ಐಶ್ವರ್ಯಾ ಎಂದಿದ್ದ ಹೆಸರನ್ನು ಮೋಕ್ಷಿತಾ ಎಂದು ಬದಲಿಸಿಕೊಂಡಿದ್ದೇಕೆ?

ಐಶ್ವರ್ಯಾ ಎಂದಿದ್ದ ಹೆಸರನ್ನು ಮೋಕ್ಷಿತಾ ಎಂದು ಬದಲಿಸಿಕೊಂಡಿದ್ದೇಕೆ?

ಮಂಜುನಾಥ ಸಿ.
|

Updated on: Jan 30, 2025 | 4:00 PM

Bigg Boss Kannada 11: ಬಿಗ್​ಬಾಸ್ ಕನ್ನಡ ಸೀಸನ್ 11 ಮುಗಿದಿದ್ದು ಹನುಮಂತ ಗೆದ್ದಿದ್ದಾರೆ. ಗೆಲ್ಲುವ ಸ್ಪರ್ಧಿಗಳಲ್ಲಿ ಮೋಕ್ಷಿತಾ ಸಹ ಒಬ್ಬರಾಗಿದ್ದರು, ಆದರೆ ಅದೃಷ್ಟ ಅವರ ಪಾಲಿಗೆ ಇರಲಿಲ್ಲ. ಮೋಕ್ಷಿತಾರ ಮೂಲ ಹೆಸರು ಐಶ್ವರ್ಯಾ ಪೈ. ಆದರೆ ಅವರೇಕೆ ಐಶ್ವರ್ಯಾ ಹೆಸರಿನ ಬದಲು ಮೋಕ್ಷಿತಾ ಎಂದು ಬದಲಾಯಿಸಿಕೊಂಡರು?

ಬಿಗ್​ಬಾಸ್ ಕನ್ನಡ ಸೀಸನ್ 11 ಮುಗಿದಿದ್ದು ಹನುಮಂತ ಗೆದ್ದಿದ್ದಾರೆ. ಗೆಲ್ಲುವ ಸ್ಪರ್ಧಿಗಳಲ್ಲಿ ಮೋಕ್ಷಿತಾ ಸಹ ಒಬ್ಬರಾಗಿದ್ದರು, ಆದರೆ ಅದೃಷ್ಟ ಅವರ ಪಾಲಿಗೆ ಇರಲಿಲ್ಲ. ಫಿನಾಲೆ ದಿನ ಅವರು ಶೋನಿಂದ ಹೊರ ನಡೆದರು. ಆದರೆ ಮೋಕ್ಷಿತಾ, ಈ ಬಿಗ್​ಬಾಸ್​ನ ಬಲು ಗಟ್ಟಿ ಸ್ಪರ್ಧಿಯಾಗಿ ಕಾಣಿಸಿಕೊಂಡರು. ಮೊದಲಿನಲ್ಲಿ ಕೆಲವರೊಟ್ಟಿಗೆ ಗೆಳೆತನ ಇದ್ದರೂ ಸಹ ಆ ನಂತರ ತಮ್ಮ ಆಟ ತಾವು ಆಡುತ್ತಾ, ಟೀಕೆಗಳನ್ನು, ನಿಂದನೆಗಳನ್ನು ಎದುರಿಸಿ ಫಿನಾಲೆ ವರೆಗೆ ಬಂದರು. ಮೋಕ್ಷಿತಾ ಬಗ್ಗೆ ಹೊರಗೆ ಹಲವು ಸುದ್ದಿಗಳು ಹರಿದಾಡುತ್ತಿದ್ದವು. ಅವರ ಪೊಲೀಸ್ ಕೇಸ್ ಸಹ ಅದರಲ್ಲಿ ಒಂದು. ಅಂದಹಾಗೆ ಮೋಕ್ಷಿತಾರ ಮೂಲ ಹೆಸರು ಐಶ್ವರ್ಯಾ ಪೈ. ಆದರೆ ಅವರೇಕೆ ಐಶ್ವರ್ಯಾ ಹೆಸರಿನ ಬದಲು ಮೋಕ್ಷಿತಾ ಎಂದು ಬದಲಾಯಿಸಿಕೊಂಡರು? ಅವರೇ ಉತ್ತರ ಕೊಟ್ಟಿದ್ದಾರೆ ಕೇಳಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ