ಪಕ್ಷದ ರಾಜ್ಯಾಧ್ಯಕ್ಷನಾಗಲು ಸಿದ್ಧನಿದ್ದೇನೆ ಅನ್ನೋದನ್ನು ನಿಖಿಲ್ ಕುಮಾರಸ್ವಾಮಿ ನೇರವಾಗಿ ಹೇಳಲ್ಲ!
ಪಕ್ಷದ ಒಬ್ಬ ಶಿಸ್ತಿನ ಕಾರ್ಯಕರ್ತ ಎಂದು ಹೇಳುವ ನಿಖಿಲ್ ಕುಮಾರಸ್ವಾಮಿ ತಾನ್ಯಾವತ್ತೂ ಸ್ಥಾನಮಾನಗಳಿಗಾಗಿ ಆಸೆ ಪಟ್ಟವನಲ್ಲ ಎನ್ನುತ್ತಾರೆ. ತನ್ನಂಥ ಸಾವಿರಾರು ಕಾರ್ಯಕರ್ತರನ್ನು ಹುಟ್ಟುಹಾಕುವ ಶಕ್ತಿ ಪಕ್ಷಕ್ಕಿದೆ, ಪಕ್ಷವನ್ನು ಕಟ್ಟಿ ಬೆಳೆಸಿದ ಹಲವಾರು ಹಿರಿಯ ನಾಯಕರಿದ್ದಾರೆ, ಪಕ್ಷದ ಹಿರಿಯರು ಯಾವುದೇ ನಿರ್ಣಯ ತೆಗೆದುಕೊಂಡರೂ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳುತ್ತಾರೆ.
ದೆಹಲಿ: ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಯುವ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ, ಹೆಚ್ ಡಿ ದೇವೇಗೌಡರು ಹೇಳಿದಂತೆ ಪಕ್ಷದ ರಾಜ್ಯಾಧ್ಯಕ್ಷನ ಸ್ಥಾನ ವಹಿಸಿಕೊಳ್ಳಲು ಸಿದ್ಧರಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರ ನೀಡುವ ಬದಲು, ಆ ಅಂಶವನ್ನು ಬಿಟ್ಟು ಮಾತಾಡಿದರು. ಒಪ್ಪಿಕೊಳ್ಳಲು ತಯಾರಿದ್ದೇನೆ ಅಂತ ಹೇಳುವ ಹಂತದವರೆಗೆ ಅವರು ಬರುತ್ತಾರೆಯೇ ಹೊರತು ಹೌದು, ಅಧ್ಯಕ್ಷನಾಗಲು ರೆಡಿಯಾಗಿದ್ದೇನೆ ಅಂತ ಹೇಳಲ್ಲ. ಅವರ ಮಾತುಗಳನ್ನು ಕೇಳಿದರೆ ನಿಮಗೆ ಎಲ್ಲವೂ ಅರ್ಥವಾಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ: ಹೆಚ್ಡಿ ದೇವೇಗೌಡ ಮಹತ್ವದ ಸುಳಿವು
Latest Videos