‘ಶಿವ ಶಿವ..’ ಹಾಡಿಗೆ ಮೈಸೂರು ಹುಡುಗರ ಮಸ್ತ್ ಸ್ಟೆಪ್; ಫಿದಾ ಆದ ಧ್ರುವ, ಪ್ರೇಮ್
ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರದ ‘ಶಿವ ಶಿವ..’ ಹಾಡಿಗೆ ಮೈಸೂರಿನ ಹುಡುಗರು ಮಾಡಿದ ರೀಲ್ಸ್ ವೈರಲ್ ಆಗಿದೆ. ಈ ರೀಲ್ಸ್ ಧ್ರುವ ಸರ್ಜಾ ಮತ್ತು ಪ್ರೇಮ್ ಅವರನ್ನು ಮೆಚ್ಚಿಸಿದೆ. ಧ್ರುವ ಮತ್ತು ಪ್ರೇಮ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರೇಮ್ ಅವರು ರೀಲ್ಸ್ ಮಾಡಿದವರನ್ನು ಭೇಟಿ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ.
ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್ನಲ್ಲಿ ‘ಕೆಡಿ’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರೇಮ್ ಸಿನಿಮಾಗಳಲ್ಲಿ ಹೆಚ್ಚು ಹೈಲೈಟ್ ಆಗೋದು ಹಾಡುಗಳು. 2024ರ ಅಂತ್ಯದಲ್ಲಿ ‘ಕೆಡಿ’ ಚಿತ್ರದ ‘ಶಿವ ಶಿವ..’ ಹಾಡನ್ನು ರಿಲೀಸ್ ಮಾಡಲಾಯಿತು. ಈ ಹಾಡು ಕೇಳುಗರಿಗೆ ಇಷ್ಟ ಆಗಿದೆ. ಈ ಹಾಡಿಗೆ ಸಾಕಷ್ಟು ಮಂದಿ ರೀಲ್ಸ್ ಮಾಡುತ್ತಿದ್ದಾರೆ. ಈಗ ಮೈಸೂರಿನ ಹುಡುಗರು ಮಾಡಿದ ರೀಲ್ಸ್ ನಿರ್ದೇಶಕ ಪ್ರೇಮ್ ಹಾಗೂ ನಟ ಧ್ರುವ ಅವರಿಗೆ ಸಖತ್ ಇಷ್ಟ ಆಗಿದೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ಮೈಸೂರಿನವರಾದ ಸಿದ್ದಾರ್ಥ್, ಅಭಿರಥ, ಹರ್ಷ, ಮಂಜು, ಸಂಜಯ್ ‘ಶಿವ ಶಿವ..’ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಈ ವಿಡಿಯೋನ ಹಂಚಿಕೊಳ್ಳಲಾಗಿದ್ದು, ಅದು ಸಖತ್ ವೈರಲ್ ಆಗಿದೆ. ಈ ಹಾಡು 45 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಈ ರೀಲ್ಸ್ನ ಧ್ರುವ ಹಾಗೂ ಪ್ರೇಮ್ ಮೆಚ್ಚಿಕೊಂಡು ಹೊಗಳಿದ್ದಾರೆ.
ಈ ರೀಲ್ಸ್ಗೆ ಕಮೆಂಟ್ ಮಾಡಿರೋ ಧ್ರುವ ಸರ್ಜಾ, ‘ಫೆಂಟಾಸ್ಟಿಕ್, ಧನ್ಯವಾದಗಳು, ಜೈ ಹನುಮಾನ್’ ಎಂದಿದ್ದಾರೆ. ರೀಷ್ಮಾ ನಾಣಯ್ಯ ಅವರು ‘ಬೆಂಕಿ’ ಎಂದು ಕಮೆಂಟ್ ಮಾಡಿದ್ದಾರೆ. ಈ ರೀಲ್ಸ್ಗೆ ಈ ರೀತಿಯ ಹಲವು ಕಮೆಂಟ್ಗಳು ಬಂದಿವೆ. ಇನ್ನು ಪ್ರೇಮ್ ಅವರು ಇವರಿಗೆ ದೂರವಾಣಿ ಕರೆ ಮಾಡಿ ಭೇಟಿ ಮಾಡುವ ಆಶಯ ಹೊರಹಾಕಿದ್ದಾರೆ.
View this post on Instagram
‘ನಿಮ್ಮ ವಿಡಿಯೋ ನೋಡಿದೆ. ಸಖತ್ ಆಗಿ ಮಾಡಿದ್ದೀರಾ. ಇನ್ನು ಕೆಲವೇ ದಿನಗಳಲ್ಲಿ ಕಾಲ್ ಮಾಡ್ತೀನಿ. ಭೇಟಿ ಮಾಡೋಣ. ವಿಡಿಯೋ ಉತ್ತಮವಾಗಿದೆ, ಧನ್ಯವಾದಗಳು’ ಎಂದು ಪ್ರೇಮ್ ಅವರು ರೀಲ್ಸ್ ಮಾಡಿದವರ ಜೊತೆ ಮಾತನಾಡಿದ್ದಾರೆ. ಅವರ ಮಾತನ್ನು ಕೇಳಿ ಸಖತ್ ಖುಷಿ ಆಗಿದೆ. ಆ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: ಮೊದಲ ಹಾಡಿನಿಂದ ಜೋರಾಗಲಿದೆ ‘ಕೆಡಿ’ ಅಬ್ಬರ; ಡಿ.24ಕ್ಕೆ ಶಿವ ಶಿವ ಸಾಂಗ್
ಪ್ರೇಮ್ ಅವರ ನಿರ್ದೇಶನದಲ್ಲಿ ‘ಕೆಡಿ’ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಸಂಜಯ್ ದತ್, ಶಿಲ್ಪಾ ಶೆಟ್ಟಿ ಕೂಡ ನಟಿಸಿದ್ದಾರೆ. ‘ಶಿವ ಶಿವ..’ ಹಾಡಿಗೆ ಪ್ರೇಮ್ ಹಾಗೂ ಖೈಲಾಶ್ ಖೇರ್ ಧ್ವನಿ ಆಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಈ ವರ್ಷ ಸಿನಿಮಾ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:58 am, Thu, 2 January 25