AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗದೀಶ್ ಮೇಲೆ ಮತ್ತೆ ಹಲ್ಲೆ, ರಕ್ತ ಸಿಕ್ತನಾಗಿ ಲೈವ್ ಬಂದ ವಕೀಲ

Lawyer Jagadish: ಬಿಗ್​ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಆಗಿದ್ದ, ಸಾಮಾಜಿಕ ಹೋರಾಟಗಾರನಾಗಿಯೂ ಗುರುತಿಸಿಕೊಂಡಿರುವ ಲಾಯರ್ ಜಗದೀಶ್ ಮೇಲೆ ಅಗಂತುಕ ಗುಂಪೊಂದು ದಾಳಿ ನಡೆಸಿದೆ. ದಾಳಿಯಲ್ಲಿ ಜಗದೀಶ್​ಗೆ ಗಾಯಗಳಾಗಿವೆ, ಅವರ ಪುತ್ರನ ಮೇಲೂ ಹಲ್ಲೆ ಆಗಿದೆ. ರಕ್ತ ಒರಸುತ್ತಿದ್ದ ಸ್ಥಿತಿಯಲ್ಲಿಯೇ ಲಾಯರ್ ಜಗದೀಶ್ ಲೈವ್ ಬಂದಿದ್ದಾರೆ.

ಜಗದೀಶ್ ಮೇಲೆ ಮತ್ತೆ ಹಲ್ಲೆ, ರಕ್ತ ಸಿಕ್ತನಾಗಿ ಲೈವ್ ಬಂದ ವಕೀಲ
Lawyer Jagadish
ಮಂಜುನಾಥ ಸಿ.
|

Updated on: Jan 24, 2025 | 9:13 PM

Share

ಬಿಗ್​ಬಾಸ್ ಸೀಸನ್ 11 ರ ಮಾಜಿ ಸ್ಪರ್ಧಿ, ಸಾಮಾಜಿಕ ಹೋರಾಟಗಾರನಾಗಿಯೂ ಗುರುತಿಸಿಕೊಂಡಿರುವ ಲಾಯರ್ ಜಗದೀಶ್ ಮೇಲೆ ಮತ್ತೆ ಹಲ್ಲೆ ಆಗಿದೆ. ಯಾರೋ ಕಿಡಿಗೇಡಿಗಳು ಜಗದೀಶ್ ಮತ್ತು ಅವರ ಪುತ್ರನ ಮೇಲೆ ಹಲ್ಲೆ ಮಾಡಿದ್ದಾರೆ. ಜಗದೀಶ್ ಮೂಗು, ತುಟಿಗಳಿಂದ ರಕ್ತ ಹೊರಬರುವಂತೆ ಹಲ್ಲೆ ನಡೆದಿದ್ದು, ರಕ್ತ ಒಸರುತ್ತಿರುವಾಗಲೇ ಪೇಸ್​ ಬುಕ್ ಮೂಲಕ ಲೈವ್ ಬಂದು ಜಗದೀಶ್ ಮಾತನಾಡಿದ್ದಾರೆ.

‘ಇವತ್ತು ನಮ್ಮ ಹಾಗೂ ನನ್ನ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ. ನಮ್ಮನ್ನು ಪೊಲೀಸರು ಬಂದು ಕಾಪಾಡಿದರು. ನನ್ನ ಸ್ಕಾರ್ಪಿಯೋ ಧ್ವಂಸವಾಗಿದೆ. ಧ್ವನಿ ಎತ್ತುವರರ ಮೇಲೆ ಹಲ್ಲೆ ಆಗಿದೆ. ನಮ್ಮ ಗನ್ ಮೇಲೆ ದೊಣ್ಣೆ ಮತ್ತು ಮಚ್ಚುಗಳಿಂದ ಹೊಡೆದಿದ್ದಾರೆ. ಎಲ್ಲಿದೆ ಕಾನೂನು ಸುವ್ಯವಸ್ಥೆ. ಸಿಎಂ ಸಿದ್ದರಾಮಯ್ಯ ಅವರೇ ಏನು ಮಾಡುತ್ತಿದ್ದೀರಿ. ಅನ್ಯಾಯದ ವಿರುದ್ಧ ಧ್ವನಿ ಎತ್ತುವವರ ಸ್ಥಿತಿ ಏನಾಗಿದೆ. ಟೆರರಿಸ್ಟ್​ ಗಳ ರಾಜ್ಯವಾಗಿದೆ’ ಎಂದಿದ್ದಾರೆ.

ಪೊಲೀಸ್ ಜೀಪಿನಲ್ಲಿ ಕುಳಿತುಕೊಂಡೇ ಜಗದೀಶ್ ಅವರು ಲೈವ್ ಮಾಡಿದ್ದಾರೆ. ಪೊಲೀಸರು ನೀರು ಕೊಟ್ಟು ಉಪಚರಿಸುತ್ತಿರುವುದು ಲೈವ್ ನಲ್ಲಿ ದಾಖಲಾಗಿದೆ. ಜಗದೀಶ್ ಮಾತ್ರವಲ್ಲದೆ ಅವರ ಪುತ್ರನ ಮೇಲೂ ಹಲ್ಲೆ ಆಗಿದ್ದು, ಪುತ್ರನಿಗೂ ಸಹ ಮುಖ, ಕಿವಿಗೆ ಗಾಯಗಳಾಗಿದೆ.

‘ಕೆಲವು ಪುಡಿ ರೌಡಿಗಳು ನಮ್ಮ ಮೇಲೆ ದಾಳಿ ಮಾಡಿದರು. ನನ್ನನ್ನು, ನನ್ನ ಕುಟುಂಬವನ್ನು ಕೊಲ್ಲುವ ಪ್ರಯತ್ನ ಮಾಡಿದರು. ಕರ್ನಾಟಕದಲ್ಲಿ ಪೊಲೀಸರಿಗಿಂತಲೂ ಪುಡಿ ರೌಡಿಗಳೇ ಮೆರೆದಾಡುತ್ತಿದ್ದಾರೆ. ಪುಡಿ ರೌಡಿಗಳು ಕಾನೂನಿಗಿಂತ ಮೇಲೆ ಬೆಳೆದು ಬಿಟ್ಟಿದ್ದಾರೆ. ಕರ್ನಾಟಕದ ಧ್ವನಿಯಾಗಿದ್ದ ನನ್ನನ್ನು ಹತ್ತಿಕ್ಕುವ ಪ್ರಯತ್ನ ಇದಾಗಿದೆ’ ಎಂದಿದ್ದಾರೆ ಜಗದೀಶ್.

ಇದನ್ನೂ ಓದಿ:‘ದರ್ಶನ್ ಫ್ಯಾನ್ಸ್ ಇನ್ಸುರೆನ್ಸ್ ಮಾಡಿಸಿಕೊಂಡು ಬನ್ನಿ’; ಎಚ್ಚರಿಸಿದ ಲಾಯರ್ ಜಗದೀಶ್

ಸುಮಾರು 500ಕ್ಕೂ ಹೆಚ್ಚು ಜನ, ಮದ್ಯ ಸೇವಿಸಿ, ಗಾಂಜಾ ಮತ್ತಿನಲ್ಲಿ ನಮ್ಮ ಮೇಲೆ ದಾಳಿ ಮಾಡಿದ್ದಾರೆ. ನಾವ್ಯಾರನ್ನೂ ನ್ಯಾಯ ಕೇಳುವುದಿಲ್ಲ ಏಕೆಂದರೆ ನ್ಯಾಯವೇ ಅನ್ಯಾವಾಗಿ ಮಾರ್ಪಾಡಾಗಿದೆ. ನನ್ನ ಜೀವ ಹೋದರೂ ನಾನು ಕೇರ್ ಮಾಡುವುದಿಲ್ಲ ಆದರೆ ಅನ್ಯಾಯ ಗೆಲ್ಲಬಾರದು. ಕಾನೂನು ಸುವ್ಯವಸ್ಥೆ ಎಂಬುದು ರಾಜ್ಯದಲ್ಲಿ ಇಲ್ಲದಾಗಿದೆ. ಏನಾದರೂ ಆಗಲಿ ನಾನು ನನ್ನ ನಿಲುವನ್ನು ಬಿಡುವುದಿಲ್ಲ’ ಎಂದಿದ್ದಾರೆ ಜಗದೀಶ್. ಇದೀಗ ಜಗದೀಶ್, ದಾಳಿಕೋರರ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಿನ್ನೆಯಷ್ಟೆ ಜಗದೀಶ್​ ಮೇಲೆ ಯುವಕನೊಬ್ಬ ಹಲ್ಲೆ ಮಾಡಿದ್ದ. ವೈರಲ್ ಆಗಿದ್ದ ವಿಡಿಯೋನಲ್ಲಿ ಜಗದೀಶ್ ಹಾಗೂ ಯುವಕನೋರ್ವ ಪರಸ್ಪರ ಕೈ-ಕೈ ಮಿಲಾಯಿಸಿ ಕಿತ್ತಾಡಿಕೊಂಡಿದ್ದರು. ಆ ಬಗ್ಗೆಯೂ ವಿಡಿಯೋ ಹಂಚಿಕೊಂಡಿದ್ದ ಜಗದೀಶ್, ದರ್ಶನ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದರು. ಆದರೆ ಅದಾದ ಕೆಲವೇ ಗಂಟೆಗಳಲ್ಲಿ ಜಗದೀಶ್​ ಮೇಲೆ ಮತ್ತೊಮ್ಮೆ ಹಲ್ಲೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ