Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದಾಯ ತೆರಿಗೆಯೇ ಇಲ್ಲದ ಭಾರತದ ಏಕೈಕ ರಾಜ್ಯವಿದು; ಈ ಪ್ರದೇಶಕ್ಕೆ ವಿನಾಯಿತಿ ಸಿಕ್ಕಿದ್ದು ಯಾಕೆ? ಇಲ್ಲಿದೆ ಡೀಟೇಲ್ಸ್

Income tax exemption in Sikkim: ಭಾರತದಲ್ಲಿ ಮೈಜುಂ ಎನಿಸುವಷ್ಟು ಆದಾಯ ತೆರಿಗೆ ಇದೆ. ಇನ್ಕಮ್ ಟ್ಯಾಕ್ಸ್​ನಿಂದ ತಪ್ಪಿಸಿಕೊಳ್ಳುವುದು ಕಷ್ಟ. ಇದೇ ವೇಳೆ ಭಾರತದಲ್ಲಿ ಆದಾಯ ತೆರಿಗೆಯೇ ಇಲ್ಲದ ರಾಜ್ಯವೊಂದು ಇದೆ. ಅದು ಸಿಕ್ಕಿಂ. 1975ರಲ್ಲಿ ಭಾರತದೊಂದಿಗೆ ಅಧಿಕೃತವಾಗಿ ವಿಲೀನಗೊಂಡ ಸಿಕ್ಕಿಂ ರಾಜ್ಯಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ಕೊಡಲಾಗಿದೆ. ಭಾರತಕ್ಕೆ ಸೇರುವ ಮುನ್ನ ಸಿಕ್ಕಿಂ ರಾಜಪ್ರಭುತ್ವದ ಆಳ್ವಿಕೆಯಲ್ಲಿತ್ತು.

ಆದಾಯ ತೆರಿಗೆಯೇ ಇಲ್ಲದ ಭಾರತದ ಏಕೈಕ ರಾಜ್ಯವಿದು; ಈ ಪ್ರದೇಶಕ್ಕೆ ವಿನಾಯಿತಿ ಸಿಕ್ಕಿದ್ದು ಯಾಕೆ? ಇಲ್ಲಿದೆ ಡೀಟೇಲ್ಸ್
ಇನ್ಕಮ್ ಟ್ಯಾಕ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 31, 2025 | 10:46 AM

ನವದೆಹಲಿ, ಜನವರಿ 31: ಭಾರತದಲ್ಲಿ ಆದಾಯ ತೆರಿಗೆ ವಿಪರೀತವಾಯಿತು ಎನ್ನುವ ಮಾತು ಸಾಕಷ್ಟು ಕೇಳಿಬರುತ್ತಿದೆ. ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಜನಸಾಮಾನ್ಯರಿಗೆ ಇಷ್ಟೊಂದು ತೆರಿಗೆ ಹೊರೆ ಬೇಡವಾಗಿತ್ತು ಎನ್ನುವ ಅಭಿಪ್ರಾಯವಿದೆ. ಕೆಲ ಆಯ್ದ ಗುಂಪುಗಳನ್ನು ಬಿಟ್ಟರೆ ಬಹುತೇಕ ಎಲ್ಲರೂ ನಿಯಮಾನುಸಾರ ಆದಾಯ ತೆರಿಗೆ ಕಟ್ಟುವುದು ಅವಶ್ಯಕ. ವಿಶ್ವದ ಕೆಲ ದೇಶಗಳಲ್ಲಿ ಆದಾಯ ತೆರಿಗೆಯೇ ಅಸ್ತಿತ್ವದಲ್ಲಿಲ್ಲ. ಭಾರತದಲ್ಲೂ ಅದೇ ರೀತಿ ತೆರಿಗೆ ರಹಿತ ವ್ಯವಸ್ಥೆ ನಿರ್ಮಾಣವಾಗಬೇಕು ಎನ್ನುವ ಸಲಹೆ ಇದೆ. ಈ ಹೊತ್ತಲ್ಲೇ, ಭಾರತದಲ್ಲೂ ಆದಾಯ ತೆರಿಗೆಯೇ ಇಲ್ಲದ ರಾಜ್ಯವೊಂದಿದೆ. ಇದು ಕೆಲವರಿಗೆ ಅಚ್ಚರಿ ಮೂಡಿಸಬಹುದು. ಈಶಾನ್ಯ ಭಾಗದಲ್ಲಿರುವ ಸಿಕ್ಕಿಂ ರಾಜ್ಯದಲ್ಲಿನ ನಿವಾಸಿಗಳಿಗೆ ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ಕೊಡಲಾಗಿದೆ.

ಸಿಕ್ಕಿಂ ಭಾರತದಲ್ಲಿ ಆದಾಯ ತೆರಿಗೆಯೇ ಹೊಂದಿಲ್ಲದ ಏಕೈಕ ರಾಜ್ಯವಾಗಿದೆ. ಇಲ್ಲಿನ ಜನರು ಅದೆಷ್ಟೇ ಸಂಪಾದಿಸಿದರೂ ಇನ್ಕಮ್ ಟ್ಯಾಕ್ಸ್ ಕಟ್ಟುವ ಅವಶ್ಯಕತೆಯೇ ಇಲ್ಲ. ಷೇರುಗಳ ಲಾಭಾಂಶ, ಠೇವಣಿಗಳಿಂದ ಬರುವ ಬಡ್ಡಿ ಇತ್ಯಾದಿ ಯಾವುದೇ ಆದಾಯಕ್ಕೂ ಇಲ್ಲಿನ ಸ್ಥಳೀಯ ನಿವಾಸಿಗಳು ತೆರಿಗೆ ಕಟ್ಟಬೇಕಿಲ್ಲ.

ಇದನ್ನೂ ಓದಿ: Economic Survey 2025: ಆರ್ಥಿಕ ಸಮೀಕ್ಷೆ ಎಂದರೇನು? ಬಜೆಟ್​ಗೆ ಮುಂಚೆ ಅದರ ಪ್ರಸ್ತುತಿ ಯಾಕೆ? ಇಲ್ಲಿದೆ ಡೀಟೇಲ್ಸ್

ಸಿಕ್ಕಿಂ ರಾಜ್ಯಕ್ಕೆ ಯಾಕೆ ಈ ವಿಶೇಷ ಸೌಲಭ್ಯ..?

ಈಶಾನ್ಯ ಭಾರತದ ಎಂಟು ರಾಜ್ಯಗಳಲ್ಲಿ ಸಿಕ್ಕಿಂ ಒಂದು. ಸಿಕ್ಕಿಂ ರಾಜ್ಯ ಭಾರತಕ್ಕೆ ಸೇರಿದ್ದು 1975ರಲ್ಲಿ. ಅಲ್ಲಿಯವರೆಗೆ ಅದು ನಾಮಗ್ಯಾಲ್ ಎನ್ನುವ ಬೌದ್ಧ ರಾಜವಂಶದ ಆಳ್ವಿಕೆಯಲ್ಲಿತ್ತು. ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಇದ್ದಾಗ ಅವರ ಅಧೀನದಲ್ಲಿ ಸಿಕ್ಕಿಂ ಪ್ರತ್ಯೇಕ ಸಂಸ್ಥಾನವಾಗಿತ್ತು. ಸ್ವಾತಂತ್ರ್ಯಾನಂತರ, ಭಾರತದ ರಕ್ಷಣೆಯಲ್ಲಿ ಸಿಕ್ಕಿಂ ಪ್ರತ್ಯೇಕ ಸಂಸ್ಥಾನವಾಗಿತ್ತು. 1975ರಲ್ಲಿ ಇದು ಭಾರತ ದೇಶಕ್ಕೆ ಅಧಿಕೃತವಾಗಿ ವಿಲೀನಗೊಂಡಿತು. ಸಿಕ್ಕಿಂ ರಾಜ್ಯ ಭಾರತದೊಂದಿಗೆ ಸೇರ್ಪಡೆಯಾದ ಹಿನ್ನೆಲೆ, ಸಂದರ್ಭ ನಿಜಕ್ಕೂ ರೋಚಕವಾದುದು.

ಆದರೆ, ಅಲ್ಲಿಯವರೆಗೆ ಸಿಕ್ಕಿಂ ರಾಜ್ಯದಲ್ಲಿ ಆದಾಯ ತೆರಿಗೆಯೇ ಇರಲಿಲ್ಲ. ಭಾರತಕ್ಕೆ ವಿಲೀನಗೊಂಡಾಗ ಆಗಿದ್ದ ಒಪ್ಪಂದದ ಪ್ರಕಾರ, ಸಿಕ್ಕಿಂನಲ್ಲಿದ್ದ ಹಲವು ಕಾನೂನುಗಳನ್ನು ಹಾಗೆಯೇ ಮುಂದುವರಿಸಲಾಯಿತು. ಅದರಲ್ಲಿ ಆದಾಯ ತೆರಿಗೆ ವಿನಾಯಿತಿಯೂ ಒಂದು.

ಇದನ್ನೂ ಓದಿ: ಕಾರ್ಪೊರೇಟ್ ಟ್ಯಾಕ್ಸ್ ಅಲ್ಲ, ವೈಯಕ್ತಿಕ ಇನ್ಕಮ್ ಟ್ಯಾಕ್ಸ್ ಕಡಿಮೆ ಮಾಡಿ: ಮಾಜಿ ಐಎಂಎಫ್ ಅಧಿಕಾರಿ ಸುರ್ಜಿತ್ ಭಲ್ಲಾ ಸಲಹೆ

ಭಾರತದಲ್ಲಿ ಈ ಕೆಲ ವರ್ಗಗಳು ಮತ್ತು ಆಸ್ತಿಗಳಿಗೆ ತೆರಿಗೆ ವಿನಾಯಿತಿ ಉಂಟು…

ಈಶಾನ್ಯ ಭಾಗದ ಇತರ ಏಳು ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡದ ಜನರಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಲಡಾಖ್, ಜಮ್ಮು ಕಾಶ್ಮೀರದಲ್ಲಿನ ಬುಡಕಟ್ಟು ನಿವಾಸಿಗಳೂ ಕೂಡ ಇನ್ಕಮ್ ಟ್ಯಾಕ್ಸ್ ಕಟ್ಟಬೇಕಿಲ್ಲ.

ದೇಶದ ಯಾವುದೇ ಕಡೆ ಕೃಷಿ ಆದಾಯ, ವಿದ್ಯಾರ್ಥಿ ವೇತನಗಳನ್ನು ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮುಂಬೈನ ಮಂತ್ರಾಲಯದ 7ನೇ ಮಹಡಿಯಿಂದ ಹಾರಿದ ವ್ಯಕ್ತಿ; ವಿಡಿಯೋ ವೈರಲ್
ಮುಂಬೈನ ಮಂತ್ರಾಲಯದ 7ನೇ ಮಹಡಿಯಿಂದ ಹಾರಿದ ವ್ಯಕ್ತಿ; ವಿಡಿಯೋ ವೈರಲ್
ಇಂಥ ಡ್ಯಾನ್ಸ್ ಮಾಡೋಕೆ ನಾಚಿಕೆ ಆಗಲ್ವಾ ಎಂದವರಿಗೆ ನಿವೇದಿತಾ ಗೌಡ ಉತ್ತರ
ಇಂಥ ಡ್ಯಾನ್ಸ್ ಮಾಡೋಕೆ ನಾಚಿಕೆ ಆಗಲ್ವಾ ಎಂದವರಿಗೆ ನಿವೇದಿತಾ ಗೌಡ ಉತ್ತರ
ಎಲ್ಲರೂ ಇಂಥ ಮನಸ್ಥಿತಿ ಹೊಂದಿದ್ದರೆ ತಂಟೆ-ತಗಾದೆ ಸೃಷ್ಟಿಯಾಗಲಾರವು
ಎಲ್ಲರೂ ಇಂಥ ಮನಸ್ಥಿತಿ ಹೊಂದಿದ್ದರೆ ತಂಟೆ-ತಗಾದೆ ಸೃಷ್ಟಿಯಾಗಲಾರವು
ಎರಡೂ ಪಕ್ಷಗಳ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿ, ಅಶೋಕ ಅಧ್ಯಕ್ಷತೆ
ಎರಡೂ ಪಕ್ಷಗಳ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿ, ಅಶೋಕ ಅಧ್ಯಕ್ಷತೆ
ಲೋಕಾಯುಕ್ತ ವರದಿ ಮತ್ತು ಶಿಫಾರಸ್ಸನ್ನು ನಾನು ಇನ್ನೂ ಓದಿಲ್ಲ: ಶಿವಕುಮಾರ್
ಲೋಕಾಯುಕ್ತ ವರದಿ ಮತ್ತು ಶಿಫಾರಸ್ಸನ್ನು ನಾನು ಇನ್ನೂ ಓದಿಲ್ಲ: ಶಿವಕುಮಾರ್
ಬೆಳಗಾವಿ, ಖಾನಾಪುರ, ನಿಪ್ಪಾಣಿಯಲ್ಲಿ ಕನ್ನಡ ಮಾತಾಡುವವರೇ ವಿರಳ: ಹೊರಟ್ಟಿ
ಬೆಳಗಾವಿ, ಖಾನಾಪುರ, ನಿಪ್ಪಾಣಿಯಲ್ಲಿ ಕನ್ನಡ ಮಾತಾಡುವವರೇ ವಿರಳ: ಹೊರಟ್ಟಿ
ಜಿಟಿ ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ: ನಿಖಿಲ್ ಕುಮಾರಸ್ವಾಮಿ
ಜಿಟಿ ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ: ನಿಖಿಲ್ ಕುಮಾರಸ್ವಾಮಿ
ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಮಾಡಿದ ಸಾಧನೆ ಏನು? ಜಮೀರ್
ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಮಾಡಿದ ಸಾಧನೆ ಏನು? ಜಮೀರ್
ಬೆಂಗಳೂರು: ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್​​ ಓಪನ್​
ಬೆಂಗಳೂರು: ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್​​ ಓಪನ್​
ಕಂಡಕ್ಟರ್ ನಮ್ಮ ಮಗಳ ವಿರುದ್ಧ ಅವಾಚ್ಯ ಪದ ಬಳಸಿದ್ದು ನಿಜ: ಪಾಲಕರು
ಕಂಡಕ್ಟರ್ ನಮ್ಮ ಮಗಳ ವಿರುದ್ಧ ಅವಾಚ್ಯ ಪದ ಬಳಸಿದ್ದು ನಿಜ: ಪಾಲಕರು