AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Inspiring- ದಿಶಾ ಸಾಧನೆಯ ಕಥೆ; ಮದುವೆ, ವೈದವ್ಯದ ಹಿನ್ನಡೆಯ ನಡುವೆಯೂ ಕನಸು ಬೆಂಬತ್ತಿದ ಛಲಗಾತಿ

Women entrepreneur Disha Garg's inspiring journey: ವಿಧಿಯು ದಿಶಾಳನ್ನು ತೀವ್ರ ಪರೀಕ್ಷೆಗೆ ಒಳಪಡಿಸಿತು. 2020ರಲ್ಲಿ ಅವರ ಮಾವ ನಿಧನರಾದರು. ನಂತರ 2022 ರಲ್ಲಿ ಅವರ ಪತಿಯೂ ನಿಧನರಾದರು. ಈ ಎರಡು ಪ್ರಮುಖ ಹಿನ್ನಡೆಗಳು ಅವರ ಜೀವನಕ್ಕೆ ದಿಢೀರ್ ತಿರುವು ಕೊಟ್ಟವು. ದಿಶಾಗೆ ಹಿಮ್ಮೆಟ್ಟುವುದನ್ನು ಬಿಟ್ಟು ಬೇರೆ ದಾರಿ ಇದ್ದಂತಿರಲಿಲ್ಲ. ಈ ಕ್ಲಿಷ್ಟ ಸಂದರ್ಭಗಳಿಗೆ ಬಲಿಯಾಗುವ ಬದಲು, ಅವರು ಹೊಸ ಬದುಕಿನ ದಾರಿ ಕಂಡುಕೊಳ್ಳತೊಡಗಿದರು.

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 23, 2026 | 9:00 PM

Share

ಪರಿಸ್ಥಿತಿಯ ಒತ್ತಡದಿಂದ ಕೆಲ ಕನಸುಗಳು ಹಿನ್ನಡೆ ಕಂಡರೂ ಅವು ಎಂದಿಗೂ ಸಾಯುವುದಿಲ್ಲ. ದಿಶಾ ಗರ್ಗ್ (Disha Garg) ಎನ್ನುವ ಕೆಚ್ಚೆದೆಯ ಹೆಣ್ಮಗಳ ಜೀವನ ಇದಕ್ಕೆ ತಾಜಾ ನಿದರ್ಶನ. NIFT ನಲ್ಲಿ (ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ) ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ದಿಶಾ ಅವರು ಫ್ಯಾಷನ್ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಬೇಕೆಂದು ಕನಸು ಕಂಡಿದ್ದರು. ಆದರೆ, ವಿಧಿ ಆಟವೋ ಎಂಬಂತೆ ಆಕೆ ಬೇಗನೇ ವಿವಾಹವಾಗಬೇಕಾಯಿತು. ದಿನಗಳೆದಂತೆ ಕೌಟುಂಬಿಕ ಜವಾಬ್ದಾರಿ ಮತ್ತು ಹೊರೆ ಹೆಚ್ಚತೊಡಗಿತು. ಇದರ ನಡುವೆ ಈಕೆ ತನ್ನ ಕನಸುಗಳನ್ನು ಸಾಕಾರಗೊಳಿಸುವ ಆಲೋಚನೆ ಮಾಡಲೂ ಬಿಡುವಿಲ್ಲದಂತಾಗಿತ್ತು. ಒಳ್ಳೆಯ ಹೆಂಡತಿ, ಒಳ್ಳೆಯ ಸೊಸೆ ಮತ್ತು ಒಳ್ಳೆಯ ತಾಯಿಯಾಗಲು ಈಕೆ ಶ್ರಮಿಸುತ್ತಿರುವಾಗ ಈಕೆಯ ಫ್ಯಾಷನ್ ಪದವಿ ಎಲ್ಲೋ ಧೂಳು ಹಿಡಿದು ಕೂತಿತ್ತು. ಅದೇನೇ ಆದರೂ ಈಕೆಯ ಗುರಿ ಈಡೇರಿಸುವ ಬಯಕೆಯಂತೂ ಎದೆಯೊಳಗೆ ಸುಪ್ತವಾಗಿ ಇಣುಕುತ್ತಲೇ ಇದ್ದದ್ದು ಹೌದು.

ನಾಲ್ಕು ಗೋಡೆಗಳ ಚೌಕಟ್ಟಿಗೆ ಸೀಮಿತವಾಗದ ಮನಸ್ಸು

ಮದುವೆಯ ನಂತರ, ದಿಶಾ ಗರ್ಗ್ ಅವರು ಕ್ರಮೇಣ ತಮ್ಮ ಗಂಡನ ಕುಟುಂಬಕ್ಕೆ ಸಂಪೂರ್ಣವಾಗಿ ಅರ್ಪಿಸಿಕೊಂಡರು. ಕಾಲ ಕಳೆದಂತೆ, ಅವರು ಅಪ್ಪಟ ಗೃಹಿಣಿಯೇ ಆದರು. ಅವರ ಗುರುತೇ ಗೃಹಿಣಿಯಾಯಿತು. ಮನೆಯ ನಾಲ್ಕು ಗೋಡೆಗಳ ಚೌಕಟ್ಟಿನೊಳಗೆ ಸೀಮಿತಗೊಳ್ಳುವುದು ಆಕೆಯ ಮನಸ್ಸಿನೊಳಗೆ ಎಲ್ಲೋ ಕಸಿವಿಸಿ ಮೂಡಿಸುತ್ತಿತ್ತು. ಮನೆಯ ನೆಲಮಾಳಿಗೆಯಲ್ಲಿ ಒಂದು ಸಣ್ಣ ಅಂಗಡಿ ತೆರೆಯುವ ಬಯಕೆಯನ್ನು ಆಕೆ ವ್ಯಕ್ತಪಡಿಸಿದಾಗ, ಕುಟುಂಬದಿಂದ ವಿರೋಧ ವ್ಯಕ್ತವಾಯಿತು.

ದಿಶಾ ಬ್ಯುಸಿನೆಸ್ ಪ್ರಯಾಣದ ಆರಂಭಿಕ ಹಂತ ಹೇಗಿತ್ತು ಗೊತ್ತಾ?

ಬ್ಯುಸಿನೆಸ್ ಆರಂಭಿಸಲು ಮನೆಯವರ ವಿರೋಧ ಬಂದಾಗ ದಿಶಾ ಗರ್ಗ್ ಅವರು ಚಾಣಾಕ್ಷ್ಯತೆಯಿಂದ ಪರಿಸ್ಥಿತಿ ನಿರ್ವಹಿಸುತ್ತಾರೆ. ತನ್ನ ಅತ್ತೆ ಮತ್ತು ಮಾವ ಅವರ ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಕೇವಲ ಇಬ್ಬರು ಟೈಲರ್​ಗಳು ಹಾಗೂ ಬಹಳ ಸೀಮಿತ ಸಂಪನ್ಮೂಲದೊಂದಿಗೆ ದಿಶಾ ಅವರು ಟೈಲರ್ ಅಂಗಡಿ ಶುರು ಮಾಡುತ್ತಾರೆ. ಇಬ್ಬರು ಕೆಲಸಗಾರರೊಂದಿಗೆ ಶುರುವಾದ ಇದರಲ್ಲಿ ಈಗ 25 ಮಂದಿ ಕೆಲಸ ಮಾಡುತ್ತಿರುವ ಹಂತಕ್ಕೆ ಬ್ಯುಸಿನೆಸ್ ಬೆಳೆದಿದೆ. ದೊಡ್ಡ ಸೆಟಪ್ ಇರಲಿಲ್ಲ, ಸಮರ್ಪಕವಾದ ಸಪೋರ್ಟ್ ಸಿಸ್ಟಂ ಕೂಡ ಇರಲಿಲ್ಲ. ಈಕೆಯ ಶಕ್ತಿಯಂತೆ ಇದ್ದದ್ದು ಕೆಲಸದ ಕೌಶಲ್ಯ ಮತ್ತು ಆತ್ಮವಿಶ್ವಾಸ ಮಾತ್ರ. ದಿಶಾ ತನ್ನ ಉದ್ದಿಮೆಯಲ್ಲಿ ಕ್ರಮೇಣವಾಗಿ ಪ್ರಗತಿ ಸಾಧಸುತ್ತಾ ಹೋಗುತ್ತಾ ತನ್ನ ಕೌಶಲ್ಯವನ್ನೂ ಪರಿಷ್ಕರಿಸುತ್ತಾ ಸಾಗಿದರು.

ಇದನ್ನೂ ಓದಿ: ಸಿಮೆಂಟ್ ತ್ಯಾಜ್ಯದಿಂದ ಹೊಸ ಬ್ಯುಸಿನೆಸ್ ಐಡಿಯಾ ಮಾಡಿ ಗೆದ್ದ ಪ್ರಾಚಿ ಪೊದ್ದಾರ್; ಮದುವೆ ಒತ್ತಡದ ನಡುವೆಯೂ ಕುಂದದ ಛಲ

ಉತ್ಸಾಹಕ್ಕಿಂತ ಬದುಕುಳಿಯುವುದು ಮುಖ್ಯವಾದಾಗ

ವಿಧಿಯು ದಿಶಾಳನ್ನು ತೀವ್ರ ಪರೀಕ್ಷೆಗೆ ಒಳಪಡಿಸಿತು. 2020ರಲ್ಲಿ ಅವರ ಮಾವ ನಿಧನರಾದರು. ನಂತರ 2022 ರಲ್ಲಿ ಅವರ ಪತಿಯೂ ನಿಧನರಾದರು. ಈ ಎರಡು ಪ್ರಮುಖ ಹಿನ್ನಡೆಗಳು ಅವರ ಜೀವನಕ್ಕೆ ದಿಢೀರ್ ತಿರುವು ಕೊಟ್ಟವು. ದಿಶಾಗೆ ಹಿಮ್ಮೆಟ್ಟುವುದನ್ನು ಬಿಟ್ಟು ಬೇರೆ ದಾರಿ ಇದ್ದಂತಿರಲಿಲ್ಲ. ಈ ಕ್ಲಿಷ್ಟ ಸಂದರ್ಭಗಳಿಗೆ ಬಲಿಯಾಗುವ ಬದಲು, ಅವರು ಹೊಸ ಬದುಕಿನ ದಾರಿ ಕಂಡುಕೊಳ್ಳತೊಡಗಿದರು.

ಗ್ರೀನ್ ಪಾರ್ಕ್‌ನ ಡಿಸೈನರ್ ಬೂಟೀಕ್‌

ಇಂದು, ದಿಶಾ ದೆಹಲಿಯ ಗ್ರೀನ್ ಪಾರ್ಕ್‌ನಲ್ಲಿ ಯಶಸ್ವಿ ಡಿಸೈನರ್ ಬೂಟೀಕ್ ಅನ್ನು ನಡೆಸುತ್ತಿದ್ದಾರೆ. ಅವರು ಸುಮಾರು 25 ಜನರಿಗೆ ಉದ್ಯೋಗ ನೀಡಿದ್ದಾರೆ. ಅವರ ವ್ಯವಹಾರವು ಅವರ ಗುರುತಾಗಿರುವುದು ಮಾತ್ರವಲ್ಲ, ಕುಟುಂಬಕ್ಕೆ ಬೆಂಬಲ ಕೊಡುತ್ತಿದೆ. ಸಾಕಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ. ಆದರೆ, ಸಂಪಾದಿಸಿದ ಹಣವು ಖರ್ಚು ಮಾಡಲು ಇರುವುದು ಎನ್ನುವ ಪೈಕಿಯವರಲ್ಲ ದಿಶಾ. ಇವತ್ತಿನ ಸಂಪಾದನೆಯಲ್ಲಿ ನಾಳೆಯ ಸುರಕ್ಷತೆಗಾಗಿಯೂ ಒಂದಷ್ಟು ಪಾಲು ತೆಗೆದಿರಿಸಬೇಕು ಎನ್ನುವಂಥವರು ದಿಶಾ. ನಾಳೆ ದಿಢೀರ್ ಕಷ್ಟ ಬಂದರೆ ಏನು ಮಾಡುವುದು?

ಇದನ್ನೂ ಓದಿ: ಇಂಟೀರಿಯರ್ ಡಿಸೈನ್ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿರುವ ದೀಪಾ ದೇವರಾಜನ್

ಪ್ರತಿಯೊಬ್ಬ ಮಹಿಳೆಗೆ ಆರ್ಥಿಕ ಸ್ವಾತಂತ್ರ್ಯ ಏಕೆ ಮುಖ್ಯ?

ದಿಶಾ ಗರ್ಗ್ ಅವರ ಜೀವನ ಕಥೆಯಿಂದ ಕಲಿಯಬಹುದಾದ ಹಲವು ಪಾಠಗಳಲ್ಲಿ ಒಂದೆಂದರೆ, ‘ಆರ್ಥಿಕ ಸ್ವಾತಂತ್ರ್ಯ ಎಂಬುದು ಲಕ್ಷುರಿ ಅಲ್ಲ, ಅದು ಭದ್ರತೆ’ ಎಂಬುದು. ಜೀವನದಲ್ಲಿ ಇದ್ದಕ್ಕಿದ್ದಂತೆ ಎಲ್ಲವೂ ಕಸಿದು ಹೋದಾಗ, ಮತ್ತೆ ಎದ್ದು ನಿಲ್ಲಲು ನಿಮಗೆ ಶಕ್ತಿಯನ್ನು ನೀಡುವುದು ನಿಮ್ಮ ಆರ್ಥಿಕ ಸ್ವಾತಂತ್ರ್ಯ. ದಿಶಾ ಕೇವಲ ಡಿಸೈನರ್ ಅಲ್ಲ, ಜೀವನದ ಜವಾಬ್ದಾರಿಗಳ ಹೊರೆಯಲ್ಲಿ ಕನಸ್ಸುಗಳನ್ನು ಬಚ್ಚಿಟ್ಟುಕೊಂಡು ಸಾಗುತ್ತಿರುವ ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.

Disha Garg's inspiring journey from humble housewife to successful entrepreneurship

ದಿಶಾ ಗರ್ಗ್

ಹೂಡಿಕೆ ಮಾಡುವ ಮೊದಲು ಈ ವಿಷಯಗಳು ನೆನಪಿನಲ್ಲಿರಲಿ

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ KYC (Know Your Customer) ಪೂರ್ಣಗೊಂಡಿರಬೇಕು. SEBI ವೆಬ್​ಸೈಟ್​ನಲ್ಲಿ ವಿವರ ಹೊಂದಿರುವ ಹಾಗೂ ನೊಂದಾಯಿತವಾಗಿರುವ ಮ್ಯೂಚುವಲ್ ಫಂಡ್ ಕಂಪನಿಗಳೊಂದಿಗೆ ಮಾತ್ರ ಮಾಡಬೇಕು. ಹೂಡಿಕೆದಾರರು ಯಾವುದೇ ದೂರುಗಳಿಗಾಗಿ ನೇರವಾಗಿ AMC ಅನ್ನು ಸಂಪರ್ಕಿಸಬಹುದು ಅಥವಾ SCORES ಪೋರ್ಟಲ್‌ನಲ್ಲಿ (https://scores.gov.in) ದೂರು ಸಲ್ಲಿಸಬಹುದು. ಪರಿಹಾರವು ತೃಪ್ತಿಕರವಾಗಿಲ್ಲದಿದ್ದರೆ, Smart ODR ಪೋರ್ಟಲ್ (https://smartodr.in/login) ಅನ್ನು ಬಳಸಬಹುದು.

HDFC AMC ಬಗ್ಗೆ

HDFC ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್ ಭಾರತದ ಅತಿದೊಡ್ಡ ಮ್ಯೂಚುವಲ್ ಫಂಡ್ ಕಂಪನಿಗಳಲ್ಲಿ ಒಂದಾಗಿದೆ. ಇದನ್ನು 1999 ರಲ್ಲಿ ಸ್ಥಾಪಿಸಲಾಯಿತು ಮತ್ತು SEBI ಅನುಮೋದನೆ ಪಡೆದ ನಂತರ 2000 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು ಈಕ್ವಿಟಿ, ಫಿಕ್ಸೆಡ್ ಇನ್ಕಮ್ ಮತ್ತು ಇತರ ಹೂಡಿಕೆ ಆಯ್ಕೆಗಳನ್ನು ನಿರ್ವಹಿಸುತ್ತದೆ. ಮತ್ತು ದೇಶಾದ್ಯಂತ ಶಾಖೆಗಳನ್ನು ಹೊಂದಿದೆ. ಬ್ಯಾಂಕುಗಳು, ಸ್ವತಂತ್ರ ಹಣಕಾಸು ಸಲಹೆಗಾರರು ಮತ್ತು ರಾಷ್ಟ್ರೀಯ ವಿತರಕರ ಮೂಲಕ ಸೇವೆಗಳನ್ನು ಒದಗಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!