ಸುಧಾಕರ್ ಬಗ್ಗೆ ಮಾತಾಡಲು ಪ್ರೀತಂ ಗೌಡ ಯಾವ ದೊಣ್ಣೆ ನಾಯಕ ಎಂಬರ್ಥದಲ್ಲಿ ಮಾತಾಡಿದ ಬಸನಗೌಡ ಯತ್ನಾಳ್

ಸುಧಾಕರ್ ಬಗ್ಗೆ ಮಾತಾಡಲು ಪ್ರೀತಂ ಗೌಡ ಯಾವ ದೊಣ್ಣೆ ನಾಯಕ ಎಂಬರ್ಥದಲ್ಲಿ ಮಾತಾಡಿದ ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 30, 2025 | 2:41 PM

ಸುಧಾಕರ್ ಬಿಜೆಪಿಗೆ ಬರದೇ ಹೋಗಿದ್ದರೆ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ರಾಜ್ಯದ ಕಡುಭ್ರಷ್ಟ ಸಿಎಂ ಅನಿಸಿಕೊಳ್ಳುತ್ತಿರಲಿಲ್ಲ ಮತ್ತು ವಿಜಯೇಂದ್ರಗೆ ಹಣದ ದುರಹಂಕಾರ ಬರುತ್ತಿರಲಿಲ್ಲ, ಅದರೆ ವಿಪರ್ಯಾಸವೆಂದರೆ ಇಂಥ ಭ್ರಷ್ಟರು ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿಂದ ಮೈಸೂರಿಗೆ ಪಾದಯಾತ್ರೆ ಮಾಡಿದ್ದು ಎಂದು ಯತ್ನಾಳ್ ಹೇಳಿದರು.

ಬೆಂಗಳೂರು: ಬಿವೈ ವಿಜಯೇಂದ್ರ ವಿರುದ್ಧ ನಿನ್ನೆ ಡಾ ಕೆ ಸುಧಾಕರ್ ಕೂಗಾಡಿದಕ್ಕೆ ಬಿಜೆಪಿ ನಾಯಕ ಪ್ರೀತಂ ಜೆ ಗೌಡ ಪ್ರತಿಕ್ರಿಯೆ ನೀಡಿ ಸಂಸದರನ್ನು ಎಚ್ಚರಿಸಿರುವುದು ರಾಜ್ಯಾಧ್ಯಕ್ಷನ ವಿರುದ್ಧ ಒಂದು ವರ್ಷದ ಹಿಂದೆಯೇ ರಣಕಹಳೆ ಊದಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸರಿ ಕಂಡಿಲ್ಲ. ನಗರದಲ್ಲಿ ಇಂದು ಮಾಧ್ಯಮದವರು ವಿಷಯವನ್ನು ಪ್ರಸ್ತಾಪಿಸಿದಾಗ, ಪ್ರೀತಂ ಗೌಡ ಯಾವ ಮಹಾನಾಯಕ ಎಂವರ್ಥದಲ್ಲಿ ಯತ್ನಾಳ್ ಮಾತಾಡಿದರು. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಬಿಡಬೇಡ ಅಂತ ಹೇಳಿದ್ದರು, ಅವರ ಮಾತು ಕೇಳದೆ ಬಿಜೆಪಿ ಸೇರಿ ತಪ್ಪು ಮಾಡಿದೆ ಅಂತ ಸುಧಾಕರ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್ ಮನಸ್ಸಿಗೆ ನೋವಾದಾಗ ಅಂಥ ಮಾತುಗಳು ನೆನಪಾಗುತ್ತವೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬಿಜೆಪಿ ಶಿಸ್ತು ಸಮಿತಿ ನೋಟಿಸ್: ಬಸನಗೌಡ ಪಾಟೀಲ್ ಯತ್ನಾಳ್ ಮೊದಲ ಪ್ರತಿಕ್ರಿಯೆ