Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಸೀಸನ್​ನಲ್ಲಿ ಆದ ವಿವಾದಗಳು ಒಂದೇ ಎರಡೇ? ಇಲ್ಲಿದೆ ವಿವರ

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್​ 11 ಫಿನಾಲೆಗೆ ಕೆಲವೇ ದಿನ ಬಾಕಿ ಇದೆ. ಭಾನುವಾರ ವಿನ್ನರ್ ಘೋಷಣೆ ಆಗಲಿದೆ. ಪ್ರತಿ ಸೀಸನ್​ ನಂತೆ ಈ ಸೀಸನ್​ನಲ್ಲಿಯೂ ಸಾಕಷ್ಟು ವಿವಾದಗಳು ನಡೆದವು. ಆ ವಿವಾದಗಳ ಪಟ್ಟಿ ಇಲ್ಲಿದೆ...

ಈ ಸೀಸನ್​ನಲ್ಲಿ ಆದ ವಿವಾದಗಳು ಒಂದೇ ಎರಡೇ? ಇಲ್ಲಿದೆ ವಿವರ
Bigg Boss Kannada 11
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Jan 24, 2025 | 11:00 PM

‘ಬಿಗ್ ಬಾಸ್ ಕನ್ನಡ ಸೀಸನ್ 11’ ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿರುವುದು ಗೊತ್ತೇ ಇದೆ. ಭಾನುವಾರ (ಜನವರಿ 26) ಈ ಸೀಸನ್​​ನ ಕೊನೆಯ ಎಪಿಸೋಡ್ ಕಲರ್ಸ್​ ಕನ್ನಡದಲ್ಲಿ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣಲಿದೆ. ಕಳೆದ ಸೀಸನ್​ಗಳಿಗೆ ಹೋಲಿಕೆ ಮಾಡಿದಾಗ ಈ ಸೀಸನ್​ನಲ್ಲಿ ವಿವಾದಗಳು ಹೆಚ್ಚು ಕಂಡು ಬಂದವು. ಆ ವಿವಾದಗಳ ಬಗ್ಗೆ ಇಲ್ಲಿದೆ ವಿವರ.

ಸ್ವರ್ಗ-ನರಕ

ಸ್ವರ್ಗ ಹಾಗೂ ನರಕ ಕಾನ್ಸೆಪ್ಟ್​ನೊಂದಿಗೆ ಈ ಬಾರಿಯ ಬಿಗ್ ಬಾಸ್ ಆರಂಭ ಆಯಿತು. ಆದರೆ, ಎರಡೇ ವಾರಕ್ಕೆ ಈ ಕಾನ್ಸೆಪ್ಟ್ ಕೊನೆ ಮಾಡಬೇಕಾಯಿತು. ಇದಕ್ಕೆ ಕಾರಣವೂ ಇದೆ. ನರಕದಲ್ಲಿ ಇರುವ ಸ್ಪರ್ಧಿಗಳಿಗೆ ಸರಿಯಾದ ರೀತಿಯಲ್ಲಿ ಟಾಯ್ಲೆಟ್ ವ್ಯವಸ್ಥೆ ಇಲ್ಲ ಎನ್ನುವ ಆರೋಪವನ್ನು ಮಹಿಳಾ ಆಯೋಗದವರು ಮಾಡಿದ್ದರು. ಇದಾದ ಬೆನ್ನಲ್ಲೇ ಈ ಕಾನ್ಸೆಪ್ಟ್ ಕೊನೆ ಆಯಿತು.

ಎಲಿಮಿನೇಟ್

ಜಗದೀಶ್ ಅವರು ಬಿಗ್ ಬಾಸ್​ನಲ್ಲಿ ಮಹಿಳಾ ಸ್ಪರ್ಧಿಗಳ ವಿರುದ್ಧ ಕಿರುಚಾಡಿ, ಕಿತ್ತಾಡಿ ಇಡೀ ಮನೆಯ ವಾತಾವರಣವನ್ನೇ ಹಾಳು ಮಾಡಿ ಬಿಟ್ಟರು. ಇದು ಚರ್ಚೆಯ ಕೇಂದ್ರ ಬಿಂದು ಆಗಿತ್ತು. ಹೀಗಾಗಿ, ಅವರನ್ನು ಹೊರಕ್ಕೆ ಹಾಕಲಾಯಿತು. ಇನ್ನು ರಂಜಿತ್ ಅವರು ಜಗದೀಶ್​ನ ತಳ್ಳಿದ ಆರೋಪದ ಮೇಲೆ ಹೊರಕ್ಕೆ ಹೋಗಬೇಕಾಯಿತು.

ಬಿಗ್ ಬಾಸ್ ನಿಲ್ಲಿಸಿ

ಜಾಗದ ವಿಚಾರದಲ್ಲಿ ನಡೆದ ವಿವಾದದ ಕಾರಣಕ್ಕೆ ಬಿಗ್ ಬಾಸ್​ನ ಕೂಡಲೇ ನಿಲ್ಲಿಸಬೇಕು ಎಂಬ ಆದೇಶವು ಬಿಗ್ ಬಾಸ್ ತಂಡಕ್ಕೆ ಬಂದಿತ್ತು. ಇದನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿ, ತಂಡದವರು ಈ ಆದೇಶಕ್ಕೆ ತಡೆ ತಂದರು.

ಪಾರ್ಷಾಲಿಟಿ

ಈ ಬಾರಿಯ ಬಿಗ್ ಬಾಸ್​ನಲ್ಲಿ ಪಾರ್ಷಾಲಿಟಿ ಮಾಡಿದ ಆರೋಪ ಕೇಳಿ ಬಂತು. ರಂಜಿತ್ ಅವರು ತಳ್ಳಿದ ಆರೋಪಕ್ಕೆ ಬಿಗ್ ಬಾಸ್​ನಿಂದ ಹೊರ ಹೋದರು. ಇದೇ ಕೆಲಸವನ್ನು ಭವ್ಯಾ ಮಾಡಿದಾಗ ಬಿಗ್ ಬಾಸ್ ಸುಮ್ಮನಿದ್ದರು. ಹನುಮಂತನ ಮೇಲೆ ಭವ್ಯಾ ಹಲ್ಲೆ ಮಾಡಿದ್ದರು. ಆಗ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ಇನ್ನು, ತ್ರಿವಿಕ್ರಂ ಅವರು ತಪ್ಪು ಮಾಡಿದಾಗ ಟಾಸ್ಕ್ ರದ್ದು ಮಾಡಿ ಮೊದಲಿನಿಂದ ಆಡಿಸಲಾಗಿತ್ತು. ಆದರೆ, ಧನರಾಜ್ ಅವರು ತಪ್ಪು ಮಾಡಿದಾಗ ಟಾಸ್ಕ್​ನ ಮೊದಲಿನಿಂದ ಆಡಿಸಿದೇ ಹಾಗೆಯೇ ಬಿಡಲಾಯಿತು. ವಿಚಾರ ಚರ್ಚೆ ಆದಾಗ ಕೊನೆಯ ವಾರದಲ್ಲಿ ಈ ವಿಚಾರ ಚರ್ಚೆಗೆ ತರಲಾಯಿತು.

ಇದನ್ನೂ ಓದಿ:ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್

ಪ್ರ್ಯಾಂಕ್ಸ್

ಈ ಸೀಸನ್​ನಲ್ಲಿ ಮಾಡಿದಷ್ಟು ಬಿಗ್ ಬಾಸ್ ಪ್ರ್ಯಾಂಕ್​ಗಳನ್ನು ಹಿಂದೆಂದೂ ಮಾಡಿಲ್ಲ. ಐದರಿಂದ ಆರು ಬಾರಿ ಪ್ರ್ಯಾಂಕ್​ ಎಲಿಮಿನೇಷ್ ಮಾಡಲಾಗಿದೆ. ಹಲವು ಬಾರಿ ಎಲಿಮಿನೇಷನ್​ಗಳು ಸ್ಕಿಪ್ ಮಾಡಲಾಗಿದೆ.

ಹೊರಗಿನ ವಿಚಾರ

ಚೈತ್ರಾ ಅವರು ಹೊರಗಿನ ವಿಚಾರಗಳನ್ನು ಹೇಳುವ ಮೂಲಕ ಚರ್ಚೆಗೆ ಕಾರಣವಾಗಿದ್ದು. ಆಸ್ಪತ್ರೆ ಸೇರಿದ್ದರಿಂದ ಅವರಿಗೆ ಹೊರಗಿನ ವಿಚಾರ ಗೊತ್ತಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ