ನನಗೆ ಕಡಿಮೆ ಸಂಭಾವನೆ ಸಿಕ್ಕಿರಬಹುದು ಆದರೆ ಸಿಕ್ಕ ಮೊತ್ತದಿಂದ ನಾನು ತೃಪ್ತಳಾಗಿದ್ದೇನೆ: ಭವ್ಯಾ ಗೌಡ
ಮಧ್ಯಮ ವರ್ಗದ ಕುಟುಂಬಗಳ ಉಳಿತಾಯ ಯೋಜನೆ ಹೇಗಿರುತ್ತೆ ಅಂತ ಭವ್ಯಾ ಹೇಳುತ್ತಾರೆ. ಆದರೆ ಸಂಪಾದನೆ ಎಷ್ಟೇ ಇರಲಿ ಸೇವಿಂಗ್ಸ್ ಮಾಡೋದು ಬಹಳ ಮುಖ್ಯ, ಕಷ್ಟಕಾಲಕ್ಕೆ ಯಾರೂ ಆಗಲ್ಲ, ಬಿಗ್ ಬಾಸ್ ಮನೆಯಲ್ಲಿ ತಾನು ಕಂಡುಕೊಂಡಿರುವ ಸತ್ಯವಿದು, ಹೆಲ್ತ್ ಇನ್ಶೂರನ್ಸ್ ಮಾಡಿಸಿಕೊಳ್ಳುವುದು ಬಹಳ ಮಹತ್ವದ್ದು, ಸಂಪಾದನೆಯಲ್ಲಿ ಒಂದಷ್ಟು ಉಳಿತಾಯ ಮಾಡಲೇಬೇಕು ಎಂದು ಅವರು ಹೇಳುತ್ತಾರೆ.
ಬೆಂಗಳೂರು: ಸಂಬಳ, ಸಂಭಾವನೆ ಬಗ್ಗೆ ಯಾರನ್ನೂ ಕೇಳಬಾರದು ಅಂತಾರೆ, ಅದು ನಿಜವೂ ಹೌದು. ಆದರೆ ಬಿಗ್ ಬಾಸ್ ಹುಟ್ಟಿಸಿರುವ ಕ್ರೇಜ್ ನಿಂದಾಗಿ ಆ ಕೆಟ್ಟ ಕುತೂಹಲ ಹುಟ್ಟಿಕೊಳ್ಳುತ್ತಿದೆ. ನಮ್ಮ ಪ್ರತಿನಿಧಿ ಎಲ್ಲ ಬಿಗ್ ಬಾಸ್ ಸ್ಪರ್ಧಿಗಳನ್ನು ಕೇಳಿದಂತೆ ಭವ್ಯಾ ಗೌಡರನ್ನು ಸಹ ಸಂಭಾವನೆ ಬಗ್ಗೆ ಕೇಳಿದರು. ಭವ್ಯಾ ಕೂಡ ನಿಖರವಾದ ಮಾಹಿತಿ ನೀಡಲಿಲ್ಲ, ಅದರೆ ತನಗೆ ಸಿಕ್ಕ ಸಂಭಾವನೆಯ ಬಗ್ಗೆ ತೃಪ್ತಳಾಗಿರುವುದಾಗಿ ಹೇಳಿದರು. ಬಿಗ್ ಬಾಸ್ ಮನೆಯೊಳಗೆ ಹೋಗುವಾಗ ಹೇಗಿದ್ದೆನೋ ಹೊರಗೆ ಬರುವಾಗಲೂ ಹಾಗೆಯೇ ಇದ್ದೇನೆ, ಇನ್ನು ಮೇಲೆ ತನಗೆ ಸಿಗುವ ಅವಕಾಶಗಳಲ್ಲಿ ಹೆಚ್ಚು ಸಂಭಾವನೆ ಸಿಗುವ ಸಾಧ್ಯತೆ ಇದೆ ಎಂದು ಭವ್ಯಾ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಭವ್ಯಾ ಗೌಡ ಎಲಿಮಿನೇಟ್ ಆಗಿದ್ದಕ್ಕೆ ಕಾರಣಗಳು ಏನು?