ಜಿಟಿ ದೇವೇಗೌಡರ ಮುನಿಸಿನ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರಲ್ಲೂ ಸ್ಪಷ್ಟತೆ ಮತ್ತು ಸ್ಪಷ್ಟನೆ ಇಲ್ಲ!
ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಪ್ರಮುಖ ನಾಯಕರೆಲ್ಲ ನಿಖಿಲ್ ಪರ ಪ್ರಚಾರ ಮಾಡಿದರೂ ತನ್ನನ್ನು ಕರೆದಿಲ್ಲವೆಂಬ ಕಾರಣಕ್ಕೆ ಜಿಟಿಡಿ ಪ್ರಚಾರಕ್ಕೆ ಹೋಗಿರಲಿಲ್ಲ. ತಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇ ಒಂದು ಆಕಸ್ಮಿಕ, ಪ್ರಚಾರಕ್ಕಾಗಿ ಯಾರನ್ನೂ ಕರೆದಿರಲಿಲ್ಲ, ಪ್ರಚಾರಕ್ಕೆ ಬಂದವರೆಲ್ಲ ಸ್ವಇಚ್ಛೆ ಮತ್ತು ಸ್ವಯಂಪ್ರೇರಿತರಾಗಿ ಬಂದಿದ್ದರು, ಯಾರನ್ನೂ ಕರೆದಿರಲಿಲ್ಲ ಎಂದು ನಿಖಿಲ್ ಹೇಳಿದರು.
ಮೈಸೂರು: ಜೆಡಿಎಸ್ ಪಕ್ಷದ ಹಿರಿಯ ನಾಯಕ ಮತ್ತು ಶಾಸಕ ಜಿಟಿ ದೇವೇಗೌಡ ಅವರು ಪಕ್ಷದ ನಾಯಕತ್ವದಿಂದ ಅಂತರವನ್ನು ಈಗಲೂ ಕಾಯ್ದುಕೊಂಡಿದ್ದಾರೆ ಮತ್ತು ಯಾಕೆ ಮುನಿಸು ಅನ್ನುವ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡುತ್ತಿಲ್ಲ. ಇವತ್ತು ಮೈಸೂರಲ್ಲಿ ಕಾರ್ಯಕರ್ತರ ಸಬೆ ನಡೆಸಿದ ನಿಖಿಲ್, ಜಿಟಿಡಿ ಅವರು ಕ್ಷೇತ್ರದ ಕೆಲಸಗಳಲ್ಲಿ ಬ್ಯೂಸಿಯಾಗಿರುವುದರಿಂದ ಸಭೆಗೆ ಬಂದಿಲ್ಲ, ಅವರು ಪಕ್ಷದ ಹಿರಿಯ ನಾಯಕರು ಮತ್ತು ಅವರ ಬಗ್ಗೆ ತನ್ನಲ್ಲಿ ಅಪಾರವಾದ ಗೌರವವಿದೆ ಎಂದರು. ಮುನಿಸು ಎಂಥದ್ದೂ ಇಲ್ಲ, ಅವರ ಮಗ ಮತ್ತು ಆತ್ಮೀಯ ಸ್ನೇಹಿತ ಹರೀಶ್ ಗೌಡ ತನ್ನ ಪಕ್ಕದಲ್ಲೇ ಕೂತಿದ್ದಾರೆ, 2025 ಹೊಸ ವರ್ಷ ಶುರುವಾದಾಗ ತಾನು ಎಲ್ಲರಿಗಿಂತ ಮೊದಲು ಫೋನ್ ಮಾಡಿದ್ದು ಜಿಟಿಡಿಯವರಿಗೆ ಅಂತೆಲ್ಲ ನಿಖಿಲ್ ಹೇಳುತ್ತಾರಾದರೂ ಉತ್ತರಗಳು ಸಮಂಜಸ ಅನಿಸಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪಕ್ಷದ ರಾಜ್ಯಾಧ್ಯಕ್ಷನಾಗಲು ಸಿದ್ಧನಿದ್ದೇನೆ ಅನ್ನೋದನ್ನು ನಿಖಿಲ್ ಕುಮಾರಸ್ವಾಮಿ ನೇರವಾಗಿ ಹೇಳಲ್ಲ!