‘ನಮ್ಮ ಹೀರೋ, ಧೀಮಂತ ಆಟಗಾರ’; ಹನುಮಂತನ ಬಾಯ್ತುಂಬ ಹೊಗಳಿದ ಬಿಗ್ ಬಾಸ್

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದ ಹನುಮಂತ ಅವರು ತಮ್ಮ ಆಟದ ಶೈಲಿಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ನೇರ ಮತ್ತು ಪ್ರಾಮಾಣಿಕ ವ್ಯಕ್ತಿತ್ವದಿಂದ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಬಿಗ್ ಬಾಸ್ ಅವರ ಆಟವನ್ನು ಮೆಚ್ಚಿ ಅಭಿನಂದಿಸಿದ್ದಾರೆ. ಹನುಮಂತ ಈಗ ಗೆಲುವಿನ ಹಾದಿಯಲ್ಲಿದ್ದಾರೆ.

‘ನಮ್ಮ ಹೀರೋ, ಧೀಮಂತ ಆಟಗಾರ’; ಹನುಮಂತನ ಬಾಯ್ತುಂಬ ಹೊಗಳಿದ ಬಿಗ್ ಬಾಸ್
ಹನುಮಂತ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 24, 2025 | 8:08 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ಹನುಮಂತ ಎಲ್ಲರ ಗಮನ ಸೆಳೆದರು. ಅವರು ಆಡಿದ ರೀತಿ ಅನೇಕರಿಗೆ ಇಷ್ಟ ಆಗಿದೆ. ಹೊಸ ರೀತಿಯಲ್ಲಿ ಆಟ ಆಡುವ ಮೂಲಕ ಅವರು ಎಲ್ಲರ ಫೇವರಿಟ್ ಎನಿಸಿಕೊಂಡಿದ್ದಾರೆ. ಮೋಸ, ವಂಚನೆ, ಕಪಟ ಏನೂ ಅರಿಯದೆ ಅವರು ದೊಡ್ಮನೆಯಲ್ಲಿ ಇಷ್ಟು ದಿನ ಬಂದಿದ್ದಾರೆ. ಹೀಗಿರುವಾಗಲೇ ಅವರಿಗೆ ಬಿಗ್ ಬಾಸ್ ಕಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

ಬಿಗ್ ಬಾಸ್​ನಲ್ಲಿ ಈ ಬಾರಿ ಹೊಸ ಹೊಸ ಪ್ರಯತ್ನ ಮಾಡಲಾಗಿದೆ. ಇದರಲ್ಲಿ ಅಭಿಮಾನಿಗಳನ್ನು ಕರೆಸಿದ್ದು ಕೂಡ ಒಂದು. ಹೌದು, ಅಭಿಮಾನಿಗಳನ್ನು ಬಿಗ್ ಬಾಸ್ ಮನೆ ಒಳಗೆ ಆಹ್ವಾನಿಸಲಾಗಿದೆ. ಪ್ರತಿ ಸ್ಪರ್ಧಿಯನ್ನು ಗಾರ್ಡನ್ ಏರಿಯಾಗೆ ಕರೆಸಲಾಗಿದೆ. ಈ ವೇಳೆ ಅಲ್ಲಿ ಸ್ಪರ್ಧಿಗಳ ಅಭಿಮಾನಿಗಳನ್ನು ಕರೆಸಲಾಗಿದೆ. ಅವರ ಎದುರು ಸ್ಪರ್ಧಿಯನ್ನು ಹೊಗಳಿ, ರಿಕ್ಯಾಪ್ ಹಾಕುವ ಕೆಲಸ ಆಗಿದೆ.

ಬಿಗ್ ಬಾಸ್ ಹನುಮಂತ ಅವರ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ‘ಹನುಮಂತ ಮೊದಲ ಟಾಸ್ಕ್​ನಲ್ಲಿ ಆಟ ಆಡುವಾಗ ಸುಸ್ತಾಗಿ ಬಿದ್ದಿದ್ದು ನೋಡಿ ಸುತ್ತಲೂ ಇದ್ದ ಪ್ರತಿಯೊಬ್ಬರ ಮನದಲ್ಲಿ ಇದ್ದಿದ್ದು ಒಂದೇ ಪ್ರಶ್ನೆ. ಈಗೇನ್ ಮಾಡ್ತಾನೆ ನಿಮ್ಮ ಹೀರೋ ಅಂತ. ಆಗ ಹೀರೋ ಮಾತನಾಡಲ್ಲ. ಮನೆಯ ಪ್ರತಿ ಸದಸ್ಯರನ್ನು ಹಿಮ್ಮೆಟ್ಟಿಸಿ ಟಿಕೆಟ್​ ಟು ಫಿನಾಲೆ ಪಡೆದು ಮೊದಲ ಸದಸ್ಯನಾಗುವ ಮೂಲಕ ಮಾತನಾಡಿದ್ದರೂ ಮಾಡಿ ತೋರಿಸುವಲ್ಲಿ ತಪ್ಪಲಿಲ್ಲ ನಮ್ಮ ಹೀರೋ’ ಎಂದರು ಬಿಗ್ ಬಾಸ್.

‘ಬಿಗ್ ಬಾಸ್ ಮನೆಯಲ್ಲಿ ನಿಮ್ಮ ಶೈಲಿಯಲ್ಲಿ ಆಟ ಆಡುವ ಮೂಲಕ ನೋಡುಗರಿಗೆ ಬದುಕಿನ ಪಾಠ ಕಲಿಸಿದ್ದೀರಿ. ಆಟ ಅಂತ ಬಂದಾಗ ದೋಸ್ತಾ ಅನ್ನೋದು ನೋಡಿಲ್ಲ. ದೋಸ್ತನ ವಿಷಯದಾಗ ಯಾವುದೇ ಆಟ ಆಡಿಲ್ಲ. ಬಿಗ್ ಬಾಸ್ ಮನೆಯಲ್ಲಿ ಧೀಮಂತ ಆಟ ಆಡಿದ ಹನುಮಂತ ನಿಮ್ಮ ಲುಂಗಿ ಲಾಂಚನ ಎಂದಿಗೂ ಬಾಗದಿರಲಿ. ಮನದಾಳದ ಅಭಿನಂದನೆಗಳು’ ಎಂದರು ಬಿಗ್ ಬಾಸ್.

ಇದನ್ನೂ ಓದಿ: ‘ನೀನು ಮಾಡೋ ಡವ್ ಸೂಪರ್’; ಭವ್ಯಾಗೆ ಓಪನ್ ಆಗಿ ಕಾಲೆಳೆದ ಹನುಮಂತ

ಹನುಮಂತ ಅವರು ಈ ಬಾರಿ ಕಪ್ ಗೆಲ್ಲುವ ರೇಸ್​ನಲ್ಲಿ ಇದ್ದಾರೆ. ಅವರಿಗೆ ಕಪ್ ಸಿಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಅವರ ಜೊತೆ ಇರುವ ಉಳಿದ ಐವರು ಸ್ಟ್ರಾಂಗ್ ಎನಿಸಿಕೊಂಡಿದ್ದಾರೆ. ಹೀಗಾಗಿ, ಕಪ್ ಯಾರಿಗೆ ಒಲಿಯುತ್ತದೆ ಎಂದು ಹೇಳುವುದು ಅಷ್ಟು ಸುಲಭವಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:53 am, Fri, 24 January 25

ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್