ಕರ್ನಾಟಕದ 21 ಜನ ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ
ಗಣರಾಜ್ಯೋತ್ಸವದ ಪ್ರಯುಕ್ತ, ಕರ್ನಾಟಕದ 21 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ರಾಷ್ಟ್ರಪತಿ ಪದಕಗಳಿಗೆ ಭಾಜನರಾಗಿದ್ದಾರೆ. ಇಬ್ಬರಿಗೆ ವಿಶಿಷ್ಟ ಸೇವಾ ಪದಕ, ಉಳಿದವರಿಗೆ ಶ್ಲಾಘನೀಯ ಸೇವಾ ಪದಕ ದೊರೆತಿದೆ. ಈ ಪುರಸ್ಕಾರವು ಅವರ ಅತ್ಯುತ್ತಮ ಸೇವೆಯನ್ನು ಗುರುತಿಸುತ್ತದೆ. ಇದು ರಾಜ್ಯದ ಪೊಲೀಸ್ ಇಲಾಖೆಗೆ ಹೆಮ್ಮೆಯ ಕ್ಷಣ.
ಬೆಂಗಳೂರು, ಜನವರಿ 25: ಗಣರಾಜ್ಯೋತ್ಸವ (Republic Day) ದಿನಾಚರಣೆ ಹಿನ್ನೆಲೆಯಲ್ಲಿ ಕೊಡಲಾಗುವ ರಾಷ್ಟ್ರಪತಿಗಳ ಪದಕ ಗೌರವಕ್ಕೆ ಕರ್ನಾಟಕದ 21 ಜನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಜನರಾಗಿದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಮತ್ತು 19 ಜನ ಪೊಲೀಸರು ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕಕ್ಕೆ ಪಾತ್ರರಾಗಿದ್ದಾರೆ.
ವಿಶಿಷ್ಟ ಸೇವಾ ಪದಕ ಪುರಸ್ಕೃತರು
- ಬಸವರಾಜು ಶರಣಪ್ಪ ಜಿಳ್ಳೆ- ಡಿಐಜಿಪಿ, ಕೆಎಸ್ಆರ್ಪಿ, ಬೆಂಗಳೂರು
- ಹಂಜಾ ಹುಸೇನ್, ಕಮಾಂಡೆಂಟ್, ಕೆಎಸ್ಆರ್ಪಿ, ತುಮಕೂರು
ಶ್ಲಾಘನೀಯ ಸೇವಾ ಪದಕ ಪುರಸ್ಕೃತರು
- ರೇಣುಕಾ ಕೆ ಸುಕುಮಾರ, ಡಿಐಜಿಪಿ, ಡಿಸಿಆರ್ಇ, ಬೆಂಗಳೂರು
- ಸಂಜೀವ ಎಂ ಪಾಟೀಲ್, ಎಐಜಿಪಿ, ಜನರಲ್, ಪೊಲೀಸ್ ಪ್ರಧಾನ ಕೇಂದ್ರ ಕಚೇರಿ
- ಬಿಎಂ ಪ್ರಸಾದ್, ಕಮಾಂಡೆಂಟ್, ಐಆರ್ಬಿ, ಕೊಪ್ಪಳ
- ಗೋಪಾಲ್ ಡಿ ಜೋಗಿನ್, ಎಸಿಪಿ, ಸಿಸಿಬಿ ಬೆಂಗಳೂರು
- ವೀರೆಂದ್ರ ನಾಯಕ್ ಎನ್, ಡೆಪ್ಯೂಟಿ ಕಮಾಂಡೆಂಟ್, ಕೆಎಸ್ಆರ್ಪಿ, ಬೆಂಗಳೂರು
- ಗೋಪಾಲಕೃಷ್ಣ ಬಿ ಗೌಡರ್, ಡಿವೈಎಸ್ಪಿ, ಚಿಕ್ಕೋಡಿ ಉಪ ವಿಭಾಗ, ಬೆಳಗಾವಿ
- ಹೆಚ್. ಗುರುಬಸವರಾಜ, ಪೊಲೀಸ್ ಇನ್ಸ್ಪೆಕ್ಟರ್, ಲೋಕಾಯುಕ್ತ, ಚಿತ್ರದುರ್ಗ
- ಜಯರಾಜ್ ಹೆಚ್ ಪೊಲೀಸ್ ಇನ್ಸ್ಪೆಕ್ಟರ್, ಗೋವಿಂದಪುರ ಪೊಲೀಸ್ ಠಾಣ, ಬೆಂಗಳೂರು
- ಪ್ರದೀಪ್ ಬಿ ಆರ್, ಸರ್ಕಲ್ ಇನ್ಸ್ಪೆಕ್ಟರ್ ಆಫ್ ಪೊಲೀಸ್, ಹೊಳೆನರಸಿಪುರ ವೃತ್ತ, ಹಾಸನ
- ಮೊಹಮದ್ ಮುಕರಮ್, ಪೊಲೀಸ್ ಇನ್ಸ್ಪೆಕ್ಟರ್ ಸಿಸಿಬಿ, ಬೆಂಗಳೂರು
- ವಸಂತ್ ಕುಮಾರ್ ಎಂಎ, ಪೊಲೀಸ್ ಇನ್ಸ್ಪೆಕ್ಟರ್, ಬ್ಯುರೋ ಆಫ್ ಇಮಿಗ್ರೇಷನ್
- ಮಂಜುನಾಥ ವಿ.ಜಿ, ಎಎಸ್ಐ ಸಿಐಡಿ, ಬೆಂಗಳೂರು
- ಅಲ್ತಾಪ್ ಹುಸೇನ್ ಎನ್ ದಖನಿ, ಎಎಸ್ಐ, ಬೆಂಗಳೂರು
- ಬಲೇಂದ್ರನ್ ಸ್ಟೇಷನ್ ಆರ್ಹೆಚ್ಸಿ, ಕೆಎಸ್ಆರ್ಪಿ, ಬೆಂಗಳೂರು
- ಅರುಣಕುಮಾರ, ಸಿಹೆಚ್ಸಿ, ಡಿಐಜಿಪಿ ಕಚೇರಿ, ಕಲಬುರಗಿ
- ನಯಾಜ್ ಅಂಜುಮ್ ಎಹೆಚ್ಸಿ ಡಿಪಿಓ, ಚಿಕ್ಕಮಗಳೂರು
- ಶ್ರೀನಿವಾಸ ಎಂ, ಸಿಹೆಚ್ಸಿ, ಡಿಸಿಪಿ ಪಶ್ಚಿಮ ವಿಭಾಗ ಕಚೇರಿ, ಬೆಂಗಳೂರು
- ಅಶ್ರಪ್ ಪಿ. ಎಂ, ಹಿರಿಯ ಗುಪ್ತ ಸಹಾಯಕರು, ರಾಜ್ಯ ಗುಪ್ತವಾರ್ತೆ, ಬೆಂಗಳೂರು
- ಶಿವಾನಂದ ಬಿ, ಸಿಹೆಚ್ಸಿ ಕುಂದಾಪುರ ಪೊಲೀಸ್ ಠಾಣೆ, ಉಡುಪಿ
ಎಲ್ಲ ರಾಜ್ಯಗಳ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ಮತ್ತು ಇತರೆ ಸೇವೆಗಳ ಒಟ್ಟು 942 ಸಿಬ್ಬಂದಿಯು 2025ರ ಗಣರಾಜ್ಯೋತ್ಸವ ಅಂಗವಾಗಿ ಕೊಡುವ ಶೌರ್ಯ ಮತ್ತು ಸೇವಾ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ