ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್

ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್

ಮಂಜುನಾಥ ಸಿ.
|

Updated on:Jan 22, 2025 | 7:21 PM

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11 ಚಾಲ್ತಿಯಲ್ಲಿದ್ದು, ಈ ಸೀಸನ್ ಬಳಿಕ ಶೋ ಅನ್ನು ನಿರೂಪಣೆ ಮಾಡುವುದಿಲ್ಲ ಎಂದು ಸುದೀಪ್ ಘೋಷಣೆ ಮಾಡಿದ್ದಾರೆ. ಆದರೆ ಸುದೀಪ್ ಏಕೆ ಬಿಗ್​ಬಾಸ್​ ನಿಂದ ದೂರಾಗುತ್ತಿದ್ದಾರೆ ಎಂದು ಯಾರಿಗೂ ಖಾತ್ರಿ ಇಲ್ಲ. ಇದೀಗ ಪ್ರಥಮ್, ಸುದೀಪ್ ಏಕೆ ಬಿಗ್​ಬಾಸ್ ಬಿಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಒಳ್ಳೆ ಹುಡ್ಗ ಪ್ರಥಮ್, ಮಾಜಿ ಬಿಗ್​ಬಾಸ್ ವಿನ್ನರ್. ಸುದೀಪ್​ರಿಂದ ಹೊಗಳಿಸಿಕೊಂಡಿದ್ದೂ ಇದೆ, ಬೈಸಿಕೊಂಡಿದ್ದೂ ಇದೆ. ಬಿಗ್​ಬಾಸ್ ವಿನ್ನರ್ ಆದ ಬಳಿಕವೂ ಕೆಲ ಬಾರಿ ಬಿಗ್​ಬಾಸ್ ಮನೆಗೆ ಹೋಗಿ ಬಂದಿದ್ದಾರೆ ಪ್ರಥಮ್. ಇದೀಗ ಸುದೀಪ್, ತಾವಿನ್ನು ಬಿಗ್​ಬಾಸ್ ಶೋ ನಿರೂಪಣೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಇದಕ್ಕೆ ಕಾರಣ ಏನಿರಬಹುದು ಎಂದು ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಟಿವಿ9 ಜೊತೆಗೆ ಮಾತನಾಡಿರುವ ಪ್ರಥಮ್, ಸುದೀಪ್, ಬಿಗ್​ಬಾಸ್ ಬಿಡಲು ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ. ಬಿಗ್​ಬಾಸ್ ಶೂಟಿಂಗ್​ ಮಾಡಲು ಸುದೀಪ್ ಪಡುವ ಕಷ್ಟ ಹೇಗಿರುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ. ಅಲ್ಲದೆ ಸುದೀಪ್ ಅವರು ಬಿಗ್​ಬಾಸ್ ನಿರೂಪಣೆ ಮುಂದುವರೆಸಬೇಕು ಎಂದು ಮನವಿ ಮಾಡಿಕೊಳ್ಳುವುದಾಗಿಯೂ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 22, 2025 07:18 PM