ಕಲಿಯುಗದ ಶ್ರವಣಕುಮಾರ: ತಾಯಿಯ ಕೂರಿಸಿ ಎತ್ತಿನ ಗಾಡಿ ಎಳೆದುಕೊಂಡು ಕುಂಭಮೇಳಕ್ಕೆ ಬಂದ ಮಗ

ಕಲಿಯುಗದ ಶ್ರವಣಕುಮಾರ: ತಾಯಿಯ ಕೂರಿಸಿ ಎತ್ತಿನ ಗಾಡಿ ಎಳೆದುಕೊಂಡು ಕುಂಭಮೇಳಕ್ಕೆ ಬಂದ ಮಗ

ನಯನಾ ರಾಜೀವ್
|

Updated on:Jan 30, 2025 | 2:18 PM

ಮಹಾಕುಂಭ ಮೇಳಕ್ಕೆ ಸಂಬಂಧಿಸಿದ ಹಲವು ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಟ್ರೆಂಡ್ ಆಗುತ್ತಲೇ ಇದೆ. ಹಾಗೆಯೇ ಇಲ್ಲೊಬ್ಬ ಕಲಿಯುಗದ ಶ್ರವಣಕುಮಾರರೊಬ್ಬರ ವಿಡಿಯೋ ಕೂಡ ಹರಿದಾಡಿದೆ. ಇವರು 92 ವರ್ಷ ವಯಸ್ಸಿನ ವೃದ್ಧ ತಾಯಿಯನ್ನು ಮರದ ಗಾಡಿಯಲ್ಲಿ ಕೂರಿಸಿ ತಾವೇ ಸ್ವತಃ ಗಾಡಿಯನ್ನು ಎಳೆದುಕೊಂಡು ಬಂದಿದ್ದಾರೆ.

ಪ್ರೀತಿ, ಶ್ರದ್ಧೆಯೊಂದಿದ್ದರೆ ಅಸಾಧ್ಯವಾದದ್ದು ಏನೂ ಇಲ್ಲ ಎಂಬುದನ್ನು ಸುದೇಶ್ ಪಾಲ್ ತೋರಿಸಿದ್ದಾರೆ.  ಮಹಾಕುಂಭ ಮೇಳಕ್ಕೆ ಸಂಬಂಧಿಸಿದ ಹಲವು ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಟ್ರೆಂಡ್ ಆಗುತ್ತಲೇ ಇದೆ. ಹಾಗೆಯೇ ಇಲ್ಲೊಬ್ಬ ಕಲಿಯುಗದ ಶ್ರವಣಕುಮಾರರೊಬ್ಬರ ವಿಡಿಯೋ ಕೂಡ ಹರಿದಾಡಿದೆ. ಇವರು 92 ವರ್ಷ ವಯಸ್ಸಿನ ವೃದ್ಧ ತಾಯಿಯನ್ನು ಮರದ ಗಾಡಿಯಲ್ಲಿ ಕೂರಿಸಿ ತಾವೇ ಸ್ವತಃ ಗಾಡಿಯನ್ನು ಎಳೆದುಕೊಂಡು ಬಂದಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಎತ್ತಿನ ಗಾಡಿಯನ್ನು ಅವರೇ ಎಳೆಯುತ್ತಿದ್ದುದು ವಿಶೇಷವಾಗಿತ್ತು. ಅವರೊಂದಿಗೆ ಓರ್ವ ಮಹಿಳೆ ಕೂಡ ಇದ್ದರು. ಇನ್ನು 13 ದಿನಗಳಲ್ಲಿ ಅವರು ಪ್ರಯಾಗ್​ರಾಜ್ ತಲುಪಲಿದ್ದಾರೆ. ಚೌಧರಿ ಸುದೇಶ್ ಪಾಲ್ ಮಲಿಕ್ ಅವರಿಗೆ 25 ವರ್ಷಗಳ ಹಿಂದೆ ಮೊಣಕಾಲು ಸಮಸ್ಯೆ ಇತ್ತು, ಇದರಿಂದಾಗಿ ಅವರು ನಡೆಯಲು ಸಹ ಕಷ್ಟಪಡುತ್ತಿದ್ದರು.

ತಾಯಿಯ ಆಶೀರ್ವಾದದಿಂದ ಅವರು ಚೇತರಿಸಿಕೊಳ್ಳಲು ಸಾಧ್ಯವಾಯಿತು ಎಂಬುದು ಅವರ ನಂಬಿಕೆ. ಇದಿಗ ತಾಯಿಗೆ ಕೃತಜ್ಞತೆ ಸಲ್ಲಿಸಲು ಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡಲು ನಿರ್ಧರಿಸಿದ್ದಾರೆ. ಮಲಿಕ್ ಮುಜಾಫರ್‌ನಗರದಿಂದ ಪ್ರಯಾಗ್‌ರಾಜ್ ತಲುಪಲು 13 ದಿನಗಳನ್ನು ತೆಗೆದುಕೊಳ್ಳುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published on: Jan 30, 2025 02:17 PM