ನನ್ನನ್ನು ಕೊಲೆ ಮಾಡುವ ಉದ್ದೇಶವಿದೆ: ಜೆಡಿಎಸ್​ ಶಾಸಕಿ

ನನ್ನನ್ನು ಕೊಲೆ ಮಾಡುವ ಉದ್ದೇಶವಿದೆ: ಜೆಡಿಎಸ್​ ಶಾಸಕಿ

ವಿವೇಕ ಬಿರಾದಾರ
|

Updated on:Jan 25, 2025 | 1:15 PM

ದೇವದುರ್ಗದ ಜೆಡಿಎಸ್ ಶಾಸಕಿ ಕರೆಮ್ಮ ಜಿ. ನಾಯಕ ಅವರ ಮನೆಗೆ ಅಪರಿಚಿತರು ನುಗ್ಗಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಶಾಸಕಿಯವರು ಇದೊಂದು ಹತ್ಯಾ ಯತ್ನ ಎಂದು ಆರೋಪಿಸಿದ್ದು, ಸಚಿವ ಶರಣಪ್ರಕಾಶ್ ಪಾಟೀಲ್ ಅವರ ನೇತೃತ್ವದ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಪರಿಚಿತರು ಕಿಟಕಿಯ ಮೂಲಕ ಯಾವುದೋ ಪುಡಿಯನ್ನು ಎಸೆದಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಯಚೂರು, ಜನವರಿ 25: ಅಪರಿಚಿತರು ಮನೆಗೆ ನುಗ್ಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ಜಿ.ನಾಯಕ ಮಾತನಾಡಿ, ಇದರ ಹಿಂದೆ ನನ್ನನ್ನು ಕೊಲೆ ಮಾಡುವ ಉದ್ದೇಶವಿದೆ. ಸಚಿವ ಶರಣಪ್ರಕಾಶ್​ ಪಾಟೀಲ್ ನೇತೃತ್ವದ ಸಭೆಯಲ್ಲೂ ಈ ವಿಚಾರ ಪ್ರಸ್ತಾಪ ಮಾಡಿದ್ದೇನೆ. ಮೂವರು ಅಪರಿಚಿತರು ಕ್ಯಾಪ್ ಧರಿಸಿ ನನ್ನ ಮನೆಗೆ ನುಗ್ಗಿದ್ದರು. ಬೆಳಗ್ಗೆ 6 ಗಂಟೆಯಾದರೂ ನನಗೆ ಎಚ್ಚರವಾಗಿರಲಿಲ್ಲ. ಕಿಟಕಿ ಮೂಲಕ ನನ್ನ ಮೇಲೆ ಯಾವುದೋ ಪುಡಿ ಎರಚಿದ್ದಾರೆ. ಇದರಿಂದ ತಲೆ ನೋವು ಹೆಚ್ಚಾಗಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದ್ದೆ. ಪರೀಕ್ಷೆ ನಡೆಸಿದ ವೈದ್ಯರು ಲೋ ಬಿಪಿ ಆಗಿದೆ ಎಂದು ಹೇಳಿದ್ದರು. ನನ್ನ ಬಳಿ ಯಾವುದೇ ಹಣ ಇಲ್ಲ, ಅವರು ಕಳ್ಳತನಕ್ಕೆ ಬಂದಂಗಿಲ್ಲ. ನನ್ನ ಜೀವವನ್ನು ತೆಗೆಯುವ ಉದ್ದೇಶದಿಂದ ಬಂದಿರುವ ಸಾಧ್ಯತೆ ಇದೆ ಎಂದರು.

Published on: Jan 25, 2025 01:15 PM