ಆಚೆ ಇನ್ನೊಂದು ಆಕಾಶ ಇರಬಹುದೆಂಬ ಆಲೋಚನೆಯೊಂದಿಗೆ ತನ್ನ ದಿನವನ್ನು ಪ್ರಾರಂಭಿಸುತ್ತಾರಂತೆ. "ಮಗು, ನಾವು ದಕ್ಷಿಣದವರು, ನೀನು ಯಾವುದೇ ವ್ಯವಹಾರ ನಡೆಸಲು ಸಾಧ್ಯವಾಗುವುದಿಲ್ಲ. ಮೊದಲು ನೀನು ಓದಬೇಕು, ನಂತರ ಒಳ್ಳೆಯ ಕೆಲಸ ಗಳಿಸಬೇಕು, ಮತ್ತು ನಂತರ ಸಾಕಷ್ಟು ಹಣ ಸಂಪಾದನೆ ಮಾಡಿ ಬಳಿಕ ಮದುವೆ ಆಗಬೇಕು" ಎಂದು ತನ್ನ ತಾಯಿ ಒಮ್ಮೆ ಹೇಳಿದ್ದಾಗಿ ಅವರು ನೆನಪಿಸಿಕೊಳ್ಳುತ್ತಾರೆ.

ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 19, 2026 | 8:48 PM

Share

ದೀಪಾ ದೇವರಾಜನ್ (Deepa Devarajan) ಅವರದ್ದು ಶ್ರೀಮಂತ ಕುಟುಂಬ ಅಥವಾ ಸಿರಿತನದ ಹಿನ್ನೆಲೆಯಲ್ಲ. ಅವರು ಹಿಂದಿ ಮಾತನಾಡುವ, ಪುರುಷ ಪ್ರಾಬಲ್ಯ ಇರುವ ಉದ್ಯಮದಲ್ಲಿ ತನ್ನದೇ ಒಂದು ಸ್ಥಾನವನ್ನು ಪಡೆದುಕೊಂಡಿರುವ ದಕ್ಷಿಣ ಭಾರತೀಯ ಮಹಿಳೆ. ಸಾಧಾರಣ ಸರ್ವಿಸ್ ಕ್ಲಾಸ್ ಹಿನ್ನೆಲೆ ಇರುವ ಕುಟುಂಬದಿಂದ ಬಂದವರಾಗಿದ್ದು, ಇಂಟೀರಿಯರ್ ಡಿಸೈನಿಂಗ್ ಕ್ಷೇತ್ರಕ್ಕೆ ಕಾಲಿಡುವುದು ಅಷ್ಟು ಸುಲಭದ ನಿರ್ಧಾರವಾಗಿರಲಿಲ್ಲ. ಆದರೆ, ಛಲ, ಪರಿಶ್ರಮ, ಧೈರ್ಯ, ಪ್ಲಾನಿಂಗ್ ಅವರನ್ನು ಈ ಕ್ಷೇತ್ರಕ್ಕೆ ಕಾಲಿಟ್ಟು ಎದ್ದು ನಿಲ್ಲುವಂತೆ ಮಾಡಿವೆ.

ಸೀಮಿತ ಸಂಪನ್ಮೂಲಗಳು, ಆದರೆ ನಿಚ್ಚಳ ಕನಸುಗಳು

ದೀಪಾ ಅವರ ಪ್ರಯಾಣವು ಸಮರ್ಪಕವಾದ ಸಪೋರ್ಟ್ ಸಿಸ್ಟಂ ಇಲ್ಲದೇ ಆರಂಭವಾಯಿತು. ಇಂಟೀರಿಯರ್ ಡಿಸೈನ್​ನಂತಹ ಪ್ರೊಫೆಷನ್ ಅನ್ನು ಪ್ರವೇಶಿಸುವುದು ಬಹಳ ಸವಾಲಿನದ್ದಾಗಿತ್ತು. ಆ ಕೋರ್ಸ್​ಗೆ ದಾಖಲಾಗುವುದೇ ಕಷ್ಟಕರವಾಗಿತ್ತು. ಸಣ್ಣ ಪುಟ್ಟ ಕೆಲಸಗಳ್ನು ಮಾಡುತ್ತಾ ಪ್ರತೀ ಪೈಸೆಯನ್ನೂ ಎಚ್ಚರಿಕೆಯಿಂದ ಉಳಿಸಿ, ಹಣ ಕೂಡಿಟ್ಟು ಅದನ್ನು ಶಿಕ್ಷಣ ಹಾಗೂ ಭವಿಷ್ಯಕ್ಕೆ ಹೂಡಿಕೆ ಮಾಡಿದರು.

ಇದನ್ನೂ ಓದಿ: ಬ್ಯಾಂಕ್ ಸಾಲ ಕೊಡದಾಗ ಮನೆ ಖರ್ಚಿನಲ್ಲಿ ಹಣ ಉಳಿಸಿ ಬ್ಯುಸಿನೆಸ್ ಕಟ್ಟಿ ಯಶಸ್ವಿಯಾದ ಪ್ರತಿಭಾ ಶರ್ಮಾ

ಕಲ್ಚರಲ್ ಸ್ಟೀರಿಯೋಟೈಪ್ಸ್ ಮತ್ತು ಕೌಟುಂಬಿಕ ವಾಸ್ತವ

Purple Dreams ನ ಸಂಸ್ಥಾಪಕಿ ದೀಪಾ, ‘ಆಕಾಶದ ಆಚೆ ಇನ್ನೊಂದು ಆಕಾಶ ಇರಬಹುದು’ ಎಂಬ ಆಲೋಚನೆಯೊಂದಿಗೆ ತನ್ನ ದಿನವನ್ನು ಪ್ರಾರಂಭಿಸುತ್ತಿದ್ದೆ ಎಂದು ಹೇಳುತ್ತಾರೆ. “ಮಗಳೇ, ನಾವು ದಕ್ಷಿಣದವರು, ನೀನು ಯಾವುದೇ ಬ್ಯುಸಿನೆಸ್ ನಡೆಸಲು ಸಾಧ್ಯವಾಗುವುದಿಲ್ಲ. ಮೊದಲು, ನೀನು ಓದಬೇಕು, ನಂತರ ಒಳ್ಳೆಯ ಕೆಲಸ ಗಳಿಸಿ ಹಣ ಸಂಪಾದಿಸಿ, ಮತ್ತು ನಂತರ ಮದುವೆಯಾಗಬೇಕು” ಎಂದು ತನಗೆ ತಾಯಿ ಹೇಳುತ್ತಿದ್ದ ಮಾತುಗಳನ್ನು ದೀಪಾ ದೇವರಾಜನ್ ನೆನಪಿಸಿಕೊಳ್ಳುತ್ತಾರೆ.

ಅವರ ಉದ್ಯಮಶೀಲತೆಗೆ ಬುನಾದಿ ಹಾಕಿದ ಫೈನಾನ್ಷಿಯಲ್ ಪ್ಲಾನಿಂಗ್

ದೀಪಾ ದೇವರಾಜನ್ ಅವರಿಗೆ ಲಾಂಗ್ ಟರ್ಮ್ ಪ್ಲಾನಿಂಗ್ ಮತ್ತು ಡಿಸಿಪ್ಲಿನ್ ಮೇಲೆ ಹೆಚ್ಚು ವಿಶ್ವಾಸ. ಆರ್ಥಿಕ ಸ್ವಾತಂತ್ರ್ಯ ಇದ್ದದ್ದರಿಂದ ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಯಿತು. ಕ್ರಮೇಣ ಅವರು ತಮ್ಮದೇ ದಾರಿ ಕಂಡುಕೊಳ್ಳುತ್ತಾ ಹೋದರು. ರೆಸಿಡೆನ್ಷಿಯಲ್ ಮತ್ತು ಕಮರ್ಷಿಯಲ್ ಪ್ರಾಜೆಕ್ಟ್​ಗಳಿಗೆ ಇಂಟೀರಿಯರ್ ಡಿಸೈನ್ ಸಲ್ಯೂಶನ್ಸ್ ಒದಗಿಸುವ Purple Dreams ಎನ್ನುವ ತಮ್ಮದೇ ಸಂಸ್ಥೆ ಸ್ಥಾಪಿಸಿದರು. ಇಂದು, ಅವರ ಗುರುತು ಕಠಿಣ ಪರಿಶ್ರಮ, ಸ್ಟ್ರಾಟಿಜಿಕ್ ಇನ್ವೆಸ್ಟ್​ಮೆಂಟ್, ನಿರಂತರ ವೃತ್ತಿಪರ ಕೌಶಲ್ಯವರ್ಧನೆ ಮತ್ತು ಕ್ಲೈಂಟ್ ಅಗತ್ಯಗಳಿಗೆ ಅನುಗುಣವಾಗಿ ಬಜೆಟ್ ಸ್ನೇಹಿ ಪರಿಹಾರಗಳನ್ನು ಒದಗಿಸುವುದು ಇವುಗಳಿಂದ ದೀಪಾ ದೇವರಾಜನ್ ಗುರುತಿಸಲಾಗುತ್ತದೆ. ಆರ್ಕಿಟೆಕ್ಚರ್ ಮತ್ತು ಇಂಟೀರಿಯರ್ ಡಿಸೈನ್ ನಡುವೆ ಗಾಢ ಸಂಬಂಧ ಇದೆ ಎಂಬುದು ಅವರ ಭಾವನೆ. ಈ ಕನೆಕ್ಷನ್​ನಿಂದಾಗಿ ಅತ್ಯಾಧುನಿಕ ಕಲರ್ ಪ್ಯಾಟರ್ನ್​ಗಳು, ರಿಫೈನ್ಡ್ ಮೆಟೀರಿಯಲ್ ಮತ್ತು ಡೀಟೇಲಿಂಗ್ ಇರುವ ಒಳಾಂಗಣ ಪರಿಸರ ನಿರ್ಮಾಣ ಸಾಧ್ಯವಾಗುತ್ತದೆ.

ಇದನ್ನೂ ಓದಿ: 9-5 ಸೆಕ್ಯೂರ್ಡ್ ಜಾಬ್ ಬಿಟ್ಟು ಮನಸ್ಸಿನ ಮಾತು ಕೇಳಿ ಹಣ ಮತ್ತು ನೆಮ್ಮದಿ ಕಂಡುಕೊಂಡ ರಿಮ್ಜಿಮ್ ಸೈಕಿಯಾ

Success story of how Deepa Devarajan made mark in Interior designing field as woman entrepreneur

ದೀಪಾ ದೇವರಾಜನ್

ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ ಉಪಕ್ರಮಗಳು

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಒಂದು ಬಾರಿಯ KYC (Know Your Customer) ಪ್ರಕ್ರಿಯೆಯ ಅಗತ್ಯವಿದೆ. SEBI ವೆಬ್​ಸೈಟ್​ನಲ್ಲಿ ವಿವರ ಹೊಂದಿರುವ ಹಾಗೂ ನೊಂದಾಯಿತವಾಗಿರುವ ಮ್ಯೂಚುವಲ್ ಫಂಡ್ ಕಂಪನಿಗಳೊಂದಿಗೆ ಮಾತ್ರ ಮಾಡಬೇಕು. ಹೂಡಿಕೆದಾರರು ಯಾವುದೇ ದೂರುಗಳಿಗಾಗಿ ನೇರವಾಗಿ AMC ಅನ್ನು ಸಂಪರ್ಕಿಸಬಹುದು ಅಥವಾ SCORES ಪೋರ್ಟಲ್‌ನಲ್ಲಿ (https://scores.gov.in) ದೂರು ಸಲ್ಲಿಸಬಹುದು. ಪರಿಹಾರವು ತೃಪ್ತಿಕರವಾಗಿಲ್ಲದಿದ್ದರೆ, Smart ODR ಪೋರ್ಟಲ್ (https://smartodr.in/login) ಅನ್ನು ಬಳಸಬಹುದು.

HDFC AMC ಬಗ್ಗೆ

HDFC ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್ ಭಾರತದ ಅತಿದೊಡ್ಡ ಮ್ಯೂಚುವಲ್ ಫಂಡ್ ಕಂಪನಿಗಳಲ್ಲಿ ಒಂದಾಗಿದೆ. ಇದನ್ನು 1999 ರಲ್ಲಿ ಸ್ಥಾಪಿಸಲಾಯಿತು ಮತ್ತು SEBI ಅನುಮೋದನೆ ಪಡೆದ ನಂತರ 2000 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು ಈಕ್ವಿಟಿ, ಫಿಕ್ಸೆಡ್ ಇನ್ಕಮ್ ಮತ್ತು ಇತರ ಹೂಡಿಕೆ ಆಯ್ಕೆಗಳನ್ನು ನಿರ್ವಹಿಸುತ್ತದೆ. ಮತ್ತು ದೇಶಾದ್ಯಂತ ಶಾಖೆಗಳನ್ನು ಹೊಂದಿದೆ. ಬ್ಯಾಂಕುಗಳು, ಸ್ವತಂತ್ರ ಹಣಕಾಸು ಸಲಹೆಗಾರರು ಮತ್ತು ರಾಷ್ಟ್ರೀಯ ವಿತರಕರ ಮೂಲಕ ಸೇವೆಗಳನ್ನು ಒದಗಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:57 pm, Mon, 19 January 26