ವಾವ್ಹ್… ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಪರಸ್
Ranji Trophy 2025: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು 120 ರನ್ಗಳಿಗೆ ಆಲೌಟ್ ಆದರೆ, ಜಮ್ಮು-ಕಾಶ್ಮೀರ ತಂಡ ಮೊದಲ ಇನಿಂಗ್ಸ್ನಲ್ಲಿ 206 ರನ್ಗಳಿಸಿತು. 86 ರನ್ಗಳ ಹಿನ್ನೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಮುಂಬೈ ತಂಡವು 290 ರನ್ಗಳಿಗೆ ಆಲೌಟ್ ಆಗಿದೆ. ಅದರಂತೆ ಇದೀಗ ದ್ವಿತೀಯ ಇನಿಂಗ್ಸ್ನಲ್ಲಿ ಜಮ್ಮು-ಕಾಶ್ಮೀರ ತಂಡ 205 ರನ್ಗಳನ್ನು ಕಲೆಹಾಕಬೇಕಿದೆ.
ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಮುಂಬೈ ವಿರುದ್ಧದ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡದ ನಾಯಕ ಪರಸ್ ಡೋಗ್ರಾ ಅದ್ಭುತ ಕ್ಯಾಚ್ ಹಿಡಿದು ಮಿಂಚಿದ್ದಾರೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ನ 27ನೇ ಓವರ್ನ ಮೊದಲ ಎಸೆತದಲ್ಲಿ ಅಜಿಂಕ್ಯ ರಹಾನೆ ಎಕ್ಸ್ಟ್ರಾ ಕವರ್ನತ್ತ ಬಾರಿಸಿದ್ದರು.
ಆದರೆ ಗಾಳಿಯಲ್ಲಿ ಚಿಮ್ಮಿದ ಚೆಂಡನ್ನು ಗುರುತಿಸಿದ ಪರಸ್ ಡೋಗ್ರಾ ಅದ್ಭುತ ಡೈವಿಂಗ್ನೊಂದಿಗೆ ಒಂದೇ ಕೈಯಲ್ಲಿ ಕ್ಯಾಚ್ ಹಿಡಿದರು. ಇದೀಗ ಈ ಅತ್ಯದ್ಭುತ ಫೀಲ್ಡಿಂಗ್ ವಿಡಿಯೋ ಭಾರೀ ವೈರಲ್ ಆಗಿದ್ದು, ಜಮ್ಮು-ಕಾಶ್ಮೀರ ತಂಡದ ನಾಯಕನ ಆಟಕ್ಕೆ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು 120 ರನ್ಗಳಿಗೆ ಆಲೌಟ್ ಆದರೆ, ಜಮ್ಮು-ಕಾಶ್ಮೀರ ತಂಡ ಮೊದಲ ಇನಿಂಗ್ಸ್ನಲ್ಲಿ 206 ರನ್ಗಳಿಸಿತು. 86 ರನ್ಗಳ ಹಿನ್ನೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಮುಂಬೈ ತಂಡವು 290 ರನ್ಗಳಿಗೆ ಆಲೌಟ್ ಆಗಿದೆ.
ಈ ಪಂದ್ಯದ ಕೊನೆಯ ಇನಿಂಗ್ಸ್ನಲ್ಲಿ ಜಮ್ಮು-ಕಾಶ್ಮೀರ ತಂಡ ಗೆಲ್ಲಲು 205 ರನ್ಗಳಿಸಿ ವಿಜಯವನ್ನು ತನ್ನದಾಗಿಸಿಕೊಳ್ಳಬಹುದು. ಹೀಗಾಗಿ ಮುಂಬೈ-ಜಮ್ಮು ಕಾಶ್ಮೀರ ನಡುವಣ ಪಂದ್ಯವು ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಮುಂಬೈ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ರೋಹಿತ್ ಶರ್ಮಾ , ಅಜಿಂಕ್ಯ ರಹಾನೆ (ನಾಯಕ) , ಶ್ರೇಯಸ್ ಅಯ್ಯರ್ , ಹಾರ್ದಿಕ್ ತಮೋರ್ ( ವಿಕೆಟ್ ಕೀಪರ್ ) , ಶಿವಂ ದುಬೆ , ಶಾರ್ದೂಲ್ ಠಾಕೂರ್ , ಶಮ್ಸ್ ಮುಲಾನಿ , ತನುಷ್ ಕೋಟ್ಯಾನ್ , ಮೋಹಿತ್ ಅವಸ್ತಿ , ಕರ್ಶ್ ಕೊಠಾರಿ.
ಜಮ್ಮು ಕಾಶ್ಮೀರ ಪ್ಲೇಯಿಂಗ್ 11: ಶುಭಂ ಖಜುರಿಯಾ , ವಿವ್ರಾಂತ್ ಶರ್ಮಾ , ಅಬ್ದುಲ್ ಸಮದ್ , ಪರಾಸ್ ಡೋಗ್ರಾ (ನಾಯಕ) , ಕನ್ಹಯ್ಯಾ ವಾಧವನ್ ( ವಿಕೆಟ್ ಕೀಪರ್) , ಔಕಿಬ್ ನಬಿ ದಾರ್ , ಯಾವರ್ ಹಸನ್ , ಯುಧ್ವೀರ್ ಸಿಂಗ್ ಚರಕ್ , ಅಬಿದ್ ಮುಷ್ತಾಕ್ , ಉಮರ್ ನಝೀರ್ ಮಿರ್ , ವಂಶಜ್ ಶರ್ಮಾ