ಧಾವಂತದಲ್ಲಿ ದೆಹಲಿಗೆ ತೆರಳಿದ ಡಿಸಿಎಂ ಡಿಕೆ ಶಿವಕುಮಾರ್ ವಿಮಾನ ನಿಲ್ದಾಣದಲ್ಲಿ ಕೋಟು ತೊಟ್ಟರು
ಡಿಕೆ ಶಿವಕುಮಾರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದೆಷ್ಟು ಧಾವಂತದಲ್ಲಿದ್ದರೆಂದರೆ, ಕೋಟನ್ನು ಸಹ ವಿಮಾನ ನಿಲ್ದಾಣದಲ್ಲಿ ನಡೆಯುತ್ತ ತೊಟ್ಟರು ಮತ್ತು ಮಾಧ್ಯಮದವರು ಬೈಟ್ ಗಾಗಿ ಅವರ ಸಮೀಪಕ್ಕೆ ಹೋದಾಗ, ಈಗ ಬೇಡ ಸರಿಯಿರಿ ಎಂಬಂತೆ ಸನ್ನೆ ಮಾಡುತ್ತ ಸಾಗಿದರು. ಅವರು ದಹೆಲಿಗೆ ತೆರಳಿದ ಸಂಗತಿ ಸಿದ್ದರಾಮಯ್ಯನವರಿಗೆ ಗೊತ್ತಿದೆಯೇ?
ದೇವನಹಳ್ಳಿ (ಬೆಂಗಳೂರು): ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇವತ್ತು ಅವಸರದಲ್ಲಿ ದೆಹಲಿಗೆ ತೆರಳಿದರು. ಇವತ್ತು ಮಧ್ಯಾಹ್ನದವರೆಗೆ ಅವರು ದೆಹಲಿಗೆ ಹೊಗುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ, ಇದ್ದಕ್ಕಿದ್ದಂತೆ ಅವರು ಪ್ರಯಾಣ ಬೆಳಸಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹೈಕಮಾಂಡ್ ನಿಂದ ಅವರಿಗೆ ಬುಲಾವ್ ಬಂದಿರಲಕ್ಕೂ ಸಾಕು ಅಥವಾ ನಿನ್ನೆ ಮತ್ತು ಇವತ್ತು ನಡೆದ ಪಕ್ಷದ ವಿದ್ಯಮಾನಗಳು ಅವರು ದೆಹಲಿಗೆ ಹೋಗುವಂತೆ ಮಾಡಿದವೇ ಎಂಬ ಜಿಜ್ಞಾಸೆ ಹುಟ್ಟಿಕೊಂಡಿದೆ. ನಿನ್ನೆ ಪರಮೇಶ್ವರ್ ಅವರ ಚೇಂಬರ್ನಲ್ಲಿ ಒಂದಷ್ಟು ದಲಿತ ನಾಯಕರು ಸಭೆ ನಡೆಸಿದ್ದರು ಮತ್ತು ಇವತ್ತು ಬೆಳಗ್ಗೆ ಮೈಸೂರಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ 5-ವರ್ಷದ ಅವಧಿಗೆ ಸಿದ್ದರಾಮಯ್ಯನೇ ಮುಖ್ಯಮಂತ್ರಿ ಎಂದಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಂಗ್ರೆಸ್ನಿಂದ ಹೋದವರನ್ನು ಬಿಜೆಪಿ ಯೂಸ್ ಅಂಡ್ ಥ್ರೋ ರೀತಿಯಲ್ಲಿ ಟ್ರೀಟ್ ಮಾಡುತ್ತಿದೆ: ಡಿಕೆ ಶಿವಕುಮಾರ್