Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್ ನಿರ್ಮಾಣದ ಧಾರಾವಾಹಿಯಲ್ಲಿ ನಟಿಸಿದ್ದ ಕಾಫಿನಾಡು ಚಂದು; ಇಲ್ಲಿದೆ ವಿಡಿಯೋ

ಕಾಫಿ ನಾಡು ಚಂದು ಅವರು ಸುದೀಪ್ ನಿರ್ಮಾಣದ ‘ವಾರಸ್ದಾರ’ ಧಾರಾವಾಹಿಯಲ್ಲಿ ಕಾಣಿಸಿಕೊಂಡ ನಂತರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಟೋ ಚಾಲಕನಾಗಿದ್ದ ಅವರು ಜೂನಿಯರ್ ಆರ್ಟಿಸ್ಟ್ ಆಗಿ ನಟಿಸಿದ್ದರು. ಈ ಧಾರಾವಾಹಿಯು ವಿವಾದಕ್ಕೆ ಕಾರಣವಾಗಿತ್ತು. ಚಿತ್ರೀಕರಣದ ಸಂದರ್ಭದಲ್ಲಿ ಆದ ಹಾನಿಗೆ ಸಂಬಂಧಿಸಿದಂತೆ ಸುದೀಪ್ ವಿರುದ್ಧ ಕೇಸ್ ದಾಖಲಾಗಿತ್ತು.

ಸುದೀಪ್ ನಿರ್ಮಾಣದ ಧಾರಾವಾಹಿಯಲ್ಲಿ ನಟಿಸಿದ್ದ ಕಾಫಿನಾಡು ಚಂದು; ಇಲ್ಲಿದೆ ವಿಡಿಯೋ
ಕಾಫಿ ನಾಡು ಚಂದು-ಸುದೀಪ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jan 02, 2025 | 7:50 AM

ಕಾಫಿ ನಾಡು ಚಂದು ಬಗ್ಗೆ ಬಹುತೇಕರಿಗೆ ಗೊತ್ತಿರುತ್ತದೆ. ‘ನಾನು ಶಿವಣ್ಣ, ಪುನೀತಣ್ಣನವರ ಅಭಿಮಾನಿ’ ಎನ್ನುತ್ತಲೇ ವಿಡಿಯೋ ಆರಂಭಿಸೋ ಅವರು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದ್ದರು. ಆಟೋ ಚಾಲನೆ ಮಾಡುತ್ತಾ ಜೀವನ ನಡೆಸುತ್ತಿದ್ದ ಅವರಿಗೆ ಭರ್ಜರಿ ಬೇಡಿಕೆ ಬಂದಿದೆ. ಅವರು ಸುದೀಪ್ ನಿರ್ಮಾಣದ ಧಾರಾವಾಹಿಯಲ್ಲಿ ನಟಿಸಿದ್ದರು ಎಂಬ ವಿಚಾರ ಗೊತ್ತೇ? ಆರು ವರ್ಷಗಳ ಹಿಂದೆ ಬಂದ ಸುದೀಪ್ ನಿರ್ಮಾಣದ ಧಾರಾವಾಹಿಯಲ್ಲಿ ಅವರು ಸಣ್ಣ ಪಾತ್ರ ಮಾಡಿದ್ದರು.

2018ರಲ್ಲಿ ನಟ ಕಿಚ್ಚ ಸುದೀಪ್ ಅವರ ನಿರ್ಮಾಣ ಸಂಸ್ಥೆ ‘ಕಿಚ್ಚ ಕ್ರಿಯೇಷನ್ಸ್​’ನಿಂದ ‘ವಾರಸ್ದಾರ’ ಧಾರಾವಾಹಿ ನಿರ್ಮಾಣ ಆಗಿತ್ತು. ಜೀ ಕನ್ನಡದಲ್ಲಿ ಧಾರಾವಾಹಿ ಪ್ರಸಾರ ಆಗಿತ್ತು. ಈ ಧಾರಾವಾಹಿಯಲ್ಲಿ ಹಳ್ಳಿ ಮನೆಯ ಕಥೆ ಇತ್ತು. ಇದರ ಶೂಟಿಂಗ್ ಚಿಕ್ಕಮಗಳೂರು ಜಿಲ್ಲೆಯ ಬೈಗೂರು ಗ್ರಾಮದಲ್ಲಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಕಾಫಿ ನಾಡು ಚಂದು ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಚಂದು ಅವರು ಚಿಕ್ಕಮಗಳೂರಿನವರು. ಅವರಿಗೆ ಮೊದಲಿನಿಂದಲೂ ನಟನೆಯಲ್ಲಿ ಆಸಕ್ತಿ. ಹೀಗಾಗಿ, ಅವರು ಕೂಡ ಒಂದು ದೃಶ್ಯದಲ್ಲಿ ಇದ್ದರು. ಜೂನಿಯರ್​ ಆರ್ಟಿಸ್ಟ್ ಆಗಿ ನಟಿಸಿದ್ದರು. ಆ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ.

ಇದನ್ನೂ ಓದಿ: ‘ಜಮಾಲಿ ಗುಡ್ಡ’ ವೇದಿಕೆ ಮೇಲೆ ಕಾಫಿ ನಾಡು ಚಂದು ಸ್ಟೈಲ್​ನಲ್ಲಿ ಅದಿತಿಗೆ ವಿಶ್​ ಮಾಡಿದ ಅನುಶ್ರೀ

ವಿವಾದ ಸೃಷ್ಟಿಸಿದ್ದ ಧಾರಾವಾಹಿ

‘ವಾರಸ್ದಾರ’ ಧಾರಾವಾಹಿ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ‘ವಾರಸ್ದಾರ’ ಧಾರಾವಾಹಿ ಶೂಟಿಂಗ್​ಗೆ ದೀಪಕ್ ಮಯೂರ್ ಎಂಬುವವರ ಮನೆಯನ್ನು ಬಾಡಿಗೆಗೆ ಪಡೆಯಲಾಗಿತ್ತು. ಆದರೆ ಧಾರಾವಾಹಿ ಶೂಟಿಂಗ್ ವೇಳೆ ತಮ್ಮ ಕಾಫಿ ತೋಟಕ್ಕೆ ಹಾನಿ ಆಗಿದೆ,  ತೋಟದಲ್ಲಿದ್ದ ಮರ, ಗಿಡಗಳನ್ನು ಕಡಿಯಲಾಗಿದೆ. ಅರವತ್ತರಿಂದ ಎಪ್ಪತ್ತು ಲಕ್ಷ ರೂಪಾಯಿ ನಷ್ಟವಾಗಿದೆ ಅಲ್ಲದೆ ಮನೆಗೆ ಬಾಡಿಗೆ ನೀಡುವುದಾಗಿ ಹೇಳಿದ್ದ ಸುದೀಪ್ ಬಾಡಿಗೆ ಹಣದಲ್ಲಿ ಸಹ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಮನೆ ಮಾಲೀಕರು, 2019ರ ಜನವರಿಯಲ್ಲಿ ನಟನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ನಂತರ ವಾದ ಪ್ರತಿ ವಾದ ಮಂಡಿಸಿದ ಬಳಿಕ ಸುದೀಪ್ ವಿರುದ್ಧ ಕೇಸ್​ನ ಕೋರ್ಟ್ ವಜಾ ಮಾಡಿತ್ತು. ಆ ಬಳಿಕ ಸುದೀಪ್ ಅವರು ರಿಲೀಫ್ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:50 am, Thu, 2 January 25

ಮಂಗಳೂರಿನಲ್ಲೊಂದು ಎದೆ ಝಲ್ ಎನಿಸುವ ಭೀಕರ ಅಪಘಾತ
ಮಂಗಳೂರಿನಲ್ಲೊಂದು ಎದೆ ಝಲ್ ಎನಿಸುವ ಭೀಕರ ಅಪಘಾತ
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ