Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣಾ ಸಮಯದಲ್ಲಿ ಮನೆ ನೀಡುವ ಭರವಸೆ ನೀಡಿರಲಿಲ್ಲ, ಅದರೂ ಬಡವರಿಗೆ ಮನೆ ನೀಡಿದ್ದೇವೆ: ಜಮೀರ್ ಅಹ್ಮದ್

ಚುನಾವಣಾ ಸಮಯದಲ್ಲಿ ಮನೆ ನೀಡುವ ಭರವಸೆ ನೀಡಿರಲಿಲ್ಲ, ಅದರೂ ಬಡವರಿಗೆ ಮನೆ ನೀಡಿದ್ದೇವೆ: ಜಮೀರ್ ಅಹ್ಮದ್

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 25, 2025 | 3:59 PM

ಒಂದು ಅವಧಿಯಲ್ಲಿ ರೈತರ ಸಾಲಮನ್ನಾ ಮಾಡಿದ್ದ ಕುಮಾರಸ್ವಾಮಿ ಅದನ್ನೇ ಹೇಳಿಕೊಂಡು ತಿರುಗಾಡುತ್ತಾರೆ, ಅವರು ಸಿಎಂ ಆಗಿದ್ದಾಗ ತಾನೂ ಮಂತ್ರಿಯಾಗಿದ್ದೆ, ಅವರು ಮಾಡಿದ್ದೇನು ಅಂತ ಹೇಳಲಿ, ಸಿದ್ದರಾಮಯ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತೇ ಹೊರತು ಮನೆ ಕೊಡ್ತೀವಿ ಅಂತ ಹೇಳಿರಲಿಲ್ಲ, ಅದರೂ ತಮ್ಮ ಸರ್ಕಾರ ಬಡವರಿಗೆ ಮನೆಗಳನ್ನು ನೀಡುತ್ತಿದೆ ಎಂದು ಜಮೀರ್ ಅಹ್ಮದ್ ಹೇಳಿದರು.

ಶಿವಮೊಗ್ಗ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ಮತ್ತೊಮ್ಮೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮೇಲೆ ಹರಿಹಾಯ್ದರು. ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲವೆಂದು ಸರ್ಕಾರವನ್ನು ಟೀಕಿಸುತ್ತಾರೆ. ಗ್ಯಾರಂಟಿ ಯೋಜನೆಗಳ ಮೂಲಕ ಬಡವರರಿಗೆ ನೆರವಾಗುತ್ತಿರುವುದು ಅಭಿವೃದ್ಧಿಲ್ಲವೇ? ಗ್ಯಾರಂಟಿ ಯೋಜನೆಗಳಲ್ಲದೆ ಬಡ ಜನತೆಗೆ ತಲೆಯ ಮೇಲೆ ಸೂರು ಕಲ್ಪಿಸಲು ವಿವಿಧ ಯೋಜನೆಗಳ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ₹ 9,500 ಕೋಟಿ ಬಿಡುಗಡೆಜಮೀರ್ ಅಹ್ಮದ್ ಖಾನ್  ಮಾಡಿದ್ದಾರೆ ಮತ್ತು ಮನೆಗಳು ಕೂಡ ತಯಾರಾಗಿವೆ ಎಂದು ಹೇಳಿದ ಜಮೀರ್, ಎರಡು ಸಲ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಎಷ್ಟು ಮನೆ ಕಟ್ಟಿಸಿದ್ದಾರೆ ಅಂತ ಹೇಳಲಿ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹಸು ಕೆಚ್ಚಲು ಕೊಯ್ದ ಪ್ರಕರಣ: ಜಮೀರ್ ಅಹ್ಮದ್ ಹೇಳಿಕೆಗೆ ಚೈತ್ರಾ ಕುಂದಾಪುರ ತಿರುಗೇಟು