ಮಹಾರಾಷ್ಟ್ರದ ಜನರಿಗೆ ಹೂ ನೀಡಿ, ಸ್ವೀಟ್ ತಿನ್ನಿಸಿ, ಕನ್ನಡ ಬಾವುಟ ಹೊದಿಸಿ ಮಾತಾಡಿಸಿದ ಕನ್ನಡಿಗರು!
ಕನ್ನಡಪರ ಹೋರಾಟಗಾರರು ತಾವ್ಯಾಕೆ ಹೀಗೆ ಮಾಡುತ್ತಿದ್ದೇವೆ ಅನ್ನೋದನ್ನು ಮಹಾರಾಷ್ಟ್ರದವರಿಗೆ ಹಿಂದಿ ಭಾಷೆಯಲ್ಲಿ ಹೇಳುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಅವರಿಗೆ ಹಿಂದಿ ಚೆನ್ನಾಗಿ ಮಾತಾಡಲು ಬಾರದು, ಅದರೂ ಅವರ ಪ್ರಯತ್ನ ಮೆಚ್ಚಲೇಬೇಕು. ಕನ್ನಡಿಗರ ಈ ವರ್ತನೆಯನ್ನು ಮರಾಠಿಗರು ಗ್ರ್ಯಾಂಟೆಡ್ ಅಗಿ ತೆಗೆದುಕೊಳ್ಳಬಾರದು. ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ಕನ್ನಡ ಸಂಘಗಳು ಹೇಗೆ ಹೋರಾಟ ನಡೆಸಿದವು ಅಂತ ಅವರಿಗೆ ಗೊತ್ತಿದೆ.
ದೇವನಹಳ್ಳಿ: ದೇವನಹಳ್ಳಿಯ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಮಾಡುತ್ತಿರುವ ಕೆಲಸ ನೋಡುತ್ತಿದ್ದರೆ ಸಂಜಯ್ ದತ್ ಮತ್ತು ವಿದ್ಯಾಬಾಲನ್ ನಟಿಸಿದ ‘ಲಗೇ ರಹೋ ಮುನ್ನಾಭಾಯಿ’ ಸಿನಿಮಾ ನೆನಪಾಗುತ್ತದೆ. ದೇವನಹಳ್ಳಿ ಟೋಲ್ ಗೇಟ್ ಬಳಿ ಗುಲಾಬಿ ಹೂ, ಸಿಹಿತಿಂಡಿ ಮತ್ತು ಕರ್ನಾಟಕದ ಬಾವುಟಗಳನ್ನು ಹಿಡಿದು ನಿಂತಿದ್ದ ಕಾರ್ಯಕರ್ತರು ಅಲ್ಲಿಗೆ ಬರುತ್ತಿದ್ದ ಮಹಾರಾಷ್ಟ್ರ ವಾಹನಗಳನ್ನು ನಿಲ್ಲಿಸಿ ಅವುಗಳಲ್ಲಿ ಪ್ರಯಾಣಿಸುತ್ತಿದ್ದವರಿಗೆ ಗುಲಾಬಿ ಹೂ ನೀಡಿ, ಸಿಹಿ ತಿನ್ನಿಸಿದರು ಮತ್ತು ಅವರ ಹೆಗಲ ಮೇಲೆ ಕನ್ನಡ ಬಾವುಟವನ್ನು ಹೊದೆಸಿದರು. ಕನ್ನಡನಾಡಿನ ಸಂಸ್ಕೃತಿಯೇ ಇದು. ಕನ್ನಡಿಗರು ಶಾಂತಿಪ್ರಿಯರು, ಜಗಳ-ತಂಟೆ-ತಗಾದೆಗಳಿಂದ ಗಾವುದ ದೂರ. ಕನ್ನಡ ಸಂಘದ ಸದಸ್ಯರ ನಡವಳಿಕೆ ಮಹಾರಾಷ್ಟ್ರ ಜನಕ್ಕೆ ಬಹಳ ಇಷ್ಟವಾಯಿತು ಅಂತ ಬೇರೆ ಹೇಳಬೇಕೇ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕನ್ನಡಿಗ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ: ಬೆಳಗಾವಿ ಗಡಿಯಲ್ಲಿ ನಿಜಕ್ಕೂ ನಡೆದಿದ್ದೇನು? ಇಲ್ಲಿದೆ ಸಂಪೂರ್ಣ ವಿವರ