‘ನೀನು ಮಾಡೋ ಡವ್ ಸೂಪರ್’; ಭವ್ಯಾಗೆ ಓಪನ್ ಆಗಿ ಕಾಲೆಳೆದ ಹನುಮಂತ

ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಗೌಡ ಅವರು ಮೂರು ಬಾರಿ ಕ್ಯಾಪ್ಟನ್ ಆಗಿದ್ದಾರೆ. ಆದರೆ ಅವರ ಡ್ರಾಮಾ ಮತ್ತು ಅತಿಯಾದ ಸಿಟ್ಟಿನ ಬಗ್ಗೆ ಹನುಮಂತ ಅವರು ನೇರವಾಗಿ ಬರೆದ ಪತ್ರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹನುಮಂತ ಅವರ ಈ ಪ್ರಾಮಾಣಿಕತೆಗೆ ಮನೆಯ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ನೀನು ಮಾಡೋ ಡವ್ ಸೂಪರ್’; ಭವ್ಯಾಗೆ ಓಪನ್ ಆಗಿ ಕಾಲೆಳೆದ ಹನುಮಂತ
ಹನುಂತ-ಭವ್ಯಾ
Follow us
ರಾಜೇಶ್ ದುಗ್ಗುಮನೆ
|

Updated on:Jan 23, 2025 | 7:23 AM

ಬಿಗ್ ಬಾಸ್ ಮನೆಯಲ್ಲಿರುವ ಭವ್ಯಾ ಗೌಡ ಟಾಸ್ಕ್​ನಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದಾರೆ ನಿಜ. ಆದರೆ, ಅನೇಕ ಕಡೆಗಳಲ್ಲಿ ಅವರು ಮುಗ್ಗರಿಸಿದ್ದೂ ಇದೆ. ಅವರು ಅನೇಕ ಕಡೆಗಳಲ್ಲಿ ಡ್ರಾಮಾ ಮಾಡುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವಾದರೂ ಅದನ್ನು ದೊಡ್ಮನೆಯಲ್ಲಿ ಹೇಳುವ ಪ್ರಯತ್ನವನ್ನು ಯಾರೂ ಮಾಡಿರಲಿಲ್ಲ. ಆದರೆ, ಹನುಮಂತ ಅವರು ಬರಹದ ಮೂಲಕ ಅವರಿಗೆ ವಿಚಾರವನ್ನು ಮುಟ್ಟಿಸಿದ್ದಾರೆ. ಹನುಮಂತ ಅವರಿಗೆ ಎಲ್ಲರೂ ಭೇಷ್ ಎಂದಿದ್ದಾರೆ.

ಹನುಮಂತ ಅವರು ಯಾವುದೇ ವಿಚಾರ ಇದ್ದರೂ ಅದನ್ನು ನೇರ ಮಾತುಗಳಲ್ಲಿ ಹೇಳುತ್ತಾರೆ. ಹೊರಗೊಂದು ಒಳಗೊಂದು ಎಂಬುದು ಇಲ್ಲ. ಎದುರು ಇದ್ದವರಿಗೆ ಬೇಸರ ಆಗುತ್ತದೆ ಎಂದು ಅವರು ಯಾವಾಗಲೂ ಯೋಚಿಸಿಲ್ಲ. ಆಪ್ತ ಎನಿಸಿಕೊಂಡವರಿಗೆ ಅವರು ಯಾವಾಗಲೂ ಫೇವರಿಸಂ ಮಾಡಿಲ್ಲ. ಈಗ ಭವ್ಯಾಗೆ ‘ಡವ್ ಮಾಡ್ತೀಯಾ’ ಎಂದು ನೇರ ಮಾತುಗಳಲ್ಲಿ ಹೇಳಿ ಗಮನ ಸೆಳೆದಿದ್ದಾರೆ. ಇದು ಚರ್ಚೆಗೆ ಕಾರಣವಾಗಿದೆ.

‘ಬಿಗ್ ಬಾಸ್’ ಕೊನೆಯವಾರದಲ್ಲಿ ರೆಸಾರ್ಟ್ ಮಾದರಿಯ ಸೆಟ್​ನ ಹಾಕಲಾಗಿತ್ತು. ಅಲ್ಲಿ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದರ ಜೊತೆಗೆ ಸ್ಪರ್ಧಿಗಳಿಗೆ ಪತ್ರ ಬರೆದು ಅವರ ಬಗೆಗಿನ ಒಳ್ಳೆಯ ಮಾತನ್ನು ಹೇಳಬೇಕಿತ್ತು. ಹನುಮಂತ ಅವರು ಭವ್ಯಾಗೆ ಪತ್ರ ಬರೆದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ನಿನ್ನ ಆಟ ಸೂಪರ್, ನಿನ್ನ ಮಾತು ಸೂಪರ್, ನಿನ್ನ ನೋಟ ಸೂಪರ್, ನಿನ್ನ ಡ್ಯಾನ್ಸ್ ಸೂಪರ್, ನೀನು ಮಾಡೋ ಡವ್ ಸೂಪರ್. ಆದರೆ, ಸಿಟ್ಟು ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಸಿಸ್ಟರ್’ ಎಂದು ಹನುಮಂತ ಬರೆದಿದ್ದಾರೆ. ಇದಕ್ಕೆ ಭವ್ಯಾ ನಗುತ್ತಲೇ ‘ನಾನೇನು ಡವ್ ಮಾಡಿದೀನಿ’ ಎಂದು ಕೇಳಿದರು. ‘ಈಗ ಮಾಡ್ತಾ ಇದೀಯಲ್ಲ ಇದುವೇ ಡವ್’ ಎಂದರು ಹನುಮಂತ. ಆ ಬಳಿಕ ಭವ್ಯಾಗೆ ಮಾತೇ ಬರಲಿಲ್ಲ. ಹನುಮಂತ ಅವರ ನೇರ ಮಾರಿಗೆ ಎಲ್ಲರೂ ಮೆಚ್ಚುಗೆ ಸೂಚಿಸಿದರು.

ಇದನ್ನೂ ಓದಿ: ‘ಕನ್ನಡದ ನವಾಜುದ್ದೀನ್ ಸಿದ್ಧಿಕಿ’; ಬಿಗ್ ಬಾಸ್ ಫಿನಾಲೆ ಸಮೀಪಿಸಿದಾಗ ಮಂಜುನ ಹೊಗಳಿದ ತ್ರಿವಿಕ್ರಂ

‘ಬಿಗ್ ಬಾಸ್’ನಲ್ಲಿ ಭವ್ಯಾ ಗೌಡ ಅವರು ಮೂರು ಬಾರಿ ಕ್ಯಾಪ್ಟನ್ ಆಗಿದ್ದಾರೆ. ಮೂರು ಬಾರಿ ಕ್ಯಾಪ್ಟನ್ ಆದ ಏಕೈಕ ಸ್ಪರ್ಧಿ ಅವರಾಗಿದ್ದಾರೆ. ಇವರ ಕಪ್ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಈ ಕನಸು ನನಸಾಗುವುದು ಅಷ್ಟು ಸುಲಭದಲ್ಲಿ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:22 am, Thu, 23 January 25

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!