ತಂದೆಯ ಸ್ಥಾನದಲ್ಲಿ ತ್ರಿವಿಕ್ರಮ್ಗೆ ಪತ್ರ ಬರೆದ ಬಿಗ್ ಬಾಸ್; ಈಡೇರಿತು ಕೋರಿಕೆ
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ತ್ರಿವಿಕ್ರಮ್ ಅವರು ಫಿನಾಲೆ ತಲುಪಿದ್ದು, ಅವರನ್ನು ನೋಡಲು ಹಲವಾರು ಅಭಿಮಾನಿಗಳು ದೊಡ್ಮನೆಗೆ ಬಂದಿದ್ದಾರೆ. ಅವರ ಎದುರಲ್ಲಿ ಬಿಗ್ ಬಾಸ್ ಬರೆದ ಪತ್ರವನ್ನು ಓದಲಾಗಿದೆ. ಈ ಪತ್ರದಲ್ಲಿ ತ್ರಿವಿಕ್ರಮ್ ಅವರನ್ನು ಹೊಗಳಲಾಗಿದೆ. ತ್ರಿವಿಕ್ರಮ್ ಅವರ ಪಾಲಿಗೆ ಈ ಕ್ಷಣ ಎಮೋಷನಲ್ ಆಗಿತ್ತು.
ಬಿಗ್ ಬಾಸ್ ಆಟದಲ್ಲಿ ಫಿನಾಲೆ ತಲುಪಿರುವ ತ್ರಿವಿಕ್ರಮ್ ಅವರಿಗೆ ತಂದೆ ಇಲ್ಲ ಎಂಬ ಕೊರಗು ಇದೆ. ಹಾಗಾಗಿ ಅವರು ಇತ್ತೀಚೆಗೆ ಬಿಗ್ ಬಾಸ್ ಬಳಿ ಒಂದು ಮನವಿ ಮಾಡಿಕೊಂಡಿದ್ದರು. ತಂದೆಯ ಸ್ಥಾನದಲ್ಲಿ ನಿಂತು ಪತ್ರ ಬರೆಯಬೇಕು ಎಂದು ಅವರು ಕೋರಿದ್ದರು. ಆ ಆಸೆಯನ್ನು ಬಿಗ್ ಬಾಸ್ ಈಡೇರಿಸಿದ್ದಾರೆ. ಜನವರಿ 23ರ ಸಂಚಿಕೆಯಲ್ಲಿ ತ್ರಿವಿಕ್ರಮ್ ಅವರಿಗೆ ಬಿಗ್ ಬಾಸ್ ಕಡೆಯಿಂದ ಪತ್ರ ಬಂದಿದೆ. ಅಲ್ಲದೇ ಹಲವಾರು ಅಭಿಮಾನಿಗಳು ಕೂಡ ಬಿಗ್ ಬಾಸ್ ಮನೆಯ ಒಳಗೆ ಬಂದಿದ್ದಾರೆ. ಅವರೆಲ್ಲರ ಎದುರಿನಲ್ಲಿ ಸ್ವತಃ ಬಿಗ್ ಬಾಸ್ ಈ ಪತ್ರವನ್ನು ಓದಿದ್ದಾರೆ.
‘ವ್ಯಕ್ತಿತ್ವದಲ್ಲಿ ಉತ್ತಮ ತ್ರಿವಿಕ್ರಮ. ಆಟದಲ್ಲಿ ಉತ್ತಮೋತ್ತ ತ್ರಿವಿಕ್ರಮ. ಹೇಗೆ ಅಂತೀರಾ? ವೈಯಕ್ತಿಕ ಗೆಲುವಿಗೆ ಸ್ವಾರ್ಥಿ ಆಗುವ ತ್ರಿವಿಕ್ರಮ ತನ್ನವರ ಗೆಲುವಿಗೆ ನಿಸ್ವಾರ್ಥಿ ಆಗಿದ್ದನ್ನು ನಾನು ಕಂಡಿದ್ದೇನೆ. ಕಳೆದ ವಾರ ಸದಸ್ಯರು ಓಡುವ ಕುದುರೆಯ ಕಾಲು ಕಟ್ಟಿ ಹಾಕಿದ್ದು ಎಲ್ಲರೂ ನೋಡಿದ್ದಾರೆ. ಕುದುರೆಗೆ ಅವಕಾಶ ಸಿಗದೇ ಮಲಗಿದ್ದನ್ನು ಎಲ್ಲರೂ ನೋಡಿದ್ದಾರೆ. ಟಾಸ್ಕ್ ಮಾಸ್ಟರ್ ಎದುರು ಸದಸ್ಯರು ನಡುಗಿದ್ದನ್ನು ನಾನು ಕಂಡಿದ್ದೇನೆ.’
‘ಗೆಳೆಯರ ಜೊತೆ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದ ತ್ರಿವಿಕ್ರಮ್ ಅವರು ಗೆಳೆಯರಿಗಾಗಿ ಅತ್ತಿದ್ದನ್ನು ಕಂಡಿದ್ದೇನೆ. ಬಾಂಧವ್ಯವನ್ನು ಸಂಭಾಳಿಸಿದ ತ್ರಿವಿಕ್ರಮ್ ಅವರು ಅಮ್ಮನಿಗಾಗಿ ಹಂಬಲಿಸಿದ್ದು ಕಂಡಿದ್ದೇನೆ. ತಪ್ಪು ಒಪ್ಪಿಕೊಂಡು ಮೌನಕ್ಕ ಶರಣಾಗಿದ್ದನ್ನು ಕಂಡಿದ್ದೇನೆ. ಎದುರಾಳಿ ವಿರುದ್ಧ ತೊಡೆ ತಟ್ಟಿದ್ದು ಕಂಡಿದ್ದೇನೆ. ಸಂಪೂರ್ಣವಾಗಿ ಈ ಮನೆಯಲ್ಲಿ ಜೀವಿಸಿರುವ ತ್ರಿವಿಕ್ರಮ ಅವರಿಗೆ ಮನದಾಳದ ಅಭಿನಂದನೆಗಳು. ಇಂತಿ ನಿಮ್ಮ ಪ್ರೀತಿಯ ಬಿಗ್ ಬಾಸ್’ ಎಂದು ಪತ್ರದಲ್ಲಿ ಬರೆಯಲಾಗಿದೆ.
ಈ ಮಾತುಗಳನ್ನು ಕೇಳಿಸಿಕೊಂಡು ತ್ರಿವಿಕ್ರಮ್ ಅವರು ಕೊಂಚ ಎಮೋಷನಲ್ ಆದರು. ‘ಈ ಪತ್ರ ಓದಿ ಮನಸ್ಸಿಗೆ ಭಾರ ಆಯ್ತು. ಹಾಗೆಯೇ ಖುಷಿ ಆಯಿತು. ನಿಮ್ಮಿಂದ ಈ ಪತ್ರ ಬಂದಿದ್ದಕ್ಕಿಂತ ದೊಡ್ಡದು ಏನೂ ಇಲ್ಲ’ ಎಂದು ತ್ರಿವಿಕ್ರಮ್ ಅವರು ಹೇಳಿದರು. ಇಷ್ಟು ದಿನಗಳ ಬಿಗ್ ಬಾಸ್ ಜರ್ನಿಯನ್ನು ಮೆಲುಕು ಹಾಕುವ ವಿಡಿಯೋ ಪ್ರದರ್ಶನ ಮಾಡಲಾಯಿತು. ಅದನ್ನು ಕಂಡು ತ್ರಿವಿಕ್ರಮ್ ಅವರು ಭಾವುಕರಾದರು.
ಇದನ್ನೂ ಓದಿ: ಹನುಮಂತ, ಭವ್ಯಾ ಗೌಡ, ತ್ರಿವಿಕ್ರಮ್ಗೆ ಬಿಗ್ ಬಾಸ್ ಟ್ರೋಫಿ ಯಾಕೆ ಮುಖ್ಯ?
‘ಬ್ಲಾಂಕ್ ಆಗಿ ಶುರುವಾದ ಜರ್ನಿ ಇದು. ಕೊನೆ ಸೀಸನ್ನಲ್ಲಿ ಆಫರ್ ಬಂದಾಗ ತಾಯಿಗೆ ಹುಷಾರು ಇರಲಿಲ್ಲ. ಹಾಗಾಗಿ ಬರಲು ಆಗಿರಲಿಲ್ಲ. ಇಲ್ಲಿ ಸುಳ್ಳು ಹೇಳೋಕೆ ಆಗಲ್ಲ. ಎಲ್ಲ ಕಡೆ ಕ್ಯಾಮೆರಾ ಇದೆ. ನಾನು ಲೋಕಲ್ ಆಗಿ ಬೆಳೆದ ಹುಡುಗ. ಎಲ್ಲವನ್ನೂ ಕಂಟ್ರೋಲ್ ಮಾಡಿಕೊಂಡು ಇಲ್ಲಿ ಇದ್ದೇವೆ. ಎಲ್ಲರೂ ಕಷ್ಟ ಇದ್ದು ಬಂದವರೇ. ಇಲ್ಲಿ ನಾನು ರಂಜಿತ್ನ ನೋಡಿ ಭಯಪಟ್ಟೆ. ಸ್ನೇಹ ಬೆಳೆಯಿತು. ತುಂಬ ವಿಚಾರ ಹಂಚಿಕೊಂಡೆವು. ಭವ್ಯಾ ಜೊತೆ ಫ್ರೆಂಡ್ ಆದೆ. ಇಡೀ ಮನೆ ನನ್ನ ವಿರುದ್ಧ ಇದ್ದಾಗ ಭವ್ಯಾ ನನ್ನ ಜೊತೆಗಿದ್ದರು. ಅವರ ಜೊತೆ ನನ್ನದು ಸಿಹಿ ನೆನಪುಗಳು. ಗೋಲ್ಡ್ ಸುರೇಶ್, ಶಿಶಿರ್, ಐಶ್ವರ್ಯಾ ಆಪ್ತರಾದರು’ ಎಂದು ತ್ರಿವಿಕ್ರಮ್ ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.