Sign In

By signing in or creating an account, you agree with Associated Broadcasting Company's Terms & Conditions and Privacy Policy.

Household expenditure: ಭಾರತದಲ್ಲಿ ಒಂದು ಮನೆಯ ತಿಂಗಳ ಸರಾಸರಿ ವೆಚ್ಚ 5,662 ರೂ; 2023-24ರ ಎಚ್​ಸಿಎಎಸ್ ಸಮೀಕ್ಷೆ ವರದಿ

Household Consumption Expenditure Survey 2023-24: ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಜಾರಿ ಸಚಿವಾಲಯವು 2023-24ರ ಸಾಲಿನ ಭಾರತೀಯ ಗೃಹ ವೆಚ್ಚಗಳ ಸಮೀಕ್ಷಾ ವರದಿ ಪ್ರಕಟಿಸಿದೆ. ಸಬ್ಸಿಡಿ ಇತ್ಯಾದಿ ಸರ್ಕಾರದ ಉಚಿತ ಯೋಜನೆಗಳ ಲಾಭವನ್ನು ಹೊರತಪಡಿಸಿ ಗ್ರಾಮೀಣ ಭಾಗದಲ್ಲಿ ಒಂದು ಕುಟುಂಬದ ಸರಾಸರಿ ಅನುಭೋಗ ವೆಚ್ಚ 4,122 ರೂ ಇದೆ. ನಗರ ಭಾಗದಲ್ಲಿ ಇದು 6,996 ರೂ ಇದೆ. ಈ ವಿಚಾರದಲ್ಲಿ ಗ್ರಾಮೀಣ ಮತ್ತು ನಗರ ಭಾಗಗಳ ಮಧ್ಯೆ ಇರುವ ವೆಚ್ಚದ ಅಂತರ ಶೇ 70ರಷ್ಟಿದೆ.

Household expenditure: ಭಾರತದಲ್ಲಿ ಒಂದು ಮನೆಯ ತಿಂಗಳ ಸರಾಸರಿ ವೆಚ್ಚ 5,662 ರೂ; 2023-24ರ ಎಚ್​ಸಿಎಎಸ್ ಸಮೀಕ್ಷೆ ವರದಿ
ತರಕಾರಿ ಖರೀದಿಯ ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 31, 2025 | 12:31 PM

ನವದೆಹಲಿ, ಜನವರಿ 31: ಭಾರತದಲ್ಲಿ ಪ್ರತೀ ಮನೆಯಲ್ಲಿ ಸರಾಸರಿಯಾಗಿ ಆಗುವ ವೆಚ್ಚ ಎಷ್ಟು ಎನ್ನುವ ಅಂಕಿ ಅಂಶಗಳುಳ್ಳ ಸಮೀಕ್ಷಾ ವರದಿಯೊಂದು ಬಿಡುಗಡೆ ಆಗಿದೆ. 2022-23 ಮತ್ತು 2023-24ರ ವರ್ಷಗಳಲ್ಲಿ ಭಾರತದಾದ್ಯಂತ ಗೃಹ ಅನುಭೋಗ ವೆಚ್ಚದ ಸಮೀಕ್ಷೆ (HCES: Household Consumption Expenditure Survey) ನಡೆಸಲಾಗಿದ್ದು, ಅದರ ವರದಿಯನ್ನು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಪ್ರಕಟಿಸಿದೆ. ಈ ಸಮೀಕ್ಷೆಯಲ್ಲಿ ಹಲವು ಕುತೂಹಲಕಾರಿ ಅಂಶಗಳನ್ನು ಗುರುತಿಸಬಹುದು. ಈ ವರದಿ ಪ್ರಕಾರ ಭಾರತದ ಗ್ರಾಮೀಣ ಭಾಗದಲ್ಲಿ 2023-24ರ ಅವಧಿಯಲ್ಲಿ ಒಂದು ಮನೆಯ ಸರಾಸರಿ ಅನುಭೋಗ ವೆಚ್ಚ 4,122 ರೂ ಇದೆ. ಹಾಗೆಯೇ, ನಗರ ಭಾಗದಲ್ಲಿ ಇದು 6,996 ರೂ ಇದೆ. ಇದು ಸಬ್ಸಿಡಿ ಇತ್ಯಾದಿ ಉಚಿತ ಸ್ಕೀಮ್​ಗಳ ಲಾಭವನ್ನು (freebies) ಹೊರತುಪಡಿಸಿ ಒಂದು ಕುಟುಂಬಕ್ಕೆ ಆಗುವ ವೆಚ್ಚದ ಪ್ರಮಾಣ.

ಈ ಸಮೀಕ್ಷೆಯಲ್ಲಿ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಆಗುತ್ತಿರುವ ಅನುಭೋಗ ವೆಚ್ಚದ ಪ್ರಮಾಣದ ಅಂತರ ಕಡಿಮೆ ಆಗುತ್ತಿದೆ. 2011-12ರಲ್ಲಿ ಶೇ. 84ರಷ್ಟು ಅಂತರ ಇತ್ತು. 2022-23ರಲ್ಲಿ ಇದು ಶೇ. 71ಕ್ಕೆ ಇಳಿದಿದೆ. ಎಲ್ಲಾ 18 ಪ್ರಮುಖ ರಾಜ್ಯಗಳಲ್ಲೂ ಈ ಅಂತರ ತಗ್ಗಿರುವುದನ್ನು ಗುರುತಿಸಬಹುದಾಗಿದೆ.

ಗೃಹ ಅನುಭೋಗ ವೆಚ್ಚದ ಸಮೀಕ್ಷೆ ಯಾಕೆ ಮುಖ್ಯ?

ಗೃಹ ಅನುಭೋಗ ವೆಚ್ಚದ ಸಮೀಕ್ಷೆಯು ದೇಶದಲ್ಲಿ ಬಡತನ, ಅಸಮಾನತೆ, ಸಾಮಾಜಿಕ ಹೊರಗುಳಿಯುವಿಕೆ ಇತ್ಯಾದಿ ಅಂಶಗಳ ಮೇಲೆ ಬೆಳಕು ಚೆಲ್ಲುತ್ತದೆ. ಸರ್ಕಾರದ ಜನಕಲ್ಯಾಣ ಮತ್ತು ಸಾಮಾಜಿಕ ಯೋಜನೆಗಳನ್ನು ಹೆಚ್ಚು ನಿರ್ದಿಷ್ಟವಾಗಿ ಮತ್ತು ನಿಖರವಾಗಿ ಜಾರಿ ಮಾಡಲು ಇದು ನೆರವಾಗಬಹುದು.

ಇದನ್ನೂ ಓದಿ: ಆದಾಯ ತೆರಿಗೆಯೇ ಇಲ್ಲದ ಭಾರತದ ಏಕೈಕ ರಾಜ್ಯವಿದು; ಈ ಪ್ರದೇಶಕ್ಕೆ ವಿನಾಯಿತಿ ಸಿಕ್ಕಿದ್ದು ಯಾಕೆ? ಇಲ್ಲಿದೆ ಡೀಟೇಲ್ಸ್

2023-24ರ ಸಾಲಿನ ಸಮೀಕ್ಷೆಯಲ್ಲಿ ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 2,61,953 ಮನೆಗಳನ್ನು ಒಳಗೊಳ್ಳಲಾಗಿದೆ. ಇದರಲ್ಲಿ ಗ್ರಾಮೀಣ ಭಾಗದ 1,54,357 ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.

ಕೇರಳದಲ್ಲಿ ಅತಿ ಕಡಿಮೆ ಅಂತರ…

ಗೃಹ ಅನುಭೋಗ ವೆಚ್ಚದ ಸಮೀಕ್ಷೆ ಪ್ರಕಾರ, 2023-24ರ ಸಾಲಿನಲ್ಲಿ ಗ್ರಾಮೀಣ ಭಾಗದ ಪ್ರತೀ ಮನೆಯ ಸರಾಸರಿ ವೆಚ್ಚ 4,122 ರೂ ಇದೆ. ನಗರದಲ್ಲಿ ಸರಾಸರಿ ವೆಚ್ಚ 6,996 ರೂ ಇದೆ. ಇವುಗಳ ನಡುವಿನ ಅಂತರ ಶೇ. 70 ಇದೆ. ಅತಿಹೆಚ್ಚು ವೆಚ್ಚ ಇರುವ ರಾಜ್ಯಗಳಲ್ಲಿ ತಮಿಳುನಾಡು, ತೆಲಂಗಾಣ, ಕೇರಳ ಇವೆ. ತೆಲಂಗಾಣದಲ್ಲಿ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಸರಾಸರಿ ವೆಚ್ಚ ಕ್ರಮವಾಗಿ 5,435 ರೂ ಹಾಗೂ 8,978 ರೂ ಇದೆ. ಎರಡೂ ಪ್ರದೇಶಗಳ ವೆಚ್ಚಗಳ ನಡುವಿನ ಅಂತರ ಶೇ. 65 ಇದೆ. ತಮಿಳುನಾಡಿನಲ್ಲಿ ಅಂತರ ಶೇ. 43 ಮಾತ್ರವೇ ಇರುವುದು.

ಇದನ್ನೂ ಓದಿ: Economic Survey 2025: ಆರ್ಥಿಕ ಸಮೀಕ್ಷೆ ಎಂದರೇನು? ಬಜೆಟ್​ಗೆ ಮುಂಚೆ ಅದರ ಪ್ರಸ್ತುತಿ ಯಾಕೆ? ಇಲ್ಲಿದೆ ಡೀಟೇಲ್ಸ್

ಅತಿ ಕಡಿಮೆ ಅಂತರ ಇರುವುದು ಕೇರಳದಲ್ಲಿ. ಇಲ್ಲಿ ಗ್ರಾಮೀಣ ಮತ್ತು ನಗರ ಭಾಗಗಳ ನಡುವಿನ ಸರಾಸರಿ ಅನುಭೋಗ ವೆಚ್ಚದಲ್ಲಿನ ಅಂತರ ಶೇ. 18 ಮಾತ್ರವೇ ಇರುವುದು. ಗ್ರಾಮೀಣ ಭಾಗದಲ್ಲಿ 6,611 ರೂ ಇದ್ದರೆ, ನಗರ ಭಾಗದಲ್ಲಿ 7,783 ರೂ ಇದೆ.

ಕರ್ನಾಟಕದಲ್ಲಿ ಈ ಅಂತರ ಶೇ. 65ರಷ್ಟಿದೆ. ನಮ್ಮ ರಾಜ್ಯದಲ್ಲಿ ಗ್ರಾಮೀಣ ಭಾಗದಲ್ಲಿ ಒಂದು ಮನೆಗೆ ಸರಾಸರಿ ವೆಚ್ಚ 4,903 ರೂ ಇದೆ. ನಗರ ಭಾಗದಲ್ಲಿ 8,076 ರೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !