ಕುಮಾರ್ ಬಂಗಾರಪ್ಪ ಮನೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಬಣ ನಾಯಕರ ಸಭೆ
ಕುಮಾರ್ ಬಂಗಾರಪ್ಪ ಮನೆಗೆ ಬಸನಗೌಡ ಯತ್ನಾಳ್ ಹೊಸ ಗೆಟಪ್ನಲ್ಲಿ ಆಗಮಿಸಿದ್ದು ಆಶ್ಚರ್ಯ ಮೂಡಿಸಿತು. ಸಾಮಾನ್ಯವಾಗಿ ಸಾಂಪ್ರದಾಯಿಕ ಉಡುಗೆ-ಜುಬ್ಬಾ ಇಲ್ಲವೇ ಕಮೀಜ್, ಬಿಳಿ ಪಾಯಿಜಾಮ ಮತ್ತು ವೇಸ್ ಕೋಟ್ ಧರಿಸುವ ಅವರು ಇವತ್ತು ಬಿಳಿ ಅಂಗಿ ಮತ್ತು ಕಡುನೀಲಿ ಬಣ್ಣದ ಟ್ರೌಸರ್ ಧರಿಸಿದ್ದರು! ಒಂದು ಪಕ್ಷ ಅವರು ರಾಜ್ಯಾಧ್ಯಕ್ಷನಾದರೆ ದಿರಿಸು ಕೂಡ ಬದಲಾಗಲಿದೆಯೇ?
ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಿಜೆಪಿ ಬಣದ ಮುಖಂಡರು ಇಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಬೆಂಗಳೂರು ನಿವಾಸದಲ್ಲಿ ಸಭೆ ಸೇರುವುದಕ್ಕೆ ವಕ್ಫ್ ಬೋರ್ಡ್ ವಿರುದ್ಧ ನಡೆಸಿದ, ನಡೆಸುತ್ತಿರುವ ಹೋರಾಟಕ್ಕೆ ಕೇಂದ್ರದ ನಾಯಕರು ಮತ್ತು ಜಂಟಿ ಸಂಸದೀಯ ಮಂಡಳಿಯಿಂದ ಸಿಕ್ಕಿರುವ ಮನ್ನಣೆ ಮತ್ತು ಪ್ರೋತ್ಸಾಹ ಮಾತ್ರ ಕಾರಣವಿರಲಾರದು. ರಾಜ್ಯ ಬಿಜೆಪಿ ಅಧ್ಯಕ್ಷನ ಸ್ಥಾನಕ್ಕೆ ಇಷ್ಟರಲ್ಲೇ ಚುನಾವಣೆ ನಡೆಯಲಿದೆ . ಸರ್ವಾನುಮತದ ಆಯ್ಕೆಗೆ ಯತ್ನಾಳ್ ಬಣ ಬಿಡಲ್ಲ ಅಂತ ಎಲ್ಲರಿಗೂ ಗೊತ್ತು, ಚುನಾವಣೆ ನಡೆಸಲು ಅವರು ತಾಕೀತು ಮಾಡಲಿದ್ದ್ದಾರೆ. ಇವರ ಬಣದಿಂದ ಯತ್ನಾಳ್ ಅವರೇ ಅಭ್ಯರ್ಥಿಯಾಗೋದು ಎಂಬ ಮಾತುಗಳು ಕೇಳಿಬರುತ್ತಿವೆ. ಈ ವಿಷಯವೂ ಸಭೆಯಲ್ಲಿ ಚರ್ಚೆಯಾಗಿರಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸುಧಾಕರ್ ಬಗ್ಗೆ ಮಾತಾಡಲು ಪ್ರೀತಂ ಗೌಡ ಯಾವ ದೊಣ್ಣೆ ನಾಯಕ ಎಂಬರ್ಥದಲ್ಲಿ ಮಾತಾಡಿದ ಬಸನಗೌಡ ಯತ್ನಾಳ್