AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್​​ ಓಪನ್​

ಬೆಂಗಳೂರು: ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್​​ ಓಪನ್​

ರಾಚಪ್ಪಾಜಿ ನಾಯ್ಕ್
| Edited By: ವಿವೇಕ ಬಿರಾದಾರ|

Updated on: Feb 25, 2025 | 2:46 PM

Share

ಕಳೆದ ವಾರ ಡಿ.ಜೆ.ಹಳ್ಳಿಯಲ್ಲಿ ವೀಲಿಂಗ್​ ಮಾಡಿದ್ದ 14 ಜನರನ್ನು ಬೆಂಗಳೂರು ಪೊಲೀಸರು ರೌಡಿಶೀಟರ್‌ಗಳೆಂದು ಘೋಷಿಸಿದ್ದಾರೆ. ಮಾರಕಾಸ್ತ್ರಗಳೊಂದಿಗೆ ವೀಲಿಂಗ್​ ಮಾಡುತ್ತಿದ್ದ ಈ ಆರೋಪಿಗಳು ಪೂರ್ವ ವಿಭಾಗದಲ್ಲಿ ದೊಡ್ಡ ಪ್ರಮಾಣದ ಅಶಾಂತಿಯನ್ನು ಸೃಷ್ಟಿಸಿದ್ದರು. ಪೊಲೀಸರ ಈ ಕ್ರಮವು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ವೀಲಿಂಗ್ ಮಾಡುವವರಿಗೆ ಎಚ್ಚರಿಕೆಯಾಗಿದೆ.

ಬೆಂಗಳೂರು, ಫೆಬ್ರವರಿ 25: ಕಳೆದ ವಾರ ಡಿ.ಜೆ.ಹಳ್ಳಿಯಲ್ಲಿ ರಾತ್ರಿ ವೇಳೆ ಮಾರಕಾಸ್ತ್ರ ಹಿಡಿದು ವೀಲಿಂಗ್​ ಮಾಡಿದ್ದ 14 ಜನರ ವಿರುದ್ಧ ಪೊಲೀಸರು ರೌಡಿಶೀಟರ್​ ಓಪನ್​ ಮಾಡಿದ್ದಾರೆ. ಆರೋಪಿಗಳು ಪೂರ್ವ ವಿಭಾಗದಲ್ಲಿ ದಾಂದಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ 14 ಜನರ ವಿರುದ್ಧ ಡಿ.ಜೆ.ಹಳ್ಳಿ ಪೊಲೀಸರು ರೌಡಿಶೀಟರ್​ ಓಪನ್ ಮಾಡಿದ್ದಾರೆ. ವೀಲಿಂಗ್ ಮಾಡೋರಿಗೆ ಇದು ಎಚ್ಚರಿಕೆ ಗಂಟೆಯಾಗಿದೆ.

ಪುಂಡರ ವೀಲಿಂಗ್​

Follow Us
ರಾಚಪ್ಪಾಜಿ ನಾಯ್ಕ್
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಅವರು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನವರು. ಕಳೆದ 2 ವರ್ಷದಿಂದ ಟಿವಿ9 ಕನ್ನಡದ ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ ಅನುಭವವಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದಾರೆ.

Read More