ಬಿಗ್ ಬಾಸ್ ವಿನ್ನರ್ ಹನುಮಂತಗೆ ಹುಟ್ಟೂರಲ್ಲಿ ಭರ್ಜರಿ ಸ್ವಾಗತ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಬಂದವರು ಗೆದ್ದಿದ್ದೇ ಇಲ್ಲ. ಆದರೆ, ಹನುಮಂತ ಅವರು ಈ ರೀತಿಯ ಸಾಧನೆ ಮಾಡಿದ್ದರು. ಅವರು ಗೆದ್ದು ಇತಿಹಾಸ ಬರೆದಿದ್ದಾರೆ. ಅವರು ಈಗ ಹುಟ್ಟೂರಿಗೆ ಬಂದಿದ್ದು ಅದ್ದೂರಿ ಸ್ವಾಗತ ಪಡೆದಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಹನುಮಂತ ಅವರು ಹುಟ್ಟಿದ್ದು ಹಾವೇರಿಯ ಚಿಲ್ಲೂರಬಡ್ನಿಯಲ್ಲಿ. ಅವರು ಕಪ್ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಊರಿಗೆ ಮರಳಿದ್ದಾರೆ. ಸವಣೂರು ಪಟ್ಟಣದಿಂದ ಊರಿನವರೆಗೆ 10 ಕಿಮೀ ರೋಡ್ ಶೋ ಮಾಡಿದ್ದಾರೆ. ಅವರು ರೋಡ್ಶೋ ವೇಳೆ ಸನ್ ರೂಫ್ ಮೂಲಕ ಹೊರ ಬಂದು ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ಹಳ್ಳಿಗರ ಪ್ರೀತಿ ನೋಡಿ ಹನುಮಂತ ಖುಷಿಪಟ್ಟರೆ, ಬಿಗ್ ಬಾಸ್ ವಿನ್ನರ್ನ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.