ಬಿಗ್ ಬಾಸ್ ಬಳಿಕ ಕಲರ್ಸ್ ಕನ್ನಡದಲ್ಲಿ ಬರ್ತಿದೆ ಎರಡು ಹೊಸ ಧಾರಾವಾಹಿ
ಬಿಗ್ ಬಾಸ್ ಕನ್ನಡ ಸೀಸನ್ 11 ಜನವರಿ 26ರಂದು ಅಂತ್ಯಗೊಳ್ಳಲಿದೆ. ಆ ಬಳಿಕ ಕಲರ್ಸ್ ಕನ್ನಡದಲ್ಲಿ ಎರಡು ಹೊಸ ಧಾರಾವಾಹಿಗಳು 'ವಧು' ಮತ್ತು 'ಯಜಮಾನ' ಪ್ರಾರಂಭವಾಗಲಿವೆ. 'ವಧು' ಡಿವೋರ್ಸ್ ಲಾಯರ್ ಕಥೆಯನ್ನು ಹೊಂದಿದ್ದು, 'ಯಜಮಾನ' ಸರಳ ವ್ಯಕ್ತಿ ಮತ್ತು ಹಠಮಾರಿ ಹುಡುಗಿಯ ಕಥೆಯನ್ನು ಹೊಂದಿದೆ. ಈ ಎರಡು ಧಾರಾವಾಹಿಗಳು ವಿಭಿನ್ನ ಕಥಾವಸ್ತುಗಳನ್ನು ಹೊಂದಿವೆ ಮತ್ತು ವೀಕ್ಷಕರನ್ನು ರಂಜಿಸುವ ನಿರೀಕ್ಷೆಯಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಜನವರಿ 26ರಂದು ಪೂರ್ಣಗೊಳ್ಳಲಿದೆ. ಕಳೆದ ಸುಮಾರು ನಾಲ್ಕು ತಿಂಗಳಿಂದ ಈ ರಿಯಾಲಿಟಿ ಶೋ ಪ್ರಸಾರ ಕಾಣುತ್ತಿದೆ. ಈ ರಿಯಾಲಿಟಿ ಶೋ ಮುಗಿದ ಬಳಿಕ ಅಂದರೆ ಜನವರು 27ರಿಂದ ಕಲರ್ಸ್ನಲ್ಲಿ ಎರಡು ಹೊಸ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಹೌದು, ‘ವಧು’ ಮತ್ತು ‘ಯಜಮಾನ’ ಹೆಸರಿನ ಹೊಸ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಆರಂಭ ಆಗಲಿದೆ. ಬಿಗ್ ಬಾಸ್ ವೇದಿಕೆ ಮೇಲೆ ಇದರ ಪ್ರಚಾರ ಕೂಡ ಆಗಿದೆ.
ಕಲರ್ಸ್ ಕನ್ನಡದಲ್ಲಿ ಹೊಸ ಹೊಸ ಧಾರಾವಾಹಿಗಳನ್ನು ವೀಕ್ಷಕರ ಮುಂದೆ ಇಡುತ್ತಲೇ ಇದೆ. ಬೇರೆ ಬೇರೆ ಶೈಲಿಯ ಧಾರಾವಾಹಿಗಳು ಕಲರ್ಸ್ನಲ್ಲಿ ಪ್ರಸಾರ ಕಾಣುತ್ತಿದೆ. ಇದೀಗ ಮತ್ತೆರೆಡು ಹೊಸ ಧಾರಾವಾಹಿಗಳನ್ನು ಕಲರ್ಸ್ ವೀಕ್ಷಕರ ಎದುರು ತರುತ್ತಿದೆ. ‘ವಧು’ ಮತ್ತು ‘ಯಜಮಾನ’ ಜನವರಿ 27ರಂದು ಪ್ರಸಾರ ಆರಂಭಿಸಲಿದೆ. ಡಿವೋರ್ಸ್ ಲಾಯರ್ ಕಥೆ ‘ವಧು’ ರಾತ್ರಿ 9.30ಕ್ಕೆ ಪ್ರಸಾರ ಕಂಡರೆ, ‘ಯಜಮಾನ’ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ.
‘ವಧು’ ಧಾರಾವಾಹಿ ಬಗ್ಗೆ..
‘ವಧು’ ಧಾರಾವಾಹಿಯಲ್ಲಿ ಸಾರ್ಥಕ್ ಪಾತ್ರದಲ್ಲಿ ‘ಲಕ್ಷಣ’ ಖ್ಯಾತಿಯ ಅಭಿಷೇಕ್ ಶ್ರೀಕಾಂತ್ ನಟಿಸಿದರೆ, ವಧು ಪಾತ್ರದಲ್ಲಿ ದುರ್ಗಾಶ್ರೀ ಬಣ್ಣ ಹಚ್ಚಿದ್ದಾರೆ. ಪ್ರಿಯಾಂಕಾ ಪಾತ್ರದಲ್ಲಿ ಸೋನಿ ಮುಲೇವಾ ನಟಿಸಿದ್ದಾರೆ. ವಿನಯಾ ಪ್ರಸಾದ್, ಸುಧಾ ಬೆಳವಾಡಿ, ರವಿ ಭಟ್, ರವಿ ಕುಮಾರ್ ಮತ್ತು ರೇಖಾ ಸಾಗರ್ ಅವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. ವಧು ವೃತ್ತಿಯಲ್ಲಿ ಡಿವೋರ್ಸ್ ಲಾಯರ್. ವಧು ಡಿವೋರ್ಸ್ ಲಾಯರ್ ಎಂಬ ಕಾರಣಕ್ಕೆ ಅವಳನ್ನು ಯಾರೂ ಮದುವೆ ಆಗುತ್ತಿಲ್ಲ. ಸಾರ್ಥಕ್ ಶ್ರಿಮಂತ. ಆತನಿಗೆ ಮದುವೆ ಆಗಿದೆ. ಅವನ ಪತ್ನಿಗೆ ವಿಚ್ಛೇದನ ಮಾತ್ರ ಬೇಕಿರೋದು. ಈ ರೀತಿಯಲ್ಲಿ ಧಾರಾವಾಹಿಯ ಕಥೆ ಸಾಗುತ್ತದೆ.
View this post on Instagram
ಯಜಮಾನ
‘ಯಜಮಾನ’ ಹೆಸರಿನ ಸಿನಿಮಾ ಮೂಡಿ ಬಂದಿತ್ತು. ಅದೇ ಹೆಸರಲ್ಲಿ ಈಗ ಧಾರಾವಾಹಿ ಬರುತ್ತಿದೆ. ಈ ಧಾರಾವಾಹಿಯಲ್ಲಿ ಹರ್ಷ ಬಿ. ಎಸ್. ಮತ್ತು ಮಧುಶ್ರೀ ಭೈರಪ್ಪ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಮೇಶ್ ಭಟ್, ನಾಗಾಭರಣ, ಮಂಜುಳ, ಅಂಕಿತಾ ಜೈರಾಮ್, ತಿಲಕ್, ಸ್ಪೂರ್ತಿ, ಪ್ರದೀಪ್ ಮತ್ತು ವಿಶ್ವ ತಾರಾ ಬಳಗದಲ್ಲಿದ್ದಾರೆ.
View this post on Instagram
ಇದನ್ನೂ ಓದಿ: ಸುದೀಪ್ ನಿರ್ಮಾಣದ ಧಾರಾವಾಹಿಯಲ್ಲಿ ನಟಿಸಿದ್ದ ಕಾಫಿನಾಡು ಚಂದು; ಇಲ್ಲಿದೆ ವಿಡಿಯೋ
ಚೂರೂ ಸ್ವಾರ್ಥವಿಲ್ಲದ ಸರಳ ವ್ಯಕ್ತಿ ಕಥಾನಾಯಕ ರಘುಗೆ ತನ್ನ ಕುಟುಂಬದ ಪ್ರೀತಿ ಗಳಿಸುವ ಮಹದಾಸೆ. ಕಥಾ ನಾಯಕಿ ಝಾನ್ಸಿ ಹಾಗಲ್ಲ. ತಾತನ ಮಡಿಲಲ್ಲಿ ಬೆಳೆದ ಈಕೆ ಗಂಡಸರನ್ನು ದ್ವೇಷಿಸುವ ಹಠಮಾರಿ ಹುಡುಗಿ. ವಿಧಿ ಇವರಿಬ್ಬರನ್ನೂ ಒಂದು ಮದುವೆಯ ರೂಪದಲ್ಲಿ ಹತ್ತಿರ ತರುತ್ತದೆ. ತನ್ನ ಕಷ್ಟದಲ್ಲಿರುವ ಕುಟುಂಬದ ಒಳಿತಿಗೆ ಈ ಮದುವೆ ದಾರಿಯಾದೀತೆಂದು ರಘು ಮದುವೆಗೆ ಒಪ್ಪುತ್ತಾನೆ. ನಂತರ ಏನಾಗುತ್ತದೆ ಎಂಬುದೇ ಕಥೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.