AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Inspiring: ಸಿಮೆಂಟ್ ತ್ಯಾಜ್ಯದಿಂದ ಹೊಸ ಬ್ಯುಸಿನೆಸ್ ಐಡಿಯಾ ಮಾಡಿ ಗೆದ್ದ ಪ್ರಾಚಿ ಪೊದ್ದಾರ್; ಮದುವೆ ಒತ್ತಡದ ನಡುವೆಯೂ ಕುಂದದ ಛಲ

Inspiring Story of Prachi Poddar of Jagannath Stones: ಪ್ರಾಚಿ ಪೊದ್ದಾರ್‌ಗೆ ಹಣಕಾಸು ವಿಷಯದಲ್ಲಿ ಆಸಕ್ತಿ ಇತ್ತು. ಕಾಲೇಜು ದಿನಗಳಲ್ಲಿ, ಗಣಿತ ಮತ್ತು ಅಕೌಂಟೆನ್ಸಿ ವಿಷಯಗಳು ಪ್ರಾಚಿ ಗಮನ ಸೆಳೆದವು. ಮ್ಯಾನೇಜ್ಮೆಂಟ್ ಕೋರ್ಸ್ ಸೇರಲು ಇದೂ ಒಂದು ಕಾರಣವಾಯಿತು. ಬೆಂಗಳೂರಿನ ಐಐಎಂನಲ್ಲಿ ಮ್ಯಾನೇಜ್ಮೆಂಟ್ ಅಧ್ಯಯನ ಮಾಡಿದ ಬಳಿಕ ತವರಿಗೆ ಮರಳಿ, ಮನೆಯವರು ನೋಡಿದ್ದ ಗಂಡನ್ನು ವಿವಾಹಿತರಾದರು. ಆದರೆ, ಮದುವೆ ಬಳಿಕ ಅವರು ತಮ್ಮನ್ನು ತಾವು ಮಿತಿಗೊಳಿಸಲಿಲ್ಲ. ಅವರ ಫೈನಾನ್ಷಿಯಲ್ ಜ್ಞಾನವು ಹೊಸ ಆಲೋಚನೆಗಳನ್ನು ಹುಟ್ಟುಹಾಕಿತು.

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 20, 2026 | 8:21 PM

Share

ಕೆಲವು ಕುಟುಂಬಗಳಲ್ಲಿ, ಮನೆತನಗಳಲ್ಲಿ ಈಗಲೂ ಕೂಡ ಹೆಣ್ಮಕ್ಕಳಿಗೆ ಶಿಕ್ಷಣ ಸಿಗುವುದು ಕನಸಿನ ಮಾತೇ ಆಗಿದೆ. ಮಾರ್ವಾಡಿ ಮನೆತನಗಳಲ್ಲಿ ಹೆಣ್ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಇರುವುದು ಬಹಳ ಅಪರೂಪ. ಇಂಥ ಸಾಂಪ್ರದಾಯಿಕ ಮಾರ್ವಾಡಿ ಕುಟುಂಬವೊಂದರಲ್ಲಿ ಹುಟ್ಟಿದವರು ಪ್ರಾಚಿ ಪೊದ್ದಾರ್. 2001 ರಲ್ಲಿ ಅವರು ಬೆಂಗಳೂರಿನ ಐಐಎಂಗೆ ಆಯ್ಕೆಯಾದಾಗ, ಅದು ಸಂತೋಷಕ್ಕಿಂತ ಚರ್ಚೆಯ ವಿಷಯವಾಯಿತು. ಮೊದಲು ಮದುವೆಯಾಗು, ಆನಂತರ ಬೇಕಾದರೆ ಓದುವಿಯಂತೆ ಎಂದು ಮನೆಯವರು ಒತ್ತಡ ಹಾಕಿದರು. ಆದರೆ, ಪ್ರಾಚಿ ಅದು ಹೇಗೋ ಐಐಎಂಗೆ ಸೇರಲು ಅನುಮತಿ ಪಡೆದರು. ಆದರೆ, ಅಲ್ಲೊಂದು ಷರತ್ತು ಹಾಕಲಾಗಿತ್ತು. ಓದು ಪೂರ್ಣಗೊಂಡ ಬಳಿಕ ಮದುವೆಯಾಗಬೇಕು ಎಂಬುದು ಆ ಷರತ್ತಾಗಿತ್ತು. ಪ್ರಾಚಿ ಒಪ್ಪಿಕೊಂಡರು. ಆದರೆ, ಅವರ ಕನಸು ಬತ್ತಿಹೋಗಲು ಬಿಡಲಿಲ್ಲ. ಅವರ ಮನಸ್ಸಿನಲ್ಲಿ ಅಚ್ಚೊತ್ತಿ ಗರಿ ಕಟ್ಟಿಕೊಂಡು ಬೆಳೆಯಿತು.

ಛಲಬಿಡದ ಪ್ರಾಚಿ ಎಲ್ಲೂ ನಿಲ್ಲಲಿಲ್ಲ

ತನಗೆ ಸಣ್ಣ ವಯಸ್ಸಿನಿಂದಲೂ ಫೈನಾನ್ಸ್ ವಿಷಯದಲ್ಲಿ ಬಹಳ ಆಸಕ್ತಿ ಇತ್ತು ಎಂದು ಪ್ರಾಚಿ ಹೇಳುತ್ತಾರೆ. ಕಾಲೇಜು ದಿನಗಳಲ್ಲಿ, ಅವರು ಗಣಿತ ಮತ್ತು ಅಕೌಂಟ್ಸ್​ನತ್ತ ಆಕರ್ಷಿತರಾದರು. ಇದೇ ಕಾರಣದಿಂದ ಅವರು ಮ್ಯಾನೇಜ್ಮೆಂಟ್ ಕೋರ್ಸ್ ಸೇರಲು ಪ್ರೇರೇಪಣೆ ಸಿಕ್ಕಿತು. ಬೆಂಗಳೂರಿನ ಐಐಎಂನಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಅವರು ಊರಿಗೆ ಮರಳಿ, ಮನೆಯವರಿಗೆ ವಾಗ್ದಾನ ನೀಡಿದಂತೆ ವಿವಾಹವಾದರು. ಆದರೆ ಆಗಲೂ, ಅವರು ಮನೆ ನಿರ್ವಹಣೆಗೆ ಮಾತ್ರ ತಮ್ಮನ್ನು ಮಿತಿಗೊಳಿಸಲಿಲ್ಲ. ತನ್ನನ್ನು ತಾನು ಮಿತಿಗೊಳಿಸಿಕೊಳ್ಳಲಿಲ್ಲ. ಅವರು ಭಾರತ ಮತ್ತು ಅಮೆರಿಕ ದೇಶಗಳಲ್ಲಿ ಜಿಇ ಫೈನಾನ್ಷಿಯಲ್ ಮತ್ತು ಎಚ್‌ಎಸ್‌ಬಿಸಿಯಂತಹ ಪ್ರಮುಖ ಕಂಪನಿಗಳಲ್ಲಿ ಕೆಲಸ ಮಾಡಿದರು. ಫೈನಾನ್ಷಿಯಲ್ ಮ್ಯಾನೇಜ್ಮೆಂಟ್ ಮತ್ತು ಬ್ಯುಸಿನೆಸ್ ಸ್ಟ್ರಕ್ಚರ್ ಬಗ್ಗೆ ಆಳವಾದ ತಿಳಿವಳಿಕೆ ಪಡೆದರು.

ಅತ್ತೆ-ಮಾವನ ಜವಾಬ್ದಾರಿ ಮತ್ತು ಕೋಲ್ಕತ್ತಾಗೆ ಮರಳಿದ್ದು…

ಕೆಲವು ವರ್ಷಗಳ ನಂತರ ಪ್ರಾಚಿ ಪೊದ್ದಾರ್ ಅವರು ತಮ್ಮ ಅತ್ತೆ-ಮಾವನ ಜವಾಬ್ದಾರಿಗಳಿಂದಾಗಿ ಕೋಲ್ಕತ್ತಾಗೆ ಹಿಂತಿರುಗಬೇಕಾಯಿತು. ಅವರ ಅತ್ತೆ ಮತ್ತು ಮಾವನಿಗೆ ಅನಾರೋಗ್ಯವಿದ್ದರಿಂದ ಕುಟುಂಬಕ್ಕೆ ಅವರ ಅಗತ್ಯತೆ ಇತ್ತು. ಕೋಲ್ಕತ್ತಾಗೆ ಹಿಂದಿರುಗಿದ ನಂತರ, ಪ್ರಾಚಿ ತನ್ನ ಪತಿಯ ಫ್ಯಾಮಿಲಿ ಬ್ಯುಸಿನೆಸ್​ನಲ್ಲಿ ಭಾಗಿಯಾಗತೊಡಗಿದರು. ಸಿಮೆಂಟ್ ಟ್ರಾನ್ಸ್​ಪೋರ್ಟೇಶನ್ ಬ್ಯುಸಿನೆಸ್ ಅದಾಗಿತ್ತು. ಇಲ್ಲಿಂದ ಪ್ರಾಚಿಯವರ ವೃತ್ತಿಜೀವನದ ಹಾದಿಯಲ್ಲಿ ಹೊಸ ಅಧ್ಯಾಯ ಶುರುವಾಗುತ್ತದೆ.

ಸಿಮೆಂಟ್ ತ್ಯಾಜ್ಯದಿಂದ ಹೊಸ ಬ್ಯುಸಿನೆಸ್ ಐಡಿಯಾ

ಪ್ರಾಚಿ ಅವರು ಫ್ಯಾಮಿಲಿ ಬ್ಯುಸಿನೆಸ್​ನಲ್ಲಿ ಭಾಗಿ ಮಾತ್ರವೇ ಆಗಿರಲಿಲ್ಲ, ತಮ್ಮ ಹಣಕಾಸು ನಿರ್ವಹಣೆಯ ಜ್ಞಾನ ಮತ್ತು ಅನುಭವ ಬಳಸಿ ಆ ಬ್ಯುಸಿನೆಸ್​ಗೆ ಹೊಸ ಸ್ವರೂಪವನ್ನೇ ತಂದರು. ಸಿಮೆಂಟ್ ತ್ಯಾಜ್ಯದಲ್ಲಿ ಇರುವ ಸುಣ್ಣದ ಕಲ್ಲನ್ನು ಪುಡಿಮಾಡಿ ಕಲ್ಲಿನ ಚಿಪ್ಸ್ ತಯಾರಿಸುವ ಒಂದು ಐಡಿಯಾ ಸುಮಾರು ಮೂರು ವರ್ಷಗಳ ಹಿಂದೆ ಅವರಿಗೆ ಬಂದಿತು. ಈ ಐಡಿಯಾ ವರ್ಕೌಟ್ ಆಯಿತು. ಬ್ಯುಸಿನೆಸ್ ಹಿಗ್ಗಿತು. ಯಶಸ್ವಿಯಾಯಿತು. ಈ ದೃಷ್ಟಿಕೋನದಿಂದ, ವ್ಯವಹಾರವು ವಿಸ್ತರಿಸಿತು. Jagannath Stones ಅಡಿಯಲ್ಲಿ ಲೈಮ್​ಸ್ಟೋನ್ಸ್ ಪುಡಿಮಾಡುವ ಆಪರೇಷನ್ಸ್ ಪ್ರಾರಂಭಿಸಲಾಯಿತು. ಪ್ರಸ್ತುತ, ಜಗನ್ನಾಥ್ ಸ್ಟೋನ್ಸ್‌ನ ಫೈನಾನ್ಸ್ ವಿಭಾಗದ ಪೂರ್ಣ ಜವಾಬ್ದಾರಿಯನ್ನು ಪ್ರಾಚಿ ಹೊತ್ತು ನಡೆಸುತ್ತಿದ್ದಾರೆ.

ಲಾಭ ಮತ್ತು ನಷ್ಟದಿಂದ ಹಿಡಿದು ಹೂಡಿಕೆಯವರೆಗೆ ಪ್ರತಿಯೊಂದು ನಿರ್ಧಾರವೂ ಪ್ರಾಚಿಯದ್ದೇ

ಇಂದು, ಪ್ರಾಚಿ ಪೊದ್ದಾರ್ ಅವರು ಬ್ಯುಸಿನೆಸ್​ನ ಲಾಭ ಮತ್ತು ನಷ್ಟದಿಂದ ಹಿಡಿದು ಕಂಪನಿಯ ಹೂಡಿಕೆ ಮತ್ತು ಪರ್ಸನಲ್ ಇನ್ವೆಸ್ಟ್​ಮೆಂಟ್​ವರೆಗೆ ಎಲ್ಲಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರ ಪಾತ್ರವು ಕೇವಲ ಅಕೌಂಟ್​ಗಳನ್ನು ನಿರ್ವಹಿಸುವುದಕ್ಕೆ ಸೀಮಿತವಾಗಿಲ್ಲ. ಸ್ಟ್ರಾಟಿಜಿ, ಪ್ಲಾನಿಂಗ್ ಮತ್ತು ಡೆವಲಪ್ಮೆಂಟ್ ಅನ್ನೂ ನೋಡಿಕೊಳ್ಳುತ್ತಾರೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಒಂದು ಜವಾಬ್ದಾರಿ ಎಂಬುದು ಅವರ ಭಾವನೆ. ಮಹಿಳೆಯರು ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಂಡಾಗ, ವ್ಯವಹಾರಗಳು ಉಳಿಯುವುದು ಮಾತ್ರವಲ್ಲದೆ ಅಭಿವೃದ್ಧಿ ಹೊಂದುತ್ತವೆ.

ಆತ್ಮವಿಶ್ವಾಸ ಕುಂದಲಿಲ್ಲ

ಓದು ಮುಗಿಸಿ ಮದುವೆಯಾಗುತ್ತೇನೆ ಎಂದು ನೀಡಿದ್ದ ವಚನವನ್ನು ಪ್ರಾಚಿ ತಪ್ಪದೇ ಉಳಿಸಿಕೊಂಡರು. ಅದರ ನಡುವೆಯೂ ಅವರು ಒಂದು ಚೌಕಟ್ಟಿಗೆ ಸೀಮಿತಗೊಳ್ಳಲಿಲ್ಲ. ಪತಿಯ ಫ್ಯಾಮಿಲಿ ಬ್ಯುಸಿನೆಸ್​ನಲ್ಲಿ ನೆರವಾಗಿದ್ದು ಮಾತ್ರವಲ್ಲ, ಅದನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಪ್ರಮುಖ ಕೊಡುಗೆ ನೀಡಿದರು. ಇದು ಪ್ರಾಚಿ ಪೊದ್ದಾರ್ ಎನ್ನುವ ಮಹಿಳೆಯ ಸಾಧನೆಯ ಕಥೆ.

Prachi Poddar of Jagannath Stones, story of how she made new business idea from cement waste

ಪ್ರಾಚಿ ಪೊದ್ದಾರ್

ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ ಉಪಕ್ರಮಗಳು

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಒಂದು ಬಾರಿಯ KYC (Know Your Customer) ಪ್ರಕ್ರಿಯೆಯ ಅಗತ್ಯವಿದೆ. SEBI ವೆಬ್​ಸೈಟ್​ನಲ್ಲಿ ವಿವರ ಹೊಂದಿರುವ ಹಾಗೂ ನೊಂದಾಯಿತವಾಗಿರುವ ಮ್ಯೂಚುವಲ್ ಫಂಡ್ ಕಂಪನಿಗಳೊಂದಿಗೆ ಮಾತ್ರ ಮಾಡಬೇಕು. ಹೂಡಿಕೆದಾರರು ಯಾವುದೇ ದೂರುಗಳಿಗಾಗಿ ನೇರವಾಗಿ AMC ಅನ್ನು ಸಂಪರ್ಕಿಸಬಹುದು ಅಥವಾ SCORES ಪೋರ್ಟಲ್‌ನಲ್ಲಿ (https://scores.gov.in) ದೂರು ಸಲ್ಲಿಸಬಹುದು. ಪರಿಹಾರವು ತೃಪ್ತಿಕರವಾಗಿಲ್ಲದಿದ್ದರೆ, Smart ODR ಪೋರ್ಟಲ್ (https://smartodr.in/login) ಅನ್ನು ಬಳಸಬಹುದು.

HDFC AMC ಬಗ್ಗೆ

HDFC ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್ ಭಾರತದ ಅತಿದೊಡ್ಡ ಮ್ಯೂಚುವಲ್ ಫಂಡ್ ಕಂಪನಿಗಳಲ್ಲಿ ಒಂದಾಗಿದೆ. ಇದನ್ನು 1999 ರಲ್ಲಿ ಸ್ಥಾಪಿಸಲಾಯಿತು ಮತ್ತು SEBI ಅನುಮೋದನೆ ಪಡೆದ ನಂತರ 2000 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು ಈಕ್ವಿಟಿ, ಫಿಕ್ಸೆಡ್ ಇನ್ಕಮ್ ಮತ್ತು ಇತರ ಹೂಡಿಕೆ ಆಯ್ಕೆಗಳನ್ನು ನಿರ್ವಹಿಸುತ್ತದೆ. ಮತ್ತು ದೇಶಾದ್ಯಂತ ಶಾಖೆಗಳನ್ನು ಹೊಂದಿದೆ. ಬ್ಯಾಂಕುಗಳು, ಸ್ವತಂತ್ರ ಹಣಕಾಸು ಸಲಹೆಗಾರರು ಮತ್ತು ರಾಷ್ಟ್ರೀಯ ವಿತರಕರ ಮೂಲಕ ಸೇವೆಗಳನ್ನು ಒದಗಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ