ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ವಿಶ್ವಾಸ ಹೊಂದಿದೆ, ಮುಂದಿನ ಚುನಾವಣೆಯಲ್ಲಿ ಒಟ್ಟಿಗೆ ಹೋರಾಡುತ್ತೇವೆ: ಶಿವಕುಮಾರ್
ಮುಡಾ ಪ್ರಕರಣದಲ್ಲಿ ಕುಮಾರ್ ನಾಯಕ್ ಅವರಿಂದ ಕರ್ತವ್ಯಲೋಪ ಆಗಿದೆ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಲೋಕಾಯುಕ್ತ ಮಾಡಿರುವ ಶಿಫಾಪರಸ್ಸಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ವರದಿಯನ್ನು ತಾನು ನೋಡಿಲ್ಲ, ಪೇಪರಲ್ಲಿ ಬಂದಿದೆಯೆಂದು ಯಾರೋ ಹೇಳಿದರು, ಬೆಳಗ್ಗೆ 5 ಗಂಟೆಗೆ ಎದ್ದು ದೆಹಲಿಗೆ ಬಂದಿರೋದ್ರಿಂದ ಪೇಪರ್ ನೋಡಲಾಗಿಲ್ಲ ಎಂದು ಹೇಳಿದರು.
ದೆಹಲಿ: ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿಯಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ನಾಯಕತ್ವದಲ್ಲೇ ಚುನಾವಣೆಗೆ ಕಾಂಗ್ರೆಸ್ ಹೋಗಲಿದೆಯಾ ಎಂದು ಕೇಳಿದ ಪ್ರಶ್ನೆಗೆ, ಕಾಂಗ್ರೆಸ್ ಯಾವತ್ತಿಗೂ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟುಕೊಂಡಿದೆ, ತಾನು ಐದು ವರ್ಷಗಳ ಕಾಲ ಪಕ್ಷದ ಅಧ್ಯಕ್ಷನಾಗಿದ್ದುಕೊಂಡು, ದೊಡ್ಡ ಸ್ಥಾನದಲ್ಲಿ ಇದ್ದವನು ಚುನಾವಣೆ ಸಮಯದಲ್ಲಿ ಮನೆಯಲ್ಲಿ ಕೂತುಕೊಳ್ಳಲಾದೀತೇ, ಎಲ್ಲರೂ ಸೇರಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು. ಪಕ್ಷದ ಹೈಕಮಾಂಡ್ ಜೊತೆ ಕೆಲ ಸಚಿವರು ಭೇಟಿ ಮಾಡುತ್ತಿರುವುದರ ಬಗ್ಗೆ ಪ್ರಶ್ನೆಗೆ ಉತ್ತರಿಸಲು ಇಷ್ಟಪಡದ ಶಿವಕಮಾರ್, ಕಾಫಿ ಕುಡೀಲಾ ಎನ್ನುತ್ತ ತಮ್ಮ ಮುಂದಿನ ಕಪ್ ಕೈಗೆತ್ತಿಕೊಳ್ಳುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಂಪುಟ ಪುನಾರಚನೆ; ಕ್ಷೇತ್ರಗಳಲ್ಲಿ ಕೆಲಸ ಮಾಡುವ ರಿಸಲ್ಟ್ ಓರಿಯೆಂಟೆಡ್ ಮುಖಂಡರಿಗೆ ಅವಕಾಶ ಸಿಗಲಿದೆ: ಶಿವಕುಮಾರ್