ಸುದೀಪ್ ಜಾಕೆಟ್ ಬೆಲೆ 2 ಲಕ್ಷ ರೂಪಾಯಿ; ಕಿಚ್ಚನ ಬಗ್ಗೆ ರಾಜೀವ್ ಮಾತು

ಸುದೀಪ್ ಜಾಕೆಟ್ ಬೆಲೆ 2 ಲಕ್ಷ ರೂಪಾಯಿ; ಕಿಚ್ಚನ ಬಗ್ಗೆ ರಾಜೀವ್ ಮಾತು

Malatesh Jaggin
| Updated By: ಮದನ್​ ಕುಮಾರ್​

Updated on: Jan 25, 2025 | 3:55 PM

ಕಿಚ್ಚ ಸುದೀಪ್ ಅವರು ತಮ್ಮ ಪ್ರೀತಿಪಾತ್ರರಿಗೆ ಕೆಲವೊಮ್ಮೆ ಉಡುಗೊರೆಗಳನ್ನು ನೀಡುತ್ತಾರೆ. ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಅವರು ತುಂಬ ಪ್ರೀತಿ ತೋರಿಸುತ್ತಾರೆ. ಈ ಬಾರಿ ಫಿನಾಲೆ ತಲುಪಿರುವ ರಜತ್​ ಅವರಿಗೆ ಸುದೀಪ್ ಕಡೆಯಿಂದ ವಿಶೇಷವಾದ ಜಾಕೆಟ್ ಸಿಕ್ಕಿದೆ. ಮಾಜಿ ಸ್ಪರ್ಧಿ ರಾಜೀವ್ ಅವರು ಈ ಜಾಕೆಟ್ ಬಗ್ಗೆ ಮಾತನಾಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಸುದೀಪ್ ಅವರು ಧರಿಸಿದ್ದ ವಿಶೇಷ ಜಾಕೆಟ್​ ಅನ್ನು ರಜತ್​ಗೆ ಪ್ರೀತಿಯಿಂದ ನೀಡಲಾಗಿದೆ. ಇದನ್ನು ಮಾಜಿ ಸ್ಪರ್ಧಿ ರಾಜೀವ್ ಕೈಯಲ್ಲಿ ಕೊಟ್ಟು ಕಳಿಸಲಾಗುತ್ತು. ಆ ಬಗ್ಗೆ ರಾಜೀವ್ ಮಾತನಾಡಿದ್ದಾರೆ. ‘ಈ ಜಾಕೆಟ್​ನ ಬೆಲೆ ಏನಿಲ್ಲ ಎಂದರೂ ಒಂದೂವರೆಯಿಂದ ಎರಡು ಲಕ್ಷ ರೂಪಾಯಿ’ ಎಂದು ರಾಜೀವ್ ಹೇಳಿದ್ದಾರೆ. ತಮ್ಮ ಸಿನಿಮಾಗಳ ಜರ್ನಿ ಬಗ್ಗೆಯೂ ರಾಜೀವ್ ಅವರು ಮಾತಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.