‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ ಗೌಡ
ತ್ರಿವಿಕ್ರಮ್ ಮತ್ತು ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ತುಂಬ ಆಪ್ತವಾಗಿದ್ದರು. ಹಾಗಾಗಿ ಅವರ ನಡುವೆ ಪ್ರೀತಿ ಮೂಡಿರಬಹುದು ಎಂಬ ಅನುಮಾನ ಕೆಲವರಿಗೆ ಇದೆ. ಈ ಬಗ್ಗೆ ಭವ್ಯಾ ಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ನಡುವೆ ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ಬಗ್ಗೆಯೂ ಭವ್ಯಾ ಗೌಡ ಅವರು ಮಾತನಾಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಮುಗಿದ ಬಳಿಕ ಭವ್ಯಾ ಗೌಡ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ತ್ರಿವಿಕ್ರಮ್ ಮತ್ತು ತಮ್ಮ ನಡುವಿನ ಬಾಂಧವ್ಯದ ಬಗ್ಗೆ ಅವರು ಮಾತಾಡಿದ್ದಾರೆ. ‘ನನ್ನ ಮತ್ತು ತ್ರಿವಿಕ್ರಮ್ ನಡುವೆ ಅಂಥದ್ದು ಏನೂ ಇಲ್ಲ. ನಮ್ಮದು ಬರೀ ಸ್ನೇಹ. ಅದನ್ನು ಎಷ್ಟು ರೀತಿಯಲ್ಲಿ ಹೇಳಿದರೂ ಜನರು ಬೇರೆ ಬೇರೆ ರೀತಿ ಸ್ವೀಕರಿಸಿದ್ದಾರೆ. ಈ ಬಗ್ಗೆ ನಾನು ಎರಡು, ಮೂರು ಕಡೆ ಹೇಳಬಹುದು. ಹೋದಕಡೆಯಲ್ಲ ಇದನ್ನೇ ಹೇಳುತ್ತಿದ್ದರೆ ಅದು ನನಗೂ ಸರಿ ಕಾಣಿಸಲ್ಲ, ನೋಡುವವರಿಗೂ ಸರಿ ಕಾಣಿಸಲ್ಲ’ ಎಂದು ಭವ್ಯಾ ಗೌಡ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos