AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಬಜೆಟ್​​ನಲ್ಲಿ ಬೆಂಗಳೂರಿಗೆ ಆದ್ಯತೆ ನೀಡಿ: ನಿರ್ಮಲಾ ಸೀತಾರಾಮನ್​​ಗೆ ಡಿಕೆ ಶಿವಕುಮಾರ್​​ ಪತ್ರ

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದು, ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ 70,000 ಕೋಟಿ ರೂ ಅನುದಾನವನ್ನು ಕೇಂದ್ರ ಬಜೆಟ್‌ನಲ್ಲಿ ಒದಗಿಸುವಂತೆ ಮನವಿ ಮಾಡಿದ್ದಾರೆ. ಉತ್ತರ-ದಕ್ಷಿಣ ಕಾರಿಡಾರ್, ಪೂರ್ವ-ಪಶ್ಚಿಮ ಕಾರಿಡಾರ್, ರಿಂಗ್ ರಸ್ತೆ, ಫ್ಲೈಓವರ್‌ಗಳು ಮತ್ತು ರಾಜಕಾಲುವೆ ಅಭಿವೃದ್ಧಿಗೆ ಅನುದಾನದ ಅಗತ್ಯವನ್ನು ಪತ್ರದಲ್ಲಿ ಒತ್ತಿ ಹೇಳಿದ್ದಾರೆ.

ಕೇಂದ್ರ ಬಜೆಟ್​​ನಲ್ಲಿ ಬೆಂಗಳೂರಿಗೆ ಆದ್ಯತೆ ನೀಡಿ: ನಿರ್ಮಲಾ ಸೀತಾರಾಮನ್​​ಗೆ ಡಿಕೆ ಶಿವಕುಮಾರ್​​ ಪತ್ರ
ಕೇಂದ್ರ ಬಜೆಟ್​​ನಲ್ಲಿ ಬೆಂಗಳೂರಿಗೆ ಆದ್ಯತೆ ನೀಡಿ: ನಿರ್ಮಲಾ ಸೀತಾರಾಮನ್​​ಗೆ ಡಿಕೆ ಶಿವಕುಮಾರ್​​ ಪತ್ರ
Anil Kalkere
| Edited By: |

Updated on: Jan 25, 2025 | 3:42 PM

Share

ಬೆಂಗಳೂರು, ಜನವರಿ 25: 2025ರ ಕೇಂದ್ರ ಬಜೆಟ್ ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಅವರು ಮಂಡಿಸಲಿದ್ದಾರೆ. ಹೀಗಾಗಿ ಇದಕ್ಕೂ ಮುಂಚೆ ಕೇಂದ್ರ ಬಜೆಟ್​​ನಲ್ಲಿ ಬೆಂಗಳೂರಿಗೆ ಹೆಚ್ಚಿನ ಅನುದಾನ ನೀಡುವಂತೆ ಸಚಿವೆ ನಿರ್ಮಲಾ ಸೀತಾರಾಮನ್​ಗೆ ಡಿಸಿಎಂ ಡಿಕೆ ಶಿವಕುಮಾರ್​​ ಪತ್ರ ಬರೆದಿದ್ದಾರೆ.

ಬೆಂಗಳೂರು ಉತ್ತರ- ದಕ್ಷಿಣ ಕಾರಿಡಾರ್​ಗೆ 15 ಸಾವಿರ ಕೋಟಿ ರೂ. ಪೂರ್ವದಿಂದ ಪಶ್ಚಿಮ ಕಾರಿಡಾರ್​​ಗೆ 25 ಸಾವಿರ ಕೋಟಿ ರೂ. ರಿಂಗ್ ರಸ್ತೆ ಮೇಲ್ದರ್ಜೆಗೆ 8,916 ಕೋಟಿ ರೂ. ಗಳ ಅಗತ್ಯ ಇದೆ. ಬೆಂಗಳೂರಿನ ಪ್ರಮುಖ 17 ಫ್ಲೈ ಓವರ್​ಗೆ 12 ಸಾವಿರ ಕೋಟಿ ರೂ ಅಗತ್ಯವಿದೆ ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಅರಮನೆ ಮೈದಾನ ಬಳಕೆಗೆ ಸರ್ಕಾರ ಸುಗ್ರೀವಾಜ್ಞೆ ಅಸ್ತ್ರ: ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು

ರಾಜ ಕಾಲುವೆ ನಿರ್ಣಹಣೆ, ವಿಸ್ತರಣೆಗೆ 3 ಸಾವಿರ ಕೋಟಿ ರೂ. ಅಗತ್ಯ ಇದೆ. ಬೆಂಗಳೂರಿನಲ್ಲಿ ಸದ್ಯ ಒಂದುವರೆ ಕೋಟಿ ಜನಸಂಖ್ಯೆ ಇದೆ. ಬಿಸಿನೆಸ್ ಕಾರಿಡಾರ್​ಗೆ 27 ಸಾವಿರ ಕೋಟಿ ಅನುದಾನ ಅಗತ್ಯವಿದೆ. ಹೀಗಾಗಿ ಈ ಬಾರಿಯ ಬಜೆಟ್​ನಲ್ಲಿ ಬೆಂಗಳೂರಿಗೆ ಆದ್ಯತೆ ನೀಡಿ ಎಂದು ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್‌ ಹಾವಳಿ: ಸಿಎಂ ಸಿದ್ದರಾಮಯ್ಯ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ಏನೇನು ಚರ್ಚೆಯಾಯ್ತ? ಇಲ್ಲಿದೆ ಮಾಹಿತಿ

ಇನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ರಾಜ್ಯಗಳ ಪಾಲಿನ ತೆರಿಗೆ ಹಣವನ್ನ ಹಂಚಿಕೆ ಮಾಡಿತ್ತು. ಕೇಂದ್ರ ಹಣಕಾಸು ಆಯೋಗದ ಶಿಫಾರಸ್ಸಿನ ಅನುಗುಣವಾಗಿ ರಾಜ್ಯಗಳಿಗೆ ಒಟ್ಟು 1 ಲಕ್ಷ 73 ಸಾವಿರ ಕೋಟಿ ರೂಪಾಯಿ ತೆರಿಗೆ ಹಣ ಹಂಚಿದೆ. ದೇಶದಲ್ಲಿ ಅತೀ ಹೆಚ್ಚು ಹೆಚ್ಚು ತೆರಿಗೆ ಕಟ್ಟುತ್ತಿರುವುದು ಕರ್ನಾಟಕ. ಆದರೆ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಆಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಾ ಬರುತ್ತಿದ್ದಾರೆ. ನಮ್ಮ ತೆರಿಗೆ ನಮ್ಮ ಹಕ್ಕು. ಬಿಜೆಪಿಯ ಇಷ್ಟೊಂದು ಸಂಸದರಿದರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ನೋಡುತ್ತಾ ಏಕೆ ಮೌನವಾಗಿದ್ದಾರೆ ಅಂತಾ ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ ಹೊರ ಹಾಕಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದುಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.