ಕಾಂಗ್ರೆಸ್ನಿಂದ ಹೋದವರನ್ನು ಬಿಜೆಪಿ ಯೂಸ್ ಅಂಡ್ ಥ್ರೋ ರೀತಿಯಲ್ಲಿ ಟ್ರೀಟ್ ಮಾಡುತ್ತಿದೆ: ಡಿಕೆ ಶಿವಕುಮಾರ್
ಕಾಂಗ್ರೆಸ್ನಿಂದ ಬಿಜೆಪಿಗೆ ಹೋದವರಿಗೆ ಯಾವ ಸ್ಥಾನಮಾನ ನೀಡಲಾಗುತ್ತಿದೆ ಅಂತ ಗೊತ್ತಿದೆ, ಅವರನ್ನು ಯೂಸ್ ಅಂಡ್ ಥ್ರೋ ಪದಾರ್ಥಗಳ ಹಾಗೆ ಬಳಸಿಕೊಳ್ಳಲಾಗುತ್ತಿದೆ, ಒಂದು ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಬೆಳೆದವರು ಮತ್ತೊಂದು ಪಕ್ಷದ ಸಿದ್ಧಾಂತಗಳಿಗೆ ಒಗ್ಗಿಕೊಳ್ಳುವುದು ಕಷ್ಟವಾಗುತ್ತದೆ, ಅವರ ಪಕ್ಷದಲ್ಲಿ ಏನಾದರೂ ಮಾಡಿಕೊಳ್ಳಲಿ ಅದು ಕಾಂಗ್ರೆಸ್ಗೆ ಸಂಬಂಧವಿಲ್ಲ ಎಂದು ಶಿವಕುಮಾರ್ ಹೇಳುತ್ತಾರೆ.
ಶಿವಮೊಗ್ಗ: ನಗರದಲ್ಲಿಂದು ಮಾಧ್ಯಮಗಳೊಡನೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟದ ಬಗ್ಗೆ ಮಾತಾಡುತ್ತ, ಕಾಂಗ್ರೆಸ್ ಪಕ್ಷವು ಬೇರೆ ಪಕ್ಷಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಮೇಲೆ ಅವಲಂಬನೆಗೊಂಡು ಸರ್ಕಾರ ನಡೆಸುತ್ತಿಲ್ಲ, ತಮ್ಮ ಪಕ್ಷದ ಗುರಿ ನಾಡಿನ ಜನತೆಯು ಸರ್ಕಾರದ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದಾಗಿದೆ ಎಂದು ಹೇಳಿದರು. ಬಿಜೆಪಿಯವರಿಗೆ ಜನ ಅಧಿಕಾರ ನೀಡಿದಾಗ ಅವರಲ್ಲಿ ಸರ್ಕಾರ ನಡೆಸುವ ಅನುಭವ ಇರಲಿಲ್ಲ, ಈಗ ವಿರೋಧ ಪಕ್ಷದಲ್ಲಿ ಕೂತ್ಕೊಂಡು ಕೆಲಸ ಮಾಡಿ ಅಂತ ಜನ ಹೇಳಿದ್ದಾರೆ, ಬಿಜೆಪಿಯಲ್ಲಿನ ಒಳಜಗಳಗಳು ಯಾವತ್ತೂ ಇದ್ದಿದ್ದೇ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೇಂದ್ರ ಬಜೆಟ್ನಲ್ಲಿ ಬೆಂಗಳೂರಿಗೆ ಆದ್ಯತೆ ನೀಡಿ: ನಿರ್ಮಲಾ ಸೀತಾರಾಮನ್ಗೆ ಡಿಕೆ ಶಿವಕುಮಾರ್ ಪತ್ರ