ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಹೇಳಿದ್ದೇ ಅಂತಿಮ, ಎಲ್ಲರೂ ಅದಕ್ಕೆ ಬದ್ಧರಾಗಿರುತ್ತೇವೆ: ಸಿದ್ದರಾಮಯ್ಯ

ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಹೇಳಿದ್ದೇ ಅಂತಿಮ, ಎಲ್ಲರೂ ಅದಕ್ಕೆ ಬದ್ಧರಾಗಿರುತ್ತೇವೆ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 31, 2025 | 2:24 PM

ನಿನ್ನೆ ದಲಿತ ಸಮುದಾಯದ ನಾಯಕರು ಒಂದೆಡೆ ಸೇರಿದ್ದ ಬಗ್ಗೆ ಮುಖ್ಯಮಂತ್ರಿಯವರ ಗಮನ ಸೆಳೆದಾಗ ಅದೇನೂ ವಿಷಯವೇ ಅಲ್ಲವೆನ್ನುವಂತೆ ಪ್ರತಿಕ್ರಿಯಿಸಿದರು. ಮೂರ್ನಾಲ್ಕು ಜನ ರಾಜಕಾರಣಿಗಳು ಒಂದೆಡೆ ಸೇರಿದಾಗ ಅವರು ರಾಜಕಾರವಲ್ಲದೆ ಮತ್ತೇನು ಮಾತಾಡಲು ಸಾಧ್ಯ? ಒಂದೆಡೆ ಸೇರುವುದು, ಜೊತೆಯಾಗಿ ಊಟ ಮಾಡುವುದು ಪಕ್ಷದ ಹಿತಾಸಕ್ತಿಗಳಿಗೆ ಧಕ್ಕೆಯುಂಟು ಮಾಡಲ್ಲ ಎಂದು ಸಿಎಂ ಹೇಳಿದರು.

ಮೈಸೂರು: ಪೂರ್ತಿ ಐದು ವರ್ಷಗಳ ಅವಧಿಗೂ ನೀವೇ ಸಿಎಂ ಅಂತಲ್ಲ ಸರ್ ಅಂದಾಗ ಸಿದ್ದರಾಮಯ್ಯ ಕೋಪಾವಿಷ್ಟರಾದರು. ಯಾರೀ ನಿಮಗೆ ಹೇಳಿದ್ದು? ಆ ಪ್ರಶ್ನೆಯನ್ನು ಕೇಳಬೇಡಿ ಅಂತ ಎಷ್ಟು ಸಲ ಹೇಳ್ಬೇಕು ಅಂತ ಸಿಟ್ಟಿನಲ್ಲಿ ಹೇಳಿದರು. ಸರ್ ನಿಮ್ಮ ಮಗ ಯತೀಂದ್ರ ಹೇಳಿದ್ದಾರೆ ಅಂದಾಗ ಸಿಎಂ ಸಾಹೇಬರ ಕೋಪ ಜರ್ರನೆ ಇಳಿಯಿತು. ಆಗ ಸಮಾಧಾನಚಿತ್ತರಾಗಿ ಮಾತಾಡಿದ ಅವರು, ನೋಡಿ ನಮ್ಮಲ್ಲಿ ಹೈಕಮಾಂಡ್ ಹೇಳಿದ್ದೇ ಅಂತಿಮ, ಅದು ತೆಗೆದುಕೊಳ್ಳುವ ನಿರ್ಣಯಗಳಿಗೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಡಾ ಹಗರಣ: ಇಡಿ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಹೆಸರು, ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ಹೀಗಿತ್ತು