ಫಿನಾಲೆ ವೇದಿಕೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಸುದೀಪ್; ಹೇಗಿದೆ ನೋಡಿ ಕಾಸ್ಟ್ಯೂಮ್
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆ ಇಂದು ( ಜನವರಿ 25 ) ಹಾಗೂ ನಾಳೆ ( ಜನವರಿ 26 ) ನಡೆಯಲಿದೆ. 117 ದಿನಗಳ ಕಾಲ ನಡೆದ ಬಿಗ್ ಬಾಸ್ ಪೂರ್ಣಗೊಳ್ಳುತ್ತಿರುವುದು ಅಭಿಮಾನಿಗಳಿಗೆ ಹಾಗೂ ವೀಕ್ಷಕರಿಗೆ ಬೇಸರ ಇದೆ. ಆದಾಗ್ಯೂ ಒಂದು ಗುಡ್ ಬೈ ಹೇಳಲೇ ಬೇಕಿದೆ.
ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆ ಹೋಸ್ಟ್ ಮಾಡಲು ಸಿದ್ಧರಾಗಿದ್ದಾರೆ. ಹಲವು ಡ್ಯಾನ್ಸ್ ಹಾಗೂ ಸಂಭಾಷಣೆಗಳ ಜೊತೆ ಬಿಗ್ ಬಾಸ್ ಫಿನಾಲೆ ಸಾಗಲಿದೆ. ಇದರ ಜೊತೆಗೆ ಇಂದಿನ ಎಪಿಸೋಡ್ನಲ್ಲಿ ಮೂವರನ್ನು ಎಲಿಮಿನೇಟ್ ಕೂಡ ಮಾಡಲಾಗುತ್ತದೆ. ಈ ಮೂಲಕ ಟಾಪ್ 3ರಲ್ಲಿ ಯಾರು ಇರುತ್ತಾರೆ ಎಂಬುದು ಇಂದೇ ಗೊತ್ತಾಗಲಿದೆ. ಸುದೀಪ್ ಅವರು ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು ಇದರ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos